ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಸಚಿವ ಪ್ರಿಯಾಂಕ್ ಖರ್ಗೆಗೆ ಸನ್ಮಾನ

ಚಿತ್ತಾಪುರ;ಜೂ.೨೯: ಪುರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಜಗದೀಶ್ ಚವ್ಹಾಣ ಅವರ ನೇತೃತ್ವದಲ್ಲಿ ಬಂಜಾರ ಸಮಾಜದ ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ ನಿವಾಸದಲ್ಲಿ ಸನ್ಮಾನಿಸಿ ಕೃತಜ್ಞತೆಗಳು ಸಲ್ಲಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಂಜಾರ ಸಮಾಜಕ್ಕೆ ಅವಕಾಶ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಪುಸ್ತಕ ಮತ್ತು ಸಿಹಿಯನ್ನು ಹಂಚಿ ಧನ್ಯವಾದಗಳು ಸಲ್ಲಿಸಿ ಗೌರವಿಸಲಾಯಿತು ಎಂದು ಜಗದೀಶ್ ಚವ್ಹಾಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಮುಖಂಡರಾದ ಅರವಿಂದ್ ಚವ್ಹಾಣ, ಚಂದು ಜಾಧವ, ದೇವಿದಾಸ್ ಚವ್ಹಾಣ, ರವಿ ಜಾಧವ, ಸೀತಾರಾಮ ರಾಠೋಡ, ಶರಣಕುಮಾರ್ ಚವ್ಹಾಣ, ಮಹದೇವ್ ರಾಠೋಡ, ವಿಜಯಕುಮಾರ ಚವ್ಹಾಣ, ರಾಜು ಗೌಳಿ ಇದ್ದರು.
ಇದೇ ಸಂದರ್ಭದಲ್ಲಿ ಸಂಸಧ ರಾಧಾಕೃಷ್ಣ ದೊಡ್ಡಮನಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.