ಬ್ರಿಮ್ಸ್ ಹಾಳಾಗಲು ಸಚಿವ ಖಂಡ್ರೆ ಕಾರಣ

ಬೀದರ್: ನ.5:ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ಬ್ರಿಮ್ಸ್) ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗಡಿ ಭಾಗದ ಜಿಲ್ಲಾ ಕೇಂದ್ರದಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಇದೀಗ ಅಕ್ರಮ, ಭ್ರμÁ್ಟಚಾರ, ಅವ್ಯವಸ್ಥೆಯ ಗೂಡಾಗಿದೆ. ಮೊದಲ ಬಾರಿಗೆ ಬ್ರಿಮ್ಸ್ ಈ ಪರಿಯಾಗಿ ಹಳಿ ತಪ್ಪಿ ಹಾಳಾಗಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅಸಡ್ಡೆ, ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಪ್ರಭು ಚವ್ಹಾಣ್, ಶರಣು ಸಲಗರ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್ ದೂರಿದ್ದಾರೆ.

ಬ್ರಿಮ್ಸ್ ವ್ಯವಸ್ಥೆ ಹಾಳಾಗಿದೆ. ಇಲ್ಲಿ ಭ್ರμÁ್ಟಚಾರ ಹೆಚ್ಚಾಗಿದೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೂರು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದು ವಿನಂತಿ ಮಾಡಿದ್ದರು. ಮಾಧ್ಯಮಗಳಲ್ಲಿ ಸಹ ಈ ಕುರಿತು ವರದಿ ಬಂದಿವೆ. ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರ, ಅದರಲ್ಲಿನ ಅಂಶಗಳನ್ನು ನೋಡಿದರೆ ಖಂಡ್ರೆ ಅವರು ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಎμÉ್ಟೂಂದು ಅಸಹಾಕರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅμÉ್ಟೀ ಅಲ್ಲ, ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತುಕೊಂಡು ಒಂದು ಆಸ್ಪತ್ರೆ ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಇದು ಸಚಿವರ ವೈಫಲ್ಯತೆ ಹಾಗೂ ನಿಷ್ಕ್ರಿಯತೆಯೂ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

ಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತು ಎರಡೂವರೆ ವರ್ಷವಾಗುತ್ತಿದೆ. ಈ ಮುಂಚೆ ಸಹ ಎರಡು ವರ್ಷ ಅವರು ಸಚಿವರಾಗಿದ್ದರು. ಜಿಲ್ಲೆಯಲ್ಲಿನ ಎಲ್ಲ ಆಗುಹೋಗು ಜವಾಬ್ದಾರಿ ಉಸ್ತುವಾರಿ ಸಚಿವರ ಹೆಗಲ ಮೇಲಿರುತ್ತದೆ. ಆದರೆ ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಸಚಿವರು ನನ್ನಿಂದ ಏನೂ ಸಾಧ್ಯವಾಗುತ್ತಿಲ್ಲ. ನೀವೇ ಇದು ಸುಧಾರಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರಿಗೆ ಅಂಗಲಾಚಿರುವುದು ನೋಡಿದರೆ, ಬ್ರಿಮ್ಸ್ ಭ್ರಷ್ಟ ವ್ಯವಸ್ಥೆಯ ಮುಂದೆ ಸಚಿವ ಖಂಡ್ರೆಯವರು ಮಂಡಿಯೂರಿದರೆ ಎಂಬ ಅನುಮಾನ ಮೂಡುತ್ತದೆ ಎಂದು ಟೀಕಿಸಿದ್ದಾರೆ.

ಕಳೆದ ಅನೇಕ ತಿಂಗಳಿನಿಂದ 750 ಹಾಸಿಗೆ ಸಾಮಥ್ರ್ಯದ ಬ್ರಿಮ್ಸ್ ಆಸ್ಪತ್ರೆ ಬಗ್ಗೆ ಸಾರ್ವಜನಿಕರು, ರೋಗಿಗಳಿಂದ ನಿರಂತರವಾಗಿ ದೂರು ಬರುತ್ತಿವೆ. ಮಾಧ್ಯಮಗಳಲ್ಲಿ ಸತತವಾಗಿ ಈ ಬಗ್ಗೆ ಸುದ್ದಿಗಳು ಬರುತ್ತಿವೆ. ಇಡೀ ಸರ್ಕಾರದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ನಿಟ್ಟಿನಲ್ಲಿ ಬ್ರಿಮ್ಸ್ ವ್ಯವಸ್ಥೆ ಹಾಳಾಗಿದೆ. ಖುದ್ದು ಸಚಿವ ಖಂಡ್ರೆ ಅವರು ಸಹ ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಬ್ರಿಮ್ಸ್ ನಿತ್ಯ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮುಜುಗರಕ್ಕೆ ಸಿಲುಕಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ಹಾಗಾದರೆ ಈ ಮುಜುಗರದ ಪರಿಸ್ಥಿತಿ ನಿರ್ಮಾಣ ಆಗುವವರೆಗೆ ನೀವು ಯಾಕೆ ಸುಮ್ಮನಿದ್ದಿರಿ? ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಸ್ಪತ್ರೆ ಸಮಸ್ಯೆ ನಿವಾರಿಸುವ, ಅಕ್ರಮ, ಭ್ರμÁ್ಟಚಾರಕ್ಕೆ ಕಡಿವಾಣ ಹಾಕುವ, ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಕೊಡಿಸುವ ಹೊಣೆ ನಿಮ್ಮದಿಲ್ಲವೆ? ಇದಕ್ಕೆ ಖಂಡ್ರೆ ಅವರೇ ಉತ್ತರಿಸಬೇಕು ಎಂದು ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದರೆ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸ ಮುಗಿತಾ? ಹಾಗಾದರೆ ಜಿಲ್ಲೆಗೆ ಉಸ್ತುವಾರಿ ಸಚಿವರು ಏಕೆ ಬೇಕು? ಆಸ್ಪತ್ರೆಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ಅದಕ್ಕೆ ಸರ್ಜರಿ ಮಾಡಿ ಜನಹಿತ, ರೋಗಿಗಳ ಹಿತ ಕಾಪಾಡುವುದು ನಿಮ್ಮ ಹೊಣೆ? ಎರಡೂವರೆ ವರ್ಷದಿಂದ ಈ ಕಡೆ ಇಣುಕಿ ನೋಡಿಲ್ಲ. ಇಲ್ಲಿ ಏನಾಗುತ್ತಿದೆ? ಏನು ಮಾಡಬೇಕಿದೆ ಎಂಬ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಸಂಬಂಧಿತ ಇಲಾಖೆ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಇಲ್ಲಿಗೆ ಕರೆಯಿಸಿ ಸಭೆ ನಡೆಸಿ ಅವ್ಯವಸ್ಥೆಗೆ ಚಾಟಿ ಬೀಸುವ ಕೆಲಸ ಮಾಡಿಲ್ಲ. ಇದರ ಪರಿಣಾಮ ಇಂದು ಬ್ರಿಮ್ಸ್ ಆಸ್ಪತ್ರೆ ಸುಧಾರಣೆಯಾಗದ ರೀತಿಯಲ್ಲಿ ಅವ್ಯವಸ್ಥೆ ಗೂಡಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಕ್ರಮ ನಡೆದಿದೆ ಎಂದು ನೀವೇ ಹೇಳುತ್ತಿರುವಿರಿ. ಹಾಗಾದರೆ ನೇಮಕಾತಿ ನಡೆಯುವ ಮುನ್ನ ಇತ್ತ ಗಮನಹರಿಸಿಲ್ಲವೇಕೆ? ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಬ್ರಿಮ್ಸ್ ಸ್ವಾಯತ್ತ ಸಂಸ್ಥೆ ಎನಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಟ್ಟಿಲ್ಲ. ಜಿಲ್ಲಾಡಳಿತಕ್ಕೂ ಮೇಲಿಲ್ಲ. ಜನರ ಹಿತದಿಂದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ಇಲಾಖೆ, ಸಂಸ್ಥೆ ಉಸ್ತುವಾರಿಯನ್ನು ನೋಡಬೇಕಾಗುತ್ತದೆ. ಸಚಿವರು ಇದರ ಬಗ್ಗೆ ಗಂಭೀರತೆ ಪ್ರದರ್ಶಿಸಿಲ್ಲ, ಜಿಲ್ಲಾಡಳಿತವೂ ಕೇರ್ ಮಾಡಿಲ್ಲ. ಹೀಗಾಗಿ ನಿತ್ಯ ಇಲ್ಲಿ ದೂರು, ಆರೋಪಗಳು ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ.

ಈ ಭಾಗದ ಹೃದಯ ರೋಗಿಗಳಿಗೆ ವರದಾನ ಆಗಬೇಕಾದ ಕ್ಯಾಥ್ ಲಾಬ್ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಇದರ ಉದ್ಘಾಟನೆ ಮುಖ್ಯಮಂತ್ರಿ ಕೈಯಿಂದಲೇ ಮಾಡಿಸಲಾಗಿದೆ. ಆದರೆ ಈವರೆಗೆ ಇದು ಆರಂಭವಾಗಿಲ್ಲ. ಬಹುತೇಕ ಪೀಠೋಪಕರ ತುಕ್ಕು ಹಿಡಿಯುತ್ತಿವೆ. ಹೃದ್ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಹೈರಾಣಾಗುತ್ತಿದ್ದಾರೆ. ಬಡವರು ಹಣವಿಲ್ಲದೆ ಜೀವವೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಆದರೆ ಇಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುತ್ತಿಲ್ಲ. ಇದೇ ರೀತಿ ಎಂಆರ್ ಐ, ಸಿಟಿ ಸ್ಕ್ಯಾನ್ ಮಾಡುವ ಸಮಸ್ಯೆಯಿದೆ. ಹೀಗೆ ಏಕೆ? ಖಾಸಗಿ ವೈದ್ಯರ, ಆಸ್ಪತ್ರೆಗಳ ಒತ್ತಡದಿಂದ ಹೀಗಾಗುತ್ತಿದ್ದೆಯೇ ಎಂದು ಪ್ರಶ್ನಿಸಿದ್ದಾರೆ.

ಮಳೆ ಬಂದರೆ ಬ್ರಿಮ್ಸ್ ಆಸ್ಪತ್ರೆ ನೆಲಮಹಡಿ ಸಂಪೂರ್ಣ ನೀರಿನಿಂದ ತುಂಬುತ್ತದೆ. ಇತ್ತೀಚೆಗೆ ಅತಿವೃಷ್ಟಿಯಾದಾಗ ಸುಮಾರು ಒಂದು ತಿಂಗಳು ನೆಲಮಹಡಿ ನೀರಿನಲ್ಲೇ ಇತ್ತು. ಇದರಿಂದ ಬಹುಮಹಡಿ ಕಟ್ಟಡದ ಬುನಾದಿ ಹಾಳಾಗುವ ಆತಂಕವಿದೆ. ಇನ್ನು ಸುಮಾರು 125 ಕೋಟಿ ರೂ.ಖರ್ಚು ಮಾಡಿ ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕಟ್ಟಲಾಗಿದೆ. ಇಪ್ಪತ್ತು ವರ್ಷದೊಳಗಡೆಯೇ ಕಟ್ಟಡದ ಬಹುತೇಕ ಕಡೆ ಲಿಕೇಜ್ ಶುರುವಾಗಿವೆ. ಅನೇಕ ಕಡೆ ಬಿರುಕು ಕಾಣಿಸುತ್ತಿವೆ. ಕಳಪೆ ಕಾಮಗಾರಿ ಸಹ ನಡೆದಿರುವುದು ಕಾಣುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವ ಜೊತೆಗೆ ಎಲ್ಲ ನಿರ್ವಹಣೆ ಕೆಲಸ ತಕ್ಷಣ ಗುತ್ತಿಗೆ ಸಂಸ್ಥೆಯಿಂದ ಮಾಡಿಸಿ ಮುಂದಾಗುವ ಅನಾಹುತಗಳು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದರೆ ನಿಮ್ಮ ಕೆಲಸ ಮುಗಿಯಿತು ಎಂಬುದು ಸರಿಯಾದ ಧೋರಣೆ ಅಲ್ಲ. ಉಸ್ತುವಾರಿ ಸಚಿವರಾಗಿ ನೀವೇನು ಮಾಡಿತ್ತಿರುವಿರಿ ಎಂಬುದು ಮುಖ್ಯವಾಗುತ್ತದೆ. ಸಚಿವರಿಗೆ ಪತ್ರ ಬರೆದು ಅಸಹಾಯಕತೆ ತೋರಿಸಿದ್ದು ಸರ್ಕಾರದ ಆಡಳಿತ ವ್ಯವಸ್ಥೆಯೇ ಹಾಳಾಗಿದೆ ಎಂಬುದು ಸ್ಪಷ್ಟಪಡಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಇದರ ನೈತಿಕ ಹೊಣೆ ಹೊತ್ತು ನೀವು ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ. ಬ್ರಿಮ್ಸ್ ಬಗ್ಗೆ ತನಿಖೆ ನಡೆಯಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ. ವ್ಯವಸ್ಥೆ ಸಂಪೂರ್ಣ ಸುಧಾರಣೆಯಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಈ ನಿಟ್ಟಿನಲ್ಲಿ ಪಕ್ಷ ಜನಹಿತದಿಂದ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.