
ಬೀದರ: ನಗರದ ಬಿವ್ಹಿಬಿ ಕಾಲೇಜಿನಲ್ಲಿ 2026ರ ಅಕ್ಟೋಬರ್ 17 ಮತ್ತು 18 ರಂದು ಜರುಗಲಿರುವ ಬೀದರ ದಸರಾ ಪತಂಗ್ ಉತ್ಸವ 2026ಕ್ಕೆ ಬೀದರ ಪತಂಗ್ ಉತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ವಾಲಿಯವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರನ್ನು ಪತಂಗ್ ನೀಡುವ ಮೂಲಕ ಅಹ್ವಾನಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ವಿಜಯದ ಸಂಕೇತವಾದ ದಸರಾ ಹಬ್ಬದಲ್ಲಿ ಪತಂಗ ಹಾರಿಸುವುದು ನಮ್ಮ ಸಂಸ್ಕøತಿ ನಮ್ಮ ಪರಂಪರೆ, ಆದರೆ ಕಳೆದ ವರ್ಷದಲ್ಲಿ ಬೀದರನಲ್ಲಿ ಮಾಂಜಾದಿಂದ ಓರ್ವ ವ್ಯಕ್ತಿಯ ಸಾವಿಗಿದ್ದು, ಇಂತಹ ಅಹಿತಕರ ಘಟನೆಗೆ ಅವಕಾಶ ನೀಡದೇ ಮುಂಜಾಗೃತ ಕ್ರಮಗಳನ್ನು ವಹಿಸಬೇಕು. ಪತಂಗ್ ಉತ್ಸವ ಸಮಿತಿಯು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ವಿಜೃಂಭಣೆಯಿಂದ ವಿಜಯದಶಮಿ ಹಬ್ಬ ಆಚರಿಸಿ ಎಂದು ಪತಂಗ್ ಉತ್ಸವ ಸಮಿತಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಪತಂಗ್ ಉತ್ಸವ ಸಮಿತಿಯ ಸದಸ್ಯರಾದ ಪ್ರಕಾಶ ಟೊಣ್ಣೆ, ರವಿ ಮೂಲಗೆ, ಹಾವಶೆಟ್ಟಿ ಪಾಟೀಲ, ವಿಜಯಕುಮಾರ ಪಾಟೀಲ ಯರನಳ್ಳಿ, ಸುರೇಶ್ ಚನ್ನಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





















