Home ಜಿಲ್ಲೆ ಕಲಬುರಗಿ ಎಸ್.ಬಿ.ಆರ್. ನಲ್ಲಿ ಮಿನಿ-ಘಟಿಕೋತ್ಸವ-2026ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸನ್ಮಾನ

ಎಸ್.ಬಿ.ಆರ್. ನಲ್ಲಿ ಮಿನಿ-ಘಟಿಕೋತ್ಸವ-2026ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸನ್ಮಾನ

ಕಲಬುರಗಿ: ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಎಸ್.ಬಿ.ಆರ್. ಕಾಲೇಜಿನಲ್ಲಿ ಮಿನಿ-ಘಟಿಕೋತ್ಸವ-2026 ಕಾರ್ಯಕ್ರಮವನ್ನು ಪೂಜ್ಯ ಡಾ. ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನ, ಅಪ್ಪಾ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನೀಟ್, ಐಐಟಿ, ಹಾಗೂ ದ್ವಿತೀಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಉತ್ಕøಷ್ಟ ರ್ಯಾಂಕ್ ಪಡೆದ ಪ್ರತಿಭಾನ್ವಿತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವು ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಹಾಗೂ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಅವರ ದಿವ್ಯ ಆಶೀರ್ವಾದದಲ್ಲಿ ನಡೆಯಿತು.

ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರಶಂಸಿಸಿ ಹಾರೈಸಲು ಈ ಕಾರ್ಯಕ್ರಮವನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನೀಟ್, ಐಐಟಿ, ಹಾಗೂ ದ್ವಿತೀಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ 10 ವಿದ್ಯಾರ್ಥಿಗಳಿಗೆ ಸುಮಾರು 3.5 ಲಕ್ಷ ರೂಪಾಯಿಗಳ ಮೌಲ್ಯದ ನಗದು ಬಹುಮಾನದ ಮತ್ತು ನೆನಪಿನ ಕಾಣಿಕೆ, ಹಾಗೂ 175 ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ನೀಟ್‍ನಲ್ಲಿ ಪ್ರಥಮ ಸ್ಥಾನ ಪಡೆದ ಕು: ಚನ್ನಬಸವ ಕೊರಳ್ಳಿ (685/720 ಅಂಕ) ರಾಷ್ಟ್ರಕ್ಕೆ 190ನೇ ರ್ಯಾಂಕ್, ಅವನಿಗೆ 1,00,000 (ಒಂದುಲಕ್ಷ) ರೂಪಾಯಿಗಳ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ದ್ವಿತೀಯ ಸ್ಥಾನ ಪಡೆದ ಕು: ಸಿಮ್ರನ್ ಬಾನು (657/720 ಅಂಕ) ಅವಳಿಗೆ 50,000 (ಐವತ್ತು ಸಾವಿರ) ರೂಪಾಯಿಗಳ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ತೃತೀಯ ಸ್ಥಾನ ಪಡೆದ ಕು: ನವೀನ ಮಿಟೇಕರ (650/720 ಅಂಕ) ಹಾಗೂ ಕು: ಸಂಪತ್‍ಕುಮಾರ ಕಲಶೆಟ್ಟಿ ಅವರಿಗೆ ತಲಾ 25,000 ರೂಪಾಯಿಗಳ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಜೊತೆಗೆ ನೀಟ್‍ನಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ 150 ವಿದ್ಯಾರ್ಥಿಗಳನ್ನು ಕೂಡಾ ಈ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ರಾಷ್ಟ್ರ ಮಟ್ಟದ ಜೆ.ಇ.ಇ ಅಡ್ವಾನ್ಸಡ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ದೇಶದ ಪ್ರತಿಷ್ಠಿತ ಐಐಟಿ/ಎನ್‍ಐಟಿ ಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಾದ ಕು: ಹರ್ಷವರ್ಧನ ರೆಡ್ಡಿ (ಐಐಟಿ ಹೈದರಾಬಾದ) ಅವನಿಗೆ 75,000 ರೂಪಾಯಿಗಳ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕು: ಸಿದ್ಧಾರ್ಥ ವಾಯ್ (ಐಐಟಿ ಗೋವಾ), ಅವನಿಗೆ 30,000 ರೂಪಾಯಿಗಳ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕು: ಪ್ರತ್ಯುಷ್‍ಕುಮಾರ (ಐಐಟಿ ಗೋವಾ) ಅವನಿಗೆ 25,000 ರೂಪಾಯಿಗಳ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಜೊತೆಗೆ ಐಐಟಿ/ಎನ್‍ಐಟಿ ಯಲ್ಲಿ ಪ್ರವೇಶ ಪಡೆದ ಒಟ್ಟು 23 ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ದ್ವಿತೀಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕು: ಸಿಮ್ರನ್ ಬಾನು (596/600 ಅಂಕ), ಅವಳಿಗೆ 5,000 ರೂ, ದ್ವಿತೀಯ ಸ್ಥಾನ ಪಡೆದ ಕು: ಕ್ಷಿತಿ ಪಾಟೀಲ (592/600 ಅಂಕ), ಅವಳಿಗೆ 3,000 ರೂ, ತೃತೀಯ ಸ್ಥಾನ ಪಡೆದ ಕು: ಗೌತಮ್ ಮಹಿಪಾಲ್ (591/600 ಅಂಕ), ಹಾಗೂ ಕು: ಸಹನಾ ಹಳ್ಳಿ ಅವರಿಗೆ ತಲಾ 2,000 ರೂ, ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ 175 ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳು ಹಾಗೂ ಪಾಲಕರು ಮತ್ತು ಪ್ರಸ್ತುತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿರುವರೆಂದು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎನ್.ಎಸ್. ದೇವರಕಲ್ ಅವರು ತಿಳಿಸಿದ್ದಾರೆ.
ಎಸ್.ಬಿ. ವಿಜ್ಞಾನ ಪದವಿ ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರಾದ ದಿ. ಪೆÇ್ರ. ಎಸ್. ಬಿ. ಪತಂಗೆ ಅವರ ಸ್ಮರಣಾರ್ಥವಾಗಿ, ಪತಂಗೆ ಕುಟುಂಬವು ಪ್ರತಿವರ್ಷ ರಾಷ್ಟ್ರ ಮಟ್ಟದ ಜೆ.ಇ.ಇ ಅಡ್ವಾನ್ಸಡ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗೆ ರೂ. 50,000 ಮೆರಿಟ್ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಈ ವರ್ಷದ ವಿದ್ಯಾರ್ಥಿವೇತನವನ್ನು ‘ಹರ್ಷವರ್ಧನ ರೆಡ್ಡಿ’ ಎಂಬ ವಿದ್ಯಾರ್ಥಿಗೆ ಶ್ರೀಮತಿ ನಿಂಗಮ್ಮ ಪತಂಗೆ ಇವರಿಂದ ನೀಡಲಾಯಿತು. ಅದೇರೀತಿ ಪಿ.ಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ದಿ. ಎಲ್. ಎಸ್. ಬಿರಾದಾರ ಅವರ ಸ್ಮರಣಾರ್ಥವಾಗಿ, ಅವರ ಕುಟುಂಬವು ರಾಷ್ಟ್ರ ಮಟ್ಟದ ಜೆ.ಇ.ಇ ಅಡ್ವಾನ್ಸಡ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗೆ ರೂ. 5,000 ಮೆರಿಟ್ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಈ ವರ್ಷದ ವಿದ್ಯಾರ್ಥಿವೇತನವನ್ನು ‘ಕು: ಸಿದ್ಧಾರ್ಥ ವಾಯ್’ ಎಂಬ ವಿದ್ಯಾರ್ಥಿಗೆ ಅವರ ಕುಟುಂಬದವರಿಂದ ನೀಡಲಾಯಿತು.

ಕಾರ್ಯಕ್ರಮದÀ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸಂದೀಪ್ ವಿ. ಎಚ್. ಡೀನ್ ಹಾಗೂ ನಿರ್ದೇಶಕರು ಯಾದಗಿರಿ ವೈದ್ಯಕೀಯ ವಿಜ್ಞಾನÀ ಸಂಸ್ಥೆ (ಙIಒS) ಯಾದಗಿರಿ. ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಮುಂದಿನ ಪೀಳಿಗೆಯ ಯೋಧರಾಗಿದ್ದು, ಸ್ಪಷ್ಟ ಗುರಿ, ತಂಡದ ನಾಯಕತ್ವ ಹಾಗೂ ಕುಟುಂಬದ ವಿಶ್ವಾಸವನ್ನು ಗಳಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ನಾನೂ ಸಹ ಇದೇ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ” ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಆಗಮಿಸಿದ್ದ ಪೆÇ್ರಬೇಷನರಿ ಐಎಎಸ್ ಅಧಿಕಾರಿ ಡಾ. ನಿವೇದಿತಾ ಸಿ. ಭಾವಿಮನಿ ಅವರು ಮಾತನಾಡಿ, “ಪೆÇೀಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ, ಸೋಲನ್ನು ಧೈರ್ಯ ಹಾಗೂ ಆತ್ಮಸ್ಥೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಬೇಕು. ಅತಿಯಾದ ಒತ್ತಡವು ವಿದ್ಯಾರ್ಥಿಗಳ ಮಾನಸಿಕ ಕ್ಷೇಮದ ಮೇಲೂ ಪರಿಣಾಮ ಬೀರಬಹುದು. ಎಸ್‍ಬಿಆರ್ ವಿದ್ಯಾರ್ಥಿಗಳು ಇಂದು ಎಲ್ಲೆಡೆ ತಮ್ಮ ಛಾಪು ಮೂಡಿಸಿದ್ದಾರೆ. ಜ್ಞಾನದ ಜೊತೆಗೆ ಸಂಸ್ಕøತಿ, ಶಿಸ್ತು, ಸಂಯಮ ಹಾಗೂ ಪರಿಶ್ರಮವೂ ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮುಖ್ಯ. ಗೆದ್ದಾಗ ಸಂಭ್ರಮಿಸುವುದರ ಜೊತೆಗೆ, ಸೋತಾಗ ಕಣ್ಣೀರು ಒರೆಸಿ ಧೈರ್ಯ ತುಂಬುವುದು ಪೆÇೀಷಕರು ಮತ್ತು ಶಿಕ್ಷಕರ ಕರ್ತವ್ಯ. ಈ ಮೌಲ್ಯಗಳೊಂದಿಗೆ ಮುನ್ನಡೆದರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬಲ್ಲರು. ನಾನೂ ಸಹ ಇದೇ ಕಾಲೇಜಿನ ವಿದ್ಯಾರ್ಥಿ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಸಾಧಕ ವಿದ್ಯಾರ್ಥಿಗಳಾದ ಚನ್ನಬಸವ ಕೊರಳ್ಳಿ, ಸ್ತುತಿ ಮಾಶ್ಯಾಳ್ಕರ, ಹಾಗೂ ಸಿಮ್ರನ್ ಬಾನು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು “ವಿದ್ಯೆ ಎಂಬ ಅಸ್ತ್ರದಿಂದ ಸಮಾಜದ ಆರ್ಥಿಕ, ಸಾಂಸ್ಕøತಿಕ ಬದುಕಿನಲ್ಲಿ ಕ್ರಾಂತಿ ತಂದವರು, ಪೂಜ್ಯ ಲಿಂಗೈಕ್ಯ ಡಾ. ಶರಣಬಸವಪ್ಪ ಅಪ್ಪಜಿಯವರು. ಅಪ್ಪಾಜಿಯವರು ಶಿಕ್ಷಣಕ್ಕೆ ಪ್ರಥಮ ಆದ್ಯತೆಯನ್ನು ನೀಡಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯೆನ್ನಬಹುದಾದ ಬದಲಾವಣೆಯನ್ನು ತಂದಿದ್ದಾರೆ. ದೀಪ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕು ಹಂಚಿದಂತೆ, ಅಪ್ಪಜಿಯವರು ತಮ್ಮ ದುಡಿಮೆಯ ಮೂಲಕ ಈ ಭಾಗದ ಜನತೆಗೆ ಶಿಕ್ಷಣದ ಬೆಳಕು ನೀಡುತ್ತಿದ್ದಾರೆ” ಎಂದರು.
ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ, ಇವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಎಸ್‍ಬಿಆರ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಪಾಟೀಲ ವಂದನಾರ್ಪಣೆಯನ್ನು ನಿರ್ವಹಿಸಿದರು. ವಿದ್ಯಾರ್ಥಿಗಳಾದ ಪ್ರಿಯಾಂಕಾ, ಕರಣ್, ಮಧುಶ್ರೀ ಹಾಗೂ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಪ್ರಣವ್ ಮತ್ತು ಖುಷಿ ಅವರು ಮುಖ್ಯ ಅತಿಥಿ ಹಾಗೂ ಗೌರವ ಅತಿಥಿಗಳನ್ನು ಪರಿಚಯಿಸಿದರು.