
ಸಂಜೆ ವಾಣಿ ವಾರ್ತೆ
ಜಮಖಂಡಿ:ಡಿ.೩:ಮನುಷ್ಯನಿಗೆ ಅರಿವು ಇಲ್ಲದಿದ್ದಾಗ ತಪ್ಪುಗಳನ್ನು ಮಾಡುತ್ತಾನೆ ಅಂತಹ ತಪ್ಪುಗಳು ಆಗದಿರಲು ಇಂತಹ ಅರಿವು ನೆರವು ಆಗಬೇಕು. ಏಡ್ಸದಂತ ಮಾರಕ ಕಾಯಿಲೆಗಳು ಬರದಂತೆ ಮೊದಲೇ ನೋಡಿಕೊಳ್ಳಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮೀತಿ ಅಧ್ಯಕ್ಷ ರಾಜಶೇಖರ ಎಸ್ ಹರಸೂರ ಹೇಳಿದರು.
ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್ಸಿವ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ ಪ್ರತಿಬಂಧಕ ಹಗೂ ನಿಯಂತ್ರಣ ಘಟಕ, ತಾಲೂಕಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕಾಡಳಿತ, ತಾಲ್ಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಉಪವಿಭಾಗೀಯ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ರೆಡ್ ರಿಬ್ಬನ್ ಕ್ಲಬ್, ಇವುಗಳ ಸಹಯೋಗದೊಂದಿಗೆ ಏಡ್ಸ ನಿಯಂತ್ರಣ ದಿನದಂದು ಮಾತನಾಡಿದ ಅವರು ಜೀವನದಲ್ಲಿ ತಪ್ಪು ಮಾಡದೇ ನಿರ್ಮಪವಾದ ಜೀವನ ನಡೆಸಬೇಕು ಎಂದರು.
ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸಬೇಕಾಗಿದೆ. ಕಾನೂನಿನ ಅಜ್ಞಾನತೆ ಕ್ಷಮಾದಾನವಲ್ಲ ಅದಕ್ಕಾಗಿ ಅದರ ಬಗ್ಗೆ ಅರಿವು ಇರಿಸಕೊಳ್ಳಬೇಕು. ಕಾನೂನುನನ್ನು ಅರಿತು ನಡೆಯಬೇಕು. ಕಾನೂನಾತ್ಮಕ ಸಂಘರ್ಷಗಳನ್ನು ಬಡವರಿಗೆ ಉಚಿತ ಕಾನೂನು ನೆರವನ್ನು ನೀಡಲಾಗುವದು ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧಿಶ, ತಾಲೂಕು ಕಾನೂನು ಸೇವಾ ಸಮೀತಿ ಸದಸ್ಯ ಕಾರ್ಯದರ್ಶಿ ಆರ್ಶದ ಎ ಅನ್ಸಾರಿ ಮಾತನಾಡಿ ಏಡ್ಸ್ ದಿನಾಚರಣೆ ಆಚರಿಸುವ ಉದ್ದೇಶ ಕೇವಲ ಎಚ್.ಐ.ವ್ಹಿ ಇರುವ ವ್ಯಕ್ತಿಗಳಿಗೆ ಹಾಗೂ ಇತರ ವ್ಯಕ್ತಿಗಳಿಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಈ ದಿನ ಆಚರಣೆ ಮಾಡುತ್ತೆವೆ ೧೯೮೧ ರಲ್ಲಿ ಮೊಟ್ಟ ಮೊದಲಿಗೆ ಅಮೇರಿಕಾದ ಲಾಸ್ ಏಂಜಲೀಸ್ ಪ್ರದೇಶದಲ್ಲಿ ವ್ಯಕ್ತಿಯೋರ್ವನಲ್ಲಿ ಹೆಚ್‌ಐವಿ ಸೋಂಕು ಕಂಡು ಬಂದಿತು. ಇದೊಂದು ಮಾರಣಾಂತಿಕ ಸೋಂಕಾಗಿದ್ದು ಈ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಂತ್ರಣ ಸಾಧಿಸುವ ಸಲುವಾಗಿ ೧೯೮೮ ರಿಂದ ವಿಶ್ವ ಏಡ್ಸ್ ದಿನಾಚರಣೆ ಮಾಡಲಾಗುತ್ತಿದೆ.ಸೋಂಕಿತರನ್ನು ಕಾಳಜಿಯಿಂದ ನೋಡಿಕೊಳ್ಳುವ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ತರಬೇಕು. ಮುಂಜಾಗ್ರತೆ ಅರಿವು ಮೂಡಿಸಿದಾಗ ರೋಗ ತಡೆಯಲು ಸಾಧ್ಯ. ರಾಜ್ಯದಲ್ಲಿ ಎಚ್‌ಐವಿ ತಡೆಯಲು ೨೦೧೭ರಲ್ಲಿ ಕಾಯ್ದೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಸೋಂಕಿತರನ್ನು ತಾರತಮ್ಯ ಮಾಡುವಂತಿಲ್ಲ. ತಾರತಮ್ಯ ಮಾಡುವುದು ಶಿಕ್ಷಾರ್ಹ ಅಪರಾಧ. ಮೂರು ತಿಂಗಳಿAದ ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ?೧ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ’ ಎಂದು ಹೇಳಿದರು.
ಡಾ ಎಚ್,ಜಿ, ದಡ್ಡಿ ಮಾತನಾಡಿ ಹೆಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಮತ್ತು ಸಿರಂಜ್ ಬಳಕೆ, ತಪಾಸಣೆಗೊಳಪಡಿಸದ ರಕ್ತ ಮತ್ತು ಅದರ ಪದಾರ್ಥಗಳು ಹಾಗೂ ಗರ್ಭದಿಂದ ತಾಯಿಯಿಂದ ಮಗುವಿಗೆ ಈ ನಾಲ್ಕು ಮಾರ್ಗಗಳಿಂದ ಬರುತ್ತದೆ. ಆದರೆ ಇತ್ತೀಚಿನ ಸುಧಾರಣೆಗಳಿಂದಾಗಿ ರಕ್ತ, ಸೂಜಿ ಮತ್ತು ತಾಯಿಯಿಂದ ಮಗುವಿಗೆ ಬರುವುದನ್ನು ನಿಯಂತ್ರಿಸಲಾಗಿದೆ. ಆದರೆ ಜನರು ತಮ್ಮ ಅರಿವನ್ನು ಹೆಚ್ಚಿಸಿಕೊಂಡು ಅಸುರಕ್ಷಿತ ಲೈಂಗಿಕತೆಯಿAದ ಸೋಂಕು ತಗುಲುವುದನ್ನು ನಿಯಂತ್ರಿಸಬೇಕು. ಲೈಂಗಿಕತೆಯ ಮಡಿವಂತಿಕೆಯಿAದ ಕೂಡ ಈ ಸೋಂಕು ಹೆಚ್ಚಾಗುತ್ತಿದ್ದು ಈ ಬಗ್ಗೆ ಶಿಕ್ಷಣ ಮತ್ತು ಅರಿವು ಹೆಚ್ಚಾಗಬೇಕು ಎಂದ ಅವರು ನಿಯಮಿತ ಚಿಕಿತ್ಸೆಯಿಂದ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.
ಓಲೇಮಠದ ಆನಂದ ದೇವರು ಆಶಿರ್ವಚನ ನೀಡಿದರು.
ಜಿ.ಜಿ.ಕಾಲೆಜಿನ ಪ್ರಾಚಾರ್ಯ ಎಸ್.ಆರ್.ನಾಯಿಕೊಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ ಗೈಬುಸಾಬ ಗಲಗಲಿ, ಮುಖ್ಯ ವೈದ್ಯಾಧಿಕಾರಿ ವ್ಹಿ.ಎಚ್.ಮುದೆಗೌಡರ, ಡಾ.ವಿದ್ಯಾಶ್ರೀ ಇನ್ನಿತರರಿದ್ದರು.
ಶಿಕ್ಷಕ ಬಿ.ಸಿ ಮಲಕನ್ನವರ ನಿರೂಪಿಸಿದರು, ಶಿಕ್ಷಕಿ ಪಿ.ಎಸ್.ವಿಟೇಕರ ಸ್ವಾಗತಿಸಿದರು, ಡಾ.ಗೌತಮಿ ಅಚ್ಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹೊಸಮನಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಜಾಗೃತಿ ಜಾಥಾ
ಕಾರ್ಯಕ್ರಮಕ್ಕೂ ಮುಂಚೆ ನಗರದ ದೇಸಾಯಿ ವೃತ್ತದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಓಲೆಮಠದ ಶ್ರೀ ಆನಂದ ದೇವರು ತಹಶಿಲ್ದಾರ ಅನೀಲ ಬಡಗೇರ ತಾಲೂಕಾ ವೈದ್ಯಾಧಿಕಾರಿ ಡಾ.ಗೈಬುಸಾಬ ಗಲಗಲಿ ಚಾಲನೆ ನೀಡಿದರು. ದೇಸಾಯಿ ವೃತ್ತದಿಂದ ಪ್ರಾರಂಭಗೊAಡ ಜಾಗೃತಿ ಜಾಥಾ ನಗರದ ಅಶೋಕ ವೃತ್ತ ಹನುಮಾನ ಚೌಕ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಸರಕಾರಿ ಪ್ರೌಡಾ ಶಾಲೆಯಲ್ಲಿ ಮುಕ್ತಾಯಗೊಂಡಿತು.ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಗಳು ವಿದ್ಯಾರ್ಥಿಗಳು ಘೋಷಣಾ ಫಲಕದೊಂದಿಗೆ ಭಾಗವಹಿಸಿದ್ದರು.

























