ಆಲಮಟ್ಟಿ : ಅ.೬:ಹಾಲುಮತ ಹೃದಯಾಂತರಾಳ ನೊರೆ ಹಾಲಿನಷ್ಟೇ ಪರಂ ಪವಿತ್ರವಾದುದು, ಪ್ರತಿಯೊಂದು ಶುಭಾರಂಭಕ್ಕೂ ನೀವೇ ಆರಂಭಿಕರು. ಆದರೂ ಮೌಢ್ಯ ಕಂದಾಚಾರದಲ್ಲಿ ನಿಮ್ಮ ಬದುಕಿನ ಚಿತ್ರಣದ ದೋಣಿ ಮುಳುಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ವಿಷಾದ ವ್ಯಕ್ತಪಡಿಸಿದರು.
ಆಲಮಟ್ಟಿಗೆ ಸಮೀಪದ ಹುಣಶ್ಯಾಳ ಪಿಸಿ ಗ್ರಾಮದಲ್ಲಿ ಭಾನುವಾರ ರಾತ್ರಿ ಚಾಲನೆ ಪಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಾಲುಮತ ಬಾಂಧವರಿAದ ಕುರಿಮರಿ ಮತ್ತು ಕಂಬಳಿಯ ವೈವಿಧ್ಯತೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಹುಟ್ಟಿದಾಗ ಉಸಿರು, ಬೆಳೆಯುತ್ತಿರುವಾಗ ಉಸಿರಿನ ಜೊತೆಗೆ ದೈವತ್ವದ ದಯೆಕೃಪಾ,ಪ್ರೋತ್ಸಾಹ ನೀಡಿ ಬೆಳೆಸಿದ ಕುರುಬ ಜನಾಂಗ ಕುಲ ಕುಸುಬಾದ ಕುರಿ ಕಾಯುವ ಜತೆಗೆ ರಾಜ್ಯದ ಮುಖ್ಯಮಂತ್ರಿ ಗಾದಿಯವರೆಗೂ ತಮ್ಮ ಕಾರ್ಯವೈಖರಿ ಖಚಿತಪಡಿಸಿದರೂ ಹೆಚ್ಚಿನ ಶಿಕ್ಷಣ ಪಡೆಯುವುದರಲ್ಲಿ ಹಿಂದುಳಿದಿದೆ. ಜಗತ್ತು ಮುಂದುವರೆದAತೆ ನಾವೂ ಕೂಡ ಭವಿಷ್ಯದ ನಮ್ಮ ಕುಡಿಗಳಿಗೆ ಶಿಕ್ಷಣದ ಜ್ಞಾನ ಜ್ಯೋತಿ ಲೇಪಿಸೋಣ, ಉನ್ನತ ಶಿಕ್ಷಣ ನೀಡಲು ಮುಂದಾಗಬೇಕಾಗಿರುವುದು ಇಂದಿನ ಅಗತ್ಯತೆ ಇದೆ. ಕುರಿಮರಿಯಂತಿದ್ದ ನನ್ನನ್ನು ಸಾಕಿ ಬೆಳೆಸಿ ಇಂದು ರಾಜ್ಯದ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನದವರೆಗೆ ತಂದು ನಿಲ್ಲಿಸಿದ್ದಿರಿ.ನಿಮ್ಮ ಈ ಋಣಭಾರವನ್ನು ನಾನೆಂದೂ ಮರೆಯಲಾರೆ ಎಂದು ಚಂದ್ರಶೇಖರ ನುಗ್ಗಲಿ ಹೇಳಿದರು.
ಶಿಕ್ಷಕ ಮಹೇಶ ಗಾಳಪ್ಪಗೋಳ ಮಾತನಾಡಿ, ಹಾಲುಮತ ಬಾಂಧವರು ಯಾವತ್ತೂ ಸಂಪ್ರದಾಯದ ಗೋಡೆಯನ್ನು ಒಡೆದು ಬಂದವರಲ್ಲ. ಇಂದು ನಮ್ಮ ಮನೆಯ ಮಗ ರಾಜ್ಯದ ಗುರುಕುಲದ ಯಜಮಾನನಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಂದಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರೇಶ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚನ್ನಸಂಗಪ್ಪಗೌಡ ಪಾಟೀಲ, ಎಂ.ಎA. ಮುಲ್ಲಾ, ಸಲೀಂ ದಡೆದ, ಸೋಮನಗೌಡ ಪಾಟೀಲ, ಕೆಂಚಪ್ಪ ಮಸೂತಿ, ಹನುಮಂತ ವಾಲಿಕಾರ, ಮಲ್ಲಪ್ಪ ವಾಲಿಕಾರ, ಬೀರಬಲ್ಲ ಗೊಡ್ಲಿ, ರಮೇಶ ಕಾಖಂಡಕಿ,ಸಿದ್ದಯ್ಯ ಚಿಕ್ಕಮಠ, ದೇವೇಂದ್ರ ವಾಲಿಕಾರ, ಬಸವರಾಜ ಕೊಳದಾನವರ ಸೇರಿದಂತೆ ಇತರರಿದ್ದರು.























