
ಕೋಲಾರ,ಮೇ.೨೧- ಹದಗೆಟ್ಟಿರುವ ಡಿಸಿಸಿ ಬ್ಯಾಂಕಿನ ಆಡಳಿತವನ್ನು ಸರಿಪಡಿಸಿ ಹೊಸ ರೂಪವನ್ನು ನೀಡಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ, ನಾನು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯ ಉಪವಿಭಾಗಾಧಿಕಾರಿಗಳಿಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾದ್ಯಮದವರೊಂದಿಗೆ ಮಾತನಾಡಿದರು. ನಮ್ಮಲ್ಲಿ ಯಾವುದೇ ಬಣ ಇಲ್ಲ, ಆಯಾ ತಾಲ್ಲೂಕಿನ ಶಾಸಕರುಗಳು ತೀರ್ಮಾನ ಮಾಡಿಕೊಂಡು ಹೈಕಮಾಂಡ್ ಸೂಚನೆಯನ್ನು ಸ್ಫರ್ದಿಸಲಾಗುತ್ತಿದೆ ಎಂದರು.
ಬೇರೆಯವರ ವಿಚಾರ ನನಗೆ ಗೊತ್ತಿಲ್ಲ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಮತ್ತು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಸುಧಾಕರ್ ಅವರ ತೀರ್ಮಾನದಂತೆ ಡಿಸಿಸಿ ಬ್ಯಾಂಕಿಗೆ ಸ್ಪರ್ದಿಸುವವರನ್ನು ಆಯ್ಕೆ ಮಾಡಿದ್ದಾರೆ ಅವರುಗಳು ಮಾತ್ರ ಸ್ಪರ್ದಿಸುತ್ತಿದ್ದಾರೆ ಅದರಲ್ಲಿ ನನಗೂ ಸ್ಪರ್ದಿಸುವಂತೆ ತೀರ್ಮಾನವಾಗಿತ್ತು ಅದರಂತೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.
ನಾನು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ನಿರ್ದೇಶಕ ಸ್ಥಾನದ ಅಕಾಂಕ್ಷಿಯಷ್ಟೆ ಗೆದ್ದ ನಂತರ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಯಾರು ಎಂದು ತಿಳಿಯಲಿದೆ. ನಾನು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಳಬಾಗಿಲು ಟಿಎಪಿಸಿಎಂಎಸ್ ಅಧ್ಯಕ್ಷನಾಗಿ ಸುಮ್ಮನೆ ಡಿಸಿಸಿ ಬ್ಯಾಂಕಿನ ಚುನಾವಣೆ ಸ್ಪರ್ದಿಸುತ್ತಿಲ್ಲ. ಡಿಸಿಸಿ ಬ್ಯಾಂಕಿನಲ್ಲಿ ಅಗಿರುವ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಹಾಗೂ ಡಿಸಿಸಿ ಬ್ಯಾಂಕಿಗೆ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಚುನಾವಣೆ ಸ್ಪರ್ದಿಸಲಾಗುತ್ತಿದೆ ಈ ಬಾರಿ ಒಳ್ಳೆಯ ಆಡಳಿತ ಮಂಡಳಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದರು.
ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ, ಹಾಗಾಗಿ ಹೊಸದಾಗಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಸಾಕಷ್ಟು ಮಹಿಳಾ ಸ್ವ-ಸಹಾಯ ಸಂಘಗಳು ಸಾಲ ಪಡೆದು ಮರುಪಾವತಿ ಮಾಡುತ್ತಿಲ್ಲ, ಅದನ್ನೆಲ್ಲಾ ರಿಕವರಿ ಮಾಡಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವ ವಿಶ್ವಾಸವಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹಂತ ಹಂತವಾಗಿ ಬಗೆಹರಿಸಿಕೊಂಡು ಡಿಸಿಸಿ ಬ್ಯಾಂಕಿನ ಗಥಾ ವೈಭವವನ್ನು ಮರುಕಳುಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಸದಸ್ಯ ಅಂಬರೀಶ್, ಸೂರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ ಶಿವಕುಮಾರ್, ಮುಖಂಡರಾದ ಬಾಲು, ಮೈಲಾಂಡಹಳ್ಳಿ ಮುರಳಿ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲ್ ಗೌಡ, ನಾಗಲಾಪುರ ವೀರೇಂದ್ರ ಪಾಟೀಲ್ ಮುಂತಾದವರು ಇದ್ದರು.