ಸಚಿವ ಎಂ.ಬಿ. ಪಾಟೀಲರ ಪುತ್ರ ಧ್ರುವÀ ನ್ಯೂಯಾರ್ಕ್ ವಿವಿಗೆ ಟಾಪರ್

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.೧೮: ವಿಜಯಪುರದ ಧ್ರುವ ಎಂ. ಪಾಟೀಲ ಅಮೆರಿಕದ ಪ್ರಖ್ಯಾತ ನ್ಯೂಯಾರ್ಕ್ ವಿಶ್ವವಿದ್ಯಾಲಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಬಿ.ಎಲ್.ಡಿ ಇ ಸಂಸ್ಥೆ ಅಧ್ಯಕ್ಷ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಕಿರಿಯ ಪುತ್ರನಾಗಿರುವ ಧ್ರುವ ಎಂ. ಪಾಟೀಲ ಅಮೆರಿಕದ ನ್ಯೂಯಾರ್ಕ್ ವಿವಿಯಲ್ಲಿ ಬ್ಯಾಚರ್ ಆಫ್ ಸೈನ್ಸ್ ಪದವಿಯನ್ನು ನ್ಯೂಯಾರ್ಕ್ ವಿವಿಗೆ ಟಾಫ್ ೫ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, ಮೇ. ೧೫ರಂದು ನಡೆದ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ, ಧ್ರುವ ಎಂ. ಪಾಟೀಲ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವನ್ಯ ಜೀವಿ ರಕ್ಷಣೆ, ಪರಿಸರ ಜಾಗೃತಿ, ಬೀದಿ ಬದಿ ಪ್ರಾಣಿಗಳ ರಕ್ಷಣೆ ಕುರಿತು ಸದಾ ಮುಂದಿರುವ ಧ್ರುವ ಎಂ. ಪಾಟೀಲ ಅತ್ಯುತ್ತಮ ಛಾಯಾಚಿತ್ರಕಾರರಾಗಿದ್ದಾರೆ. ಅಲ್ಲದೆ, ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆಂಡ್ ಅನಿಮಲ್ಸ್ ಎನ್ ಜಿ ಓ ದ ಮುಖ್ಯಸ್ಥರಾಗಿದ್ದಾರೆ.
ಧ್ರುವ ಎಂ. ಪಾಟೀಲ್ ಅವರ ಸಾಧನೆಗೆ ವಿಜಯಪುರದ ಬಿ.ಎಲ್.ಡಿ.ಇ ಆಡಳಿತ ಮಂಡಳಿ ಹಾಗೂ ಎಂ.ಬಿ. ಪಾಟೀಲ ಅಭಿಮಾನಿಗಳು ಅಭಿನಂದಿಸಿದ್ದಾರೆ.