ಖಾಸ್ಗತ ಜಾತ್ರೋತ್ಸವದಲ್ಲಿ ಭಕ್ತರಿಗೆ ಹಾಲು ಹುಗ್ಗಿ ಪ್ರಸಾದ

ತಾಳಿಕೋಟೆ:ಜು.4: ಐತಿಹಾಸಿಕ ಹಿನ್ನೇಲೆಹೊಂದಿರುವ ತಾಳಿಕೋಟೆ ನಗರಿ ಸದ್ಯ ಧಾರ್ಮಿಕ ಮತ್ತು ದಾಸೋಹ ಕ್ಷೇತ್ರದಲ್ಲಿಯೂ ಕೂಡಾ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು ಸದ್ಯ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆದಿರುವದರಿಂದ ನಿತ್ಯ ದಾಸೋಹದ ವಿವಿಧತೆ ಪ್ರಸಾದದಲ್ಲಿ ಈ ಭಾರಿ 10 ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ಹಾಲು ಹುಗ್ಗಿ ಮತ್ತು ಪಾನಿಪುರಿ ಊಟದ ಪ್ರಸಾದ ಸಿಗಲಿದೆ.
ರಾಜ್ಯದ ಧಾರ್ಮಿಕ ಕ್ಷೇತ್ರದ ಮಠಗಳಲ್ಲಿಯೇ ಅತ್ಯಂತ ಹೆಸರು ಮಾಡಿರುವ ತಾಳಿಕೋಟೆಯ ಶ್ರೀ ಖಾಸ್ಗತಮಠವು ಲಕ್ಷಾಂತರ ಭಕ್ತಸಮೂಹವನ್ನು ಹೊಂದಿದ ಮಠವಾಗಿದೆ ಶ್ರೀ ಖಾಸ್ಗತರ ಜಾತ್ರೆಗೆ ಈ ಭಾಗದಲ್ಲಿ ಅಜ್ಜನ ಜಾತ್ರೆ ಎಂದೇ ಅತ್ಯಂತ ಪ್ರಚಲಿತಹೊಂದಿರುವ ಶ್ರೀ ಖಾಸ್ಗತ ಮಠದಲ್ಲಿ ಜಾತ್ರಾ ನಿಮಿತ್ಯವಾಗಿ ಇಂದು ದಿ.6 ರಂದು ಭಕ್ತರಿಗೆ ಪಾನಿಪುರಿ ದಿ. 7 ರಂದು ಹಾಲು ಹುಗ್ಗಿ ತುಪ್ಪದ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹಿಂದಿನ ಪೀಠಾಧೀಪತಿ ಲಿಂ.ವಿರಕ್ತ ಮಹಾಸ್ವಾಮಿಗಳ ನುಡಿಯಂತೆ ಅವರ ಮೇಲೆ ಭಕ್ತರು ಇಟ್ಟಿದ್ದ ಭಕ್ತಿ, ಪ್ರೀತಿ, ವಾತ್ಸಲ್ಯ ಈಗಲೂ ಕೂಡಾ ಮಠದ ಮೇಲೆ ಭಕ್ತರು ತೋರಿಸುತ್ತಿದ್ದು ವಿರಕ್ತಶ್ರೀಗಳ ದಾರಿಯಲ್ಲಿ ಈಗೀನ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ಕೂಡಾ ಭಕ್ತರೇ ಶ್ರೀಮಠದ ಆಸ್ತಿ ಎಂದು ಸಾರಿ ಸಾರಿ ಹೇಳುತ್ತಿದ್ದು ಇದರಿಂದ ಲಿಂ.ವಿರಕ್ತಶ್ರೀಗಳ ಮೇಲಿನ ಪ್ರೀತಿ ಇನ್ನಷ್ಟು ಇಮ್ಮಡಿಗೊಳಿಸುವಂತೆ ಮಾಡಿದೆ ಅಲ್ಲದೇ ಶ್ರೀ ಖಾಸ್ಗತಮಠದ ಮೇಲಿನ ಭಕ್ತಿ ನಂಬಿಕೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.
ಶ್ರೀ ಖಾಸ್ಗತ ಮಠದ ಜಾತ್ರೋತ್ಸವದ ದಾಸೋಹ ವ್ಯವಸ್ಥೆಗೆ ಎಲ್ಲ ಗ್ರಾಮ ಪಟ್ಟಣಗಳಿಂದ ಅವಶ್ಯಕ ದವಸ ದಾನ್ಯಗಳಲ್ಲದೇ ರೋಟ್ಟಿ ಇನ್ನಿತರಗಳನ್ನು ಭಕ್ತಾಧಿಗಳು ಅರ್ಪಿಸುತ್ತಿದ್ದು ಭಕ್ತಾಧಿಗಳು ನೀಡಿದ ದವಸ್ಯ ದಾನ್ಯಗಳಿಂದ ನಿತ್ಯ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಿ ಭಕ್ತಾಧಿಗಳಿಗೆ ಯಾವುದೇ ರೀತಿಯ ಕೊರತೆ ಬಿಳ್ಳದ ಹಾಗೆ ಶ್ರೀಮಠದಿಂದ ನೋಡಿಕೊಳ್ಳಲಾಗುತ್ತಿದೆ.
ಪ್ರತೀ ವರ್ಷ ಸಜ್ಜಕ ತುಪ್ಪದ ಊಟ ಭಕ್ತರಿಗೆ ಉಣಬಡಿಸಲಾಗುತ್ತಿತ್ತು ಈ ಸಲ ಶ್ರೀಮಠದ ಬಾಲಶಿವಯೋಗಿ ಶ್ರೀಗಳ ಮಾತಿನಂತೆ ಬದಲಾವಣೆಗೈದು ಹಾಲು ಹುಗ್ಗಿ ಮತ್ತು ಪಾನಿಪುರಿ ತಯಾರಿಗೆ ಜಾತ್ರೆಗೆ ಹೊಸ ಮೆರಗನ್ನು ನೀಡಲು ಮುಂದಾಗಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಜಾತ್ರೆಗೆ ಪಟ್ಟಿ ಎತ್ತುವ ಕಾರ್ಯ ಸ್ಥಗಿತ :-
ಈ ಹಿಂದೆ ಜಾತ್ರೆಯ ಸಮಯದಲ್ಲಿ ಭಕ್ತಾಧಿಗಳ ಮನೆ ಮನೆಗೆ ಶ್ರೀ ಖಾಸ್ಗತರ ಫಲ್ಲಕ್ಕಿಯೊಂದಿಗೆ ಪಟ್ಟಿ(ದೇಣಿಗೆ) ಸಂಗ್ರಹ ಮಾಡಲಾಗುತ್ತಿತ್ತು ಆದರೆ ಕಳೆದ 4 ವರ್ಷಗಳಿಂದ ಶ್ರೀಮಠದಿಂದ ದೇಣಿಗೆ(ಪಟ್ಟಿ ಎತ್ತುವ ಕಾರ್ಯವನ್ನು ಶ್ರೀಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗದೇವರು ಸ್ಥಗಿತಗೊಳಿಸಿದ್ದಾರೆ. ಸದ್ಯ ಶ್ರೀಮಠಕ್ಕೆ ಭಕ್ತರೇ ಬಂದು ಜಾತ್ರೆ ಉತ್ಸವದ ಜೊತೆಗೆ ದಾಸೋಹದ ವ್ಯವಸ್ಥೆಗೆ ತಮ್ಮ ಕೈಲಾದಷ್ಟು ಕಾಣಿಕೆ, ದವಸ ದಾನ್ಯಗಳನ್ನು ನೀಡಿ ಈ ಹಿಂದಿನಂತೆ ಶ್ರೀಮಠದ ಮೇಲೆ ತಮ್ಮ ಭಕ್ತಿ, ಪ್ರೀತಿಯನ್ನು ತೋರಿಸಿ ತೆರಳುತ್ತಿದ್ದಾರೆ.

ಈ ಜಾತ್ರೆಗೆ ಮುಂಬೈಯಿ, ಪುಣೆ, ಗೋವಾ, ಹೈದ್ರಾಬಾದ್, ಹುಬ್ಬಳ್ಳಿ, ಕಲ್ಬುರ್ಗಿ, ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಸಮೂಹವು ಜಾತ್ರೆ ಪ್ರಾರಂಭಕ್ಕಿಂತಲೂ ಮುಂಚೆ ಶ್ರೀಮಠಕ್ಕೆ ಆಗಮಿಸಿದ್ದು ಭಕ್ತಾಧಿಗಳು ಶ್ರೀಮಠದ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.

 "ಭಕ್ತರೇ ಶ್ರೀಮಠದ ಆಸ್ತಿ" ಎಂದು ನಾನು ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ವಾಣಿಯಂತೆ ನಡೆದಿದ್ದೆನೆ ಎಲ್ಲ ಭಕ್ತರು ಶ್ರೀಮಠದ ಆಸ್ತಿಯೆಂದು ಭಾವಿಸಿದ್ದೇನೆ ಈ ಹಿಂದೆ ಈ ಈರ್ವ ಶ್ರೀಗಳು ನಡೆದುಕೊಂಡು ಬಂದ ಹಾಗೆ ನಾನೂ ಕೂಡಾ ಹಾಗೇ ಸಾಗುತ್ತಿದ್ದೇನೆ ಲಿಂ.ವಿರಕ್ತಶ್ರೀಗಳು ನನಗೆ ಕನಸಿನಲ್ಲಿ ಹೇಳಿದಂತೆ ಈ ಭಾರಿಯ ಜಾತ್ರೆಯಲ್ಲಿ ಹಾಲು ಹುಗ್ಗಿ ತುಪ್ಪದ ಪ್ರಸಾದ ಭಕ್ತಾಧಿಗಳಿಗೆ ನೀಡಲಾಗುತ್ತಿದೆ ಎಲ್ಲ ಭಕ್ತರು ಪ್ರಸಾದ ಸ್ವಿಕರಿಸಿ ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಕೃಪೆಗೆ ಪಾತ್ರರಾಗಬೇಕು.
                                                     ಬಾಲಶಿವಯೋಗಿ ಶ್ರೀಸಿದ್ದಲಿಂಗ ದೇವರು.
                                ಶ್ರೀ ಖಾಸ್ಗತ ಮಠ ತಾಳಿಕೋಟೆ