ಕಾಳಗಿ : ಅ.೧೯:ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಆರ್.ಎಸ್. ಎಸ್. ಕಾರ್ಯಕರ್ತರಿಂದ ದೂರವಾಣಿ ಮೂಲಕ ಜೀವ ಬೆದರಿಕೆ ಬಂದಿರುವ ಕುರಿತು ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕಾಳಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಜೇಶ ಗುತ್ತೇದಾರ ಅವರು ಆರ್.ಎಸ್. ಎಸ್. ಸಂಘ ಪರಿವಾರದವರು ರಾಷ್ಟ್ರರಕ್ಷಣೆ ಧರ್ಮ ರಕ್ಷಣೆ ಮತ್ತು ಗೋ ರಕ್ಷಣೆ ಎಂಬ ಹೆಸರಿನಲ್ಲಿ ಗಣವೇಶಧಾರಿಗಳ ಮೂಲಕ ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನ ನಡೆಸಿ, ಬೈಠಕ್ ಮಾಡುವ ಹೆಸರಿನಲ್ಲಿ ಸಮಾಜದಲ್ಲಿ ಕೋಮುವಾದಿ ವಿಷಬೀಜ ಬಿತ್ತುವ ಮೂಲಕ ಜನರಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಮಾತಾಡಿ ಸೌಹಾರ್ದತೆ ಕಾಪಾಡಲು ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ನಿಟ್ಟಿನಲ್ಲಿ ಆರ್. ಎಸ್. ಎಸ್. ಸಂಘದ ಅನಾಮದೇಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಮೂಲಕ ಸಚಿವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕುತ್ತಿರುವದನ್ನು ಮತ್ತು ಅಪಮಾನ ಮಾಡುತ್ತಿರವದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ, ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಶಿವಶರಣಪ್ಪ ಕಮಲಾಪುರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಡೊಣ್ಣೂರ, ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೋಟಗಿ, ಎಸ್. ಸಿ. ಘಟಕ ಅಧ್ಯಕ್ಷ ಶಂಕರ ಹೇರೂರ, ಎನ್.ಎಸ್.ಯು.ಐ ಅಧ್ಯಕ್ಷ ಅವಿನಾಶ ಕೊಡದೂರ, ಶರಣು ಮಜ್ಜಗಿ, ದಿನೇಶ ಮೋಘಾ, ಚಿಂತನ ರಾಠೋಡ, ಸಂತೋಷ ಪತಂಗೆ, ಸಂತೋಷ ಕಡಬುರ, ವಿಠ್ಠಲ್ ಸೇಗಾಂವಕರ, ಅಮೃತರಾವ ಪಾಟೀಲ, ರವಿದಾಸ ಪತಂಗೆ, ಸಂತೋಷ ನರನಾಳ, ಬಸವರಾಜ ಮಡಿವಾಳ, ದತ್ತು ಗುತ್ತೇದಾರ, ಪರಮೇಶ್ವರ ಕಟ್ಟಿಮನಿ, ಸಂಗಮೇಶ ಬಡಿಗೇರ, ಶಿವಕುಮಾರ ಚಿಂತಕೋಟಿ, ಪರಮೇಶ್ವರ ಮಡಿವಾಳ, ಬಾಬುರಾವ ಡೊಣ್ಣೂರ, ಮಲ್ಲಿಕಾರ್ಜುನ ಗವಾರ, ರೇವಣಸಿದ್ಧಪ್ಪ ಕಟ್ಟಿಮನಿ, ತಾಯಪ್ಪ ದಂಡಗುಲ್ಕರ್, ರಂಗಪ್ಪ ಜಾಧವ, ಕೃಷ್ಣ ಕಟ್ಟಿಮನಿ, ಪ್ರದೀಪ್ ಹೇರೂರ ಸೇರಿದಂತೆ ಅನೇಕರಿದ್ದರು.

























