
ಸೇಡಂ, ನ ,12: ಪಟ್ಟಣದಲ್ಲಿರುವ ಶ್ರೀ ಶಿವಶಂಕರೇಶ್ವರ ಮಠದ ಹತ್ತಿರವಿರುವ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು ಅವರು ಸ್ಥಳೀಯರ ಬೇಡಿಕೆಯಂತೆ ನೆಲಸಮ ಮಾಡಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೂತನ ಶಾಲಾ ಕಟ್ಟಡ ಕಟ್ಟಲು ನಿರ್ಧರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದವರಿಗೆ ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಬರದಂತೆ ಕಾರ್ಯ ನಿರ್ವಹಿಸಬೇಕು. ಶಾಲಾ ಕೋಣೆಗಳು ವಿಶಾಲವಾಗಿ ಹಾಗೂ ಅಚ್ಚುಕಟ್ಟಾಗಿ ಇರುವಂತೆ ನಿಗಾವಹಿಸಿ ಕಾಮಗಾರಿ ನಿರ್ವಹಿಸಬೇಕೆಂದು ಸೂಚಿಸಿದರು. ಈ ವೇಳೆಯಲ್ಲಿ ತೋಟಗಾರಿಕೆಯ ಮಹಾಮಂಡಳಿಯ ಮಾಜಿ ರಾಜ್ಯಾಧ್ಯಕ್ಷರಾದ ಬಸವರಾಜ ಪಾಟೀಲ್ ಊಡಗಿ, ಸಂತೋಷ್ ಕುಲಕರ್ಣಿ ಇದ್ದರು.

























