ಬೀದರ:ಅ.15: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವರಾದ ಸನ್ಮಾನ್ಯ ಶ್ರಿ ಪ್ರಿಯಾಂಕ್ ಖರ್ಗೆ ಅವರಿಗೆ ಕಳೆದ ಎರಡ್ಮೂರು ದಿನಗಳಿಂದ ಕೊಲೆ ಬೆದರಿಕೆ, ದೂರವಾಣಿ ಮೂಲಕ ಭಯ ಹುಟ್ಟಿಸುವ ಕಾರ್ಯ ನಿರಂತರವಾಗಿ ನಡೆದಿದ್ದು, ಕೂಡಲೆ ಖರ್ಗೆ ಮತ್ತು ಕಟುಂಬದವರಿಗೆ ಝಡ್‍ಪ್ಲಸ್ ಭದ್ರತೆ ನೀಡಬೇಕು. ಇವರು ಕಲ್ಯಾಣ ಕರ್ನಾಟಕ ಭಾಗದ ಜನಪ್ರಿಯ ನಾಯಕರಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಎಲ್ಲ ಸಮುದಾಯಗಳನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದಾರೆ.
ಸನ್ಮಾನ್ಯ ಪ್ರಿಯಾಂಕ್ ಖರ್ಗೆಯವರು ಬುದ್ಧ-ಬಸವ-ಅಂಬೇಡ್ಕರರವರ ವಿಚಾರಧಾರೆಯಂತೆ ಸರ್ವರ ಏಳ್ಗೆಯನ್ನು ಬಯಸಿ ಅವರ ಮಾರ್ಗದಲ್ಲಿ ಮುನ್ನಡೆಯುತಿದ್ದಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ರಾಜಕೀಯ ದುರುದ್ದೇಶದಿಂದ ಟಾರ್ಗೆಟ್ ಮಾಡಿ ಅವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತಿದ್ದಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಇದನ್ನು ಗಂಭೀüರವಾಗಿ ಪರಿಗಣಿಸಿ ಕೂಡಲೆ ಇವರಿಗೆ ಮತ್ತು ಇವರ ಕುಟುಂಬಕ್ಕೆ ಝಡ್‍ಪ್ಲಸ್ ಭದ್ರತೆ ನೀಡುವುದಲ್ಲದೆ ಕಿಡಿಗೇಡಿಗಳನ್ನು ಶಿಘ್ರವೆ ಬಂಧಿಸುವಂತೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಘದ ಬೀದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಥ್ವಿರಾಜ್ ಎಸ್. ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳವರಲ್ಲಿ ಮನವಿ ಮಾಡಿಕೊಂಡಿದ್ದಾರೆ.



























