ಕಮಲನಗರ :ಅ.೩೦:ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾ ಸೌಧ ಮಂಗಳವಾರ ಪರಿಸರ ಜೀವ ಶಾಸ್ತ್ರ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರಿಂದ ಶಂಕು ಸ್ಥಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಬೀದರ ಜಿಲ್ಲೆಯ ಹೊಸ ತಾಲೂಕುಗಳ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಜನರಿಗೆ ಸುಗಮ ಮತ್ತು ಪರಿಣಾಮಕಾರಿ ಆಡಳಿತ ಒದಗಿಸಲು ನೂತನ ಆಡಳಿತ ಸೌಧಗಳ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಮಲನಗರ ನಗರದ ಖತಗಾಂವ ಕ್ರಾಸ್ ರಸ್ತೆ ಬಳಿ ಸುಮಾರು ೮.೬೦.ಕೊಟ್ಟಿರೂಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಪ್ರಜಾ ಸೌಧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬೀದರ್ ಜಿಲ್ಲೆಯ ಕಮಲನಗರ ಹುಲಸುರ ಹಾಗೂ ಚಿಟ್ಟಗುಪ್ಪ ತಾಲೂಕು ಗಳಲ್ಲಿ ಆಡಳಿತ ಭವನದ ಅಗತ್ಯವನ್ನು ಮನಗಂಡು ಈ ತಾಲುಕಿನಲ್ಲಿ ಪ್ರಜಾಸೌಧ ಕಚೇರಿ ಕಟ್ಟಡ ಕಾಮಗಾರಿ ಆರಂಭಗೊAಡಿದೆ ಎಂದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ ಕಮಲನಗರ ತಾಲೂಕಿನ ಎಲ್ಲಾ ಕೇಂದ್ರ ಕಚೇರಿಗಳು ಪ್ರಜಾ ಸೌಧ ಕಟ್ಟಡದಲ್ಲಿ ಆರಂಭಿಸಬೇಕು ಅದು ಕಾಮಗಾರಿ ಕಾಲದ ಮಿತಿಯೊಳಗೆ ಮತ್ತು ಗುಣಮಟ್ಟದಿಂದ ಕೂಡಿದ್ದು ಇರಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲಾ ಮಹೇಶ ಸಜ್ಜನ,ಆಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಪಂ ಸಿಇಒ ಡಾ ಗಿರೀಶ್ ಬದೋಲೆ ಬೀದರ ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್ ಬಾಬು ಹೋನ್ನಾನಾಯಕ ಹಣಮಂತರಾವ ಚೌವ್ಹಾಣ್ ಡಾಭೀಮಸೇನರಾವಸಿಂಧೆ ತ.ಸೀಲ್ದಾರ ಅಮಿತ್ ಕುಮಾರ್ ಕುಲಕರ್ಣಿ ಕರ್ನಾಟಕ ಗೃಹ ಮಂಡಳಿಯ ಎಇಇ ಶಶೀಕಾಂತ್ ಬಾಗೋಡೆ ಹೂದಾನಿ ಗಳಾದ ರಾಜಕುಮಾರ ಪೊಲೀಸ್ ಪಾಟೀಲ್ ಹಾಗೂ ಶೇಷರಾವ ಪಾಟೀಲ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ನಾಗರಿಕರು ಇದ್ದರು.
























