Home ಜಿಲ್ಲೆ ಹೊಸ ಬಸ್ ಸೇವೆಗೆ ಶಾಸಕ ಸಿ ಎಸ್ ನಾಡಗೌಡರಿಂದ ಚಾಲನೆ

ಹೊಸ ಬಸ್ ಸೇವೆಗೆ ಶಾಸಕ ಸಿ ಎಸ್ ನಾಡಗೌಡರಿಂದ ಚಾಲನೆ

ಮುದ್ದೇಬಿಹಾಳ :ಫೆ.9:ಪಟ್ಟಣದಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಮಹಿಳೆಯರು ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ ಎಸ್ ನಾಡಗೌಡ ಅಪ್ಪಾಜಿಯವರ ಸೂಚನೆಯ ಮೇರೆಗೆ ಎರಡು ಹೊಸ ಬಸ್ ಳನ್ನು ಒದಗಿಸಲಾಗಿದೆ.
ಪಟ್ಟಣದ ಸಾರಿಗೆ ಘಟಕದ ಆವರಣದಲ್ಲಿ ಎರಡು ಬಸ್ಸುಗಳಿಗೆ ಚಾಲನೆ ನೀಡಿದ ಶಾಸಕ ಸಿ ಎಸ್ ನಾಡಗೌಡರು ಮಾತನಾಡಿ,
ನಗರ ಸಾರಿಗೆಯಿಂದ ಜನತೆಗೆ ಹೆಚ್ಚಿನ ಅನುಕೂಲವಾಗಿರುವ ಬಗ್ಗೆ ನಮಗೆ ನಮಗೆ ಮಾಹಿತಿ ಬಂದಿದ್ದು, ನಾಗರಿಕರ ಉತ್ತಮ ಸ್ಪಂದನೆಯ ಹಿನ್ನೆಲೆಯಲ್ಲಿ ಎರಡು ಹೊಸ ಬಸ್ಗಳನ್ನು ನೀಡುವಂತೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ವಿನಂತಿಸಿದ್ದೆವು ಆ ಹಿನ್ನೆಲೆಯಲ್ಲಿ ಎರಡು ಹೊಸ ಬಸ್ಸುಗಳನ್ನು ನೀಡಿದ್ದಾರೆ ಸಾರ್ವಜನಿಕರು ಆದಷ್ಟು ಇದರ ಸದುಪಯೋಗವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಸರಕಾರಿ ಜಾಗದಲ್ಲಿ ಹೆಚ್ಚುವರಿ ಡಿಪೆÇೀ ನಿರ್ಮಿಸಲು ಅಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಸರ್ಕಾರದಿಂದ ಮಂಜುರಾತಿಯನ್ನು ಪಡೆದುಕೊಳ್ಳಲಾಗುವುದು. ಬಸ್ ನಿಲ್ದಾಣದ ಕಾಂಕ್ರೀಟ್ ಮತ್ತು ಶೌಚಗ್ರಹವನ್ನು ನಿರ್ಮಿಸಲು ಟೆಂಡರ್ ಕರೆಯಬೇಕಾಗಿದೆ ಎಂದರು.
ವಿಭಾಗಿಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಹಿರೇಕುರುಬರ್, ಘಟಕ ವ್ಯವಸ್ಥಾಪಕ ಅಶೋಕ್ ಕುಮಾರ್ ಬೋವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್ ಡಿ ಹಿರೇಗೌಡರ್, ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ, ಸಂಗಣ್ಣ ಮೇಲಿನಮನಿ, ಮೊಹಮ್ಮದ್ ರಫೀಕ್ ಶಿರೋಳ್, ಹನುಮಂತ ಕುರಿ, ಶೋಭಾ ಶಳ್ಳಗಿ, ಸಿಪಿಐ ಮೊಹಮ್ಮದ್ ಪಸಿಯುದ್ದೀನ್, ಗ್ಯಾರಂಟಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೇರಿದ್ದರು.