Home ಜಿಲ್ಲೆ ಬೆಂಗಳೂರು ಹಾಲು ಒಕ್ಕೂಟದಿಂದ ಉತ್ಪಾದಕರಿಗೆ ಯುಗಾದಿಗೆ ಕೊಡುಗೆಗಳ ಮಹಾಪೂರ

ಹಾಲು ಒಕ್ಕೂಟದಿಂದ ಉತ್ಪಾದಕರಿಗೆ ಯುಗಾದಿಗೆ ಕೊಡುಗೆಗಳ ಮಹಾಪೂರ

ಕೋಲಾರ,ಮಾ,೧೯- ಹಾಲು ಉತ್ಪಾದಕರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಪ್ರತಿ ಲೀಟರ್ ಹಾಲಿಗೆ ರೂ. ೨ ಹೆಚ್ಚಳ, ರಾಸುಗಳಿಗೆ ವಿಮೆ ರೂ ೭೦ ಸಾವಿರದಿಮದ ೮೦ ಸಾವಿರಕ್ಕೆ ಏರಿಕೆ, ಹಸಿರು ಮೇವು ಬೆಳೆಯಲು ಪ್ರತಿ ಎಕರೆಗೆ ರೂ ೩ ಸಾವಿರ ರೂ ಒಕ್ಕೂಟದ ಪ್ರೋತಾಹ ಧನ ಹಾಗೂ ಖಾಯಂ ಸಿಬ್ಬಂದಿಗೆ ರೂ ೭೫ ಸಾವಿರ ರೂ ಹಾಗೂ ಇತರೆ ಸಿಬ್ಬಂದಿಗಳಿಗೆ ಶೇ,೮.೩೩ ರಷ್ಟು ಬೋನಸ್ ನೀಡಲು ಇಂದು ನಡೆದ ಒಕ್ಕೂಟದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕೋಲಾರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿಗಮದ ಅಧ್ಯಕ್ಷ ಕೆ.ವೈ. ನಂಜೇಗೌಡ ತಿಳಿಸಿದರು,


ನಗರ ಹೊರವಲಯದ ಬೆಳಗಾನಹಳ್ಳಿಯ ಬಳಿಯ ಹಾಲು ಒಕ್ಕೂಟದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಹಾಲು ಒಕ್ಕೂಟವು ಪ್ರತಿ ದಿನ ಸರಾಸರಿ ೭.೧೫ ಲಕ್ಷ ಲೀಟರ್ ಹಾಲು ಶೇಖರಣೆ ಮಾಡುವ ಮೂಲಕ ಸುಮಾರು ಶೇ ೭ರಷ್ಟು ಸ್ಯಾಚೆಟ್‌ಗಳಿಗೆ ೩.೩ ಲಕ್ಷ ಲೀಟರ್ ಮಾಡುವ ಮೂಲಕ ಶೇ ೧೨ ರಷ್ಟು, ಮೊಸರು ಮಾರಾಟಕ್ಕೆ ಸರಾಸರಿ ೬೪ ಸಾವಿರ ಕೆ.ಜಿ. ಮಾಡುವ ಮೂಲಕ ಶೇ ೨೦ರಷ್ಟು ಮತ್ತು ಗುಡ್ ಲೈಫ್ ಹಾಲಿಗೆ ಸರಾಸರಿ . ೧,೬೪,೫೭೧ ಲೀಟರ್ ಉತ್ಪಾದನೆ ಮಾಡುವ ಮೂಲಕ ಶೇ ೩೦ ರಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿಸಲು ಹರ್ಷಿಸುತ್ತೇವೆಂದರು.


ಬೇಸಿಗೆಯಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ದೆಸೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ ೧೮ ರಿಂದಲೇ ಜಾರಿಗೆ ಬರುವಂತೆ ಒಕ್ಕೂಟವು ಸಭೆಯಲ್ಲಿ ತೀರ್ಮಾನಿಸಿತು. ಒಕ್ಕೂಟದಿಂದ ಸಂಘಕ್ಕೆ ಶೇ ೪ ರಷ್ಟು ಫ್ಯಾಟ್, ಶೇ ೮,೫ ರಷ್ಟು ಎಸ್.ಎನ್.ಎಫ್ ಅಂಶವುಳ್ಳ ಪ್ರತಿ ಕೆ.ಜಿ.ಹಾಲಿಗೆ ರೂ ೩೭.೮೫ ಪೈಸೆ ಇರುವುದಕ್ಕೆ ರೂ ೨ ಏರಿಕೆ ಮಾಡಿ ರೂ೩೯.೮೫ ರಂತೆ ಹಾಗೂ ಹಾಲು ಉತ್ಪಾದಕರಿಗೆ ಶೇ ೪ ರಷ್ಟು ಫ್ಯಾಟ್ ,ಶೇ ೮,೫ ರಷ್ಟು ಎಸ್.ಎನ್.ಎಫ್ ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ ರೂ ೩೫.೪೦ ರಿಂದ ೨ ರೂಗಳನ್ನು ಹೆಚ್ಚಿಸಿದ್ದು ಪರಿಷ್ಕೃತ ದರ ಉತ್ಪಾದಕರಿಗೆ ರೂ ೩೭.೪೦ ರಂತೆ ಪಾವತಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಹೇಳಿದರು.


ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದ ನಂತರ ಒಕ್ಕೂಟದ ವ್ಯಾಪ್ತಿಯಲ್ಲಿ ವರ್ಷಕ್ಕೆ ಎರಡೂ ಬಾರಿ ಮಾಡುತ್ತಿದ್ದ ರಾಸುಗಳ ವಿಮೆಯನ್ನು ಪ್ರಸಕ್ತ ಸಾಲಿನಿಂದ ೩ ಬಾರಿ ವಿಮೆ ಮಾಡಿಸಲು ಪ್ರತಿ ರಾಸುವಿನ ವಿಮೆ ಮೊತ್ತವನ್ನು ೭೦ ಸಾವಿರ ರೂಗಳಿಂದ ೮೦ ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ. ಬೇಸಿಗೆಯ ಹಿನ್ನಲೆಯಲ್ಲಿ ಹಸಿರು ಮೇವಿನ ಕೊರತೆಯನ್ನು ನೀಗಿಸಲು ಮೇವು ಅಭಿವೃದ್ದಿಗಾಗಿ ಮೇವಿನ ಬೀಜಗಳು, ಮೇವಿನ ಜೋಳದ ಬಿತ್ತನೆಯನ್ನು ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಶೇ ೫೦ರ ರಿಯಾಯಿತಿ ದರದಲ್ಲಿ ಸುಮಾರು ೧ ಸಾವಿರ ಎಕರೆಗೆ ಅನ್ವಯವಾಗುವಂತೆ ವಿತರಿಸಲಾಗುವುದು ಒಕ್ಕೂಟವು ಸಂಘ ಮತ್ತು ಉತ್ಪಾದಕರ ಸೇರಿ ತ್ರಿಪಕ್ಷಿಂiiವಾದ ಕರಾರು ಮಾಡಿ ಕೊಂಡು ಪ್ರತಿ ಎಕರೆಗೆ ೩ ಸಾವಿರ ರೂ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದರು.


ಒಕ್ಕೂಟದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ೨೦೨ ಖಾಯಂ ಸಿಬ್ಬಂದಿಗೆ ಪ್ರಸಕ್ತ ಸಾಲಿನಲ್ಲಿ ೭೫ ಸಾವಿರ ರೂ ಎಕ್ಸಗ್ರೇಷಿಯಾ ಪಾವತಿಸಲು ಹಾಗೂ ೧೧೦೫ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆಯಡಿ ಅವರ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಮೇಲಿನ ಬೋನಸ್ ಅಗಿ ಒಟ್ಟಾರೆಯಾಗಿ ೩,೫ ಕೋಟಿ ರೂ ಪಾವತಿಸಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.


ನೂತನ ಆಡಳಿತ ಮಂಡಳಿ ರಚನೆಯಾದ ನಂತರ ಒಕ್ಕೂಟದಲ್ಲಿ ೬೮ ಕೋಟಿ ರೂ ವೆಚ್ಚದ ೧೨ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ ಘಟಕ ಕಾರ್ಯನಿರ್ವಹಿಸುತ್ತಿದ್ದು ಮಾಹೆಯಾನ ಅಂದಾಜು ೧೪ ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಪೈಕಿ ಒಕ್ಕೂಟದ ಮುಖ್ಯ ಡೇರಿಗೆ ೮.ಲಕ್ಷದ ೫೦ ಸಾವಿರ ಯೂನಿಟ್‌ಗಳು ವಿನಿಯೋಗಿಸುತ್ತಿರುವುದರಿಂದ ಮಾಹೆಯಾನ ವಿದ್ಯುತ್ ವೆಚ್ಚ ಸುಮಾರು ೮೦ ಲಕ್ಷ ರೂವರೆಗೆ ಉಳಿತಾಯ ವಾಗುತ್ತಿದೆ ಎಂದರು


ಹೆಚ್ಚುವರಿ ೫,೫೦ ಲಕ್ಷ ಯೂನಿಟ್‌ಗಳನ್ನು ಒಕ್ಕೂಟದ ವ್ಯಾಪ್ತಿಯ ೨೪೩ ಸಂಖ್ಯೆ ಬಿ.ಎಂ.ಸಿ. ಘಟಕಗಳಿಗೆ ಒಕ್ಕೂಟದ ಸೋಲರ್ ವಿದ್ಯುತ್ ನೀಡುವ ಬಗ್ಗೆ ಕೆ.ಪಿ.ಟಿ.ಸಿ.ಎಲ್.ನೊಂದಿಗೆ ವ್ಯವಹರಿಸಿ ಮಾಲೂರು ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ ಈಗಾಗಲೇ ಪ್ರೋ ಮೀಟರ್‍ಸ್ ಅಳವಡಿಸುವ ಕಾರ್ಯ ಕೈಗೊಂಡಿದ್ದು, ತ್ವರಿತವಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಸೌರ ವಿದ್ಯುತ್‌ನ್ನು ನೀಡಿ ಒಕ್ಕೂಟಕ್ಕೆ ಅಂದಾಜು ರೂ ೪೦ ಲಕ್ಷ ರೂ ಉಳಿತಾಯದ ಯೋಜನೆಯು ಒಕ್ಕೂಟದ ಮುಂದಿದೆ ಎಂದು ಹೇಳಿದರು
ಒಕ್ಕೂಟ ಮತ್ತು ಬಿ.ಎಂ.ಸಿ. ಘಟಕಗಳಿಗೆ ಸೌರ ವಿದ್ಯುತ್ ನೀಡಿದ ನಂತರ ಉಳಿಕೆಯಾಗುವ ಯೂನಿಟ್‌ಗಳನ್ನು ಖಾಸಗಿ ಸಂಸ್ಥೆಗೆ ಪ್ರತಿ ಯೂನಿಟ್‌ಗೆ ರೂ ೩,೫೨ ರಂತೆ ಮಾರಾಟ ಮಾಡಲು ಕ್ರಮವಿಡಲಾಗುತ್ತಿದೆ. ಸೂಲಾರ್ ಘಟಕದಿಂದ ಒಕ್ಕೂಟಕ್ಕೆ ಮಾಹೆಯಾನ ಸುಮಾರು ರೂ.೧,೨೦ ಕೋಟಿಗಳ ವರೆಗೆ ಉಳಿತಾಯವಾಗುವಂತೆ ಕ್ರಮವಿಡಲಾಗುತ್ತಿದೆ ಎಂದರು.


ರೂ ೨೫೦ ಕೋಟಿಗಳ ವೆಚ್ಚದ ೭.೫ ರಿಂದ ೧೦ ಲಕ್ಷ ಲೀಟರ್ ವಿಸ್ತರಿಸ ಬಹುದಾದ ಸಾಮರ್ಥ್ಯದ ನೂತನ ಎಂ.ವಿ.ಕೆ. ಗೋಲ್ಡನ್ ಸೇರಿದಂತೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿ ಯಂತ್ರೋಪಕರಣಗಳ ಅಳವಡಿಕೆ, ಕಾಂಪೌಂಡ್ ನಿರ್ಮಾಣ ರೆಫ್ರಜಿರೆಶನ್ ಕೆಲಸಗಳು ಪ್ರಗತಿಯಲ್ಲಿದ್ದು ಸೋಲರ್ ಘಟಕ ಮತ್ತೂ ಎಂ.ವಿ.ಕೆ. ಗೋಲ್ಡನ್ ಡೇರಿ ಘಟಕಗಳು ೨-೩ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಇದನ್ನು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಟ ೧೦ ವರ್ಷಗಳ ಕಳಂಕ ರಹಿತ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುವ ಸಂದರ್ಭದಲ್ಲಿ ಒಕ್ಕೂಟದ ಟ್ರಸ್ಟ್ ನಿಂದ ಕಾರ್ಯದರ್ಶಿಗೆ ೫ ಲಕ್ಷ ರೂ ಪರೀಕ್ಷಕರಿಗೆ ರೂ ೩ ಲಕ್ಷ ರೂ ಮತ್ತು ಸಹಾಯಕರಿಗೆ ೨ ಲಕ್ಷ ಗಳನ್ನು ವಯೋನಿವೃತ್ತಿ ಗೌರವ ಧನವಾಗಿ ಹಾಗೂ ಒಂದು ವೇಳೆ ಸೇವಾವಧಿ ಅಕಾಲಿಕ ಮರಣ ಹೊಂದಿದ್ದಲ್ಲಿ ವಯೋನಿವೃತ್ತಿಯ ಗೌರವ ಧನ ನೀಡಲು ನಿರ್ದರಿಸಲಾಗಿದೆ ಎಂದು ಹೇಳಿದರು.


ಒಕ್ಕೂಟದ ವ್ಯಾಪಿಯಲ್ಲಿ ೧೦೦೪ ಸಂಘಗಳ ಪೈಕಿ ಏಕ ರೂಪದ ತಂತ್ರಾಂಶ ೭೨೭ ಸಂಘಗಳಲ್ಲಿ ಅಳವಡಿಕೆಯಿಂದ ಸಂಘಗಳ ಅಳವಡಿಕೆಯಿಂದ ಸಂಘಗಳಲ್ಲಿ ಸಿಬ್ಬಂದಿಗೆ ಹೆಚ್ಚಿನ ಕೆಲಸದ ಒತ್ತಡ ಇರುವುದರಿಂದ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಹಾಲಿನ ಗುಣಮಟ್ಟ ಮತ್ತು ಶೇಖರಣೆಯನ್ನು ಹೆಚ್ಚುಸುವ ಸಲುವಾಗಿ ಎ,ಎಂ.,ಸಿ.ಯು. ಅಳವಡಿಸಿ ಕೊಂಡು ಸರ್ಕಾರ ಮಾನದಂಡದಂತೆ ಗುಣಮಟ್ಟ ಶೇ ೪.೧ ಬರುವಂತಹ ಸಂಘಗಳ ಹಾಲಿನ ಶೇಖರಣೆಯ ಪ್ರತಿ ಲೀಟರ್‌ಗೆ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನದೊಂದಿಗೆ ಪ್ರತ್ಯೇಕವಾಗಿ ಕಾರ್ಯದರ್ಶಿಗಳಿಗೆ ೦.೦೫ ಪೈಸೆ, ಪರೀಕ್ಷಕರಿಗೆ ೦.೦೩ ಪೈಸೆ, ಸಹಾಯಕರಿಗೆ ೦.೦೨ ಪೈಸೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಯಿತು ಎಂದು ವಿವರಿಸಿದರು.


ಪ್ರಶ್ನೆಯೊಂದಕ್ಕೆ ಸದ್ಯಕ್ಕೆ ನೇಮಕಾತಿ ಪ್ರಕ್ತಿಯೆಗಳಿಲ್ಲ. ಒಕ್ಕೂಟವು ಯಾವೂದೇ ರೀತಿ ನಷ್ಟಕ್ಕೆ ತುತ್ತಾಗಿಲ್ಲ. ರಾಜ್ಯದಲ್ಲಿ ಮಂಗಳೂರು ನಂತರದಲ್ಲಿ ಕೋಲಾರ ಹಾಲು ಒಕ್ಕೂಟವೇ ಅತಿಹೆಚ್ಚು ಹಣ ನೀಡುವಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಿಂದ ತಿಂಗಳಿಗೆ ೪,೩೨ ಕೋಟಿ ರೂ ಹೆಚ್ಚಿನ ಹೊರೆಯಾಗಲಿದೆ. ಅಭಿವೃದ್ದಿಯ ಅನುದಾನವನ್ನು ಮುಟ್ಟಿಲ್ಲ ೨೫೦ ಕೋಟಿ ರೂ ಹಾಗೆ ಇದೆ ಸರ್ಕಾರದಿಂದ ಯಾವೂದೇ ಅನುದಾನವಿಲ್ಲ ಒಟ್ಟು ೩೫೦ ಕೋಟಿ ರೂಗಳ ಅಭಿವೃದ್ದಿ ಯೋಜನೆಯಾಗಿದೆ ಒಟ್ಟಾರೆಯಾಗಿ ಒಕ್ಕೂಟಕ್ಕೆ ೯.೧೬ ಕೋಟಿ ಲಾಭಾಂಶದಲ್ಲಿದೆ ಈ ಲಾಭಾಂಶವನ್ನು ಹಾಲು ಉತ್ಪದಾಕರಿಗೆ ಹಂಚಿಕೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟಪಡಿಸಿದರು.