ನಾಳೆ ಮಿಡಿತ ಹಾರ್ಟ್ ಸೆಂಟರ್ ಉದ್ಘಾಟನೆ

ತುಮಕೂರು, ನ. ೨೯- ನಗರದ ಕೆ.ಆರ್. ಬಡಾವಣೆಯ ಬಾರ್‌ಲೈನ್ ರಸ್ತೆಯಲ್ಲಿ ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಹೆಚ್.ಎಂ. ರವರ ಮಿಡಿತ ಹಾರ್ಟ್ ಸೆಂಟರ್ ಅಂಡ್ ಮಲ್ಟಿಸ್ಪೆಷಾಸಿಟಿ ಆಸ್ಪತ್ರೆಯ ಪ್ರಾರಂಭೋತ್ಸವ ನ. ೩೦ ರಂದು ನಡೆಯಲಿದೆ.


ನ. ೩೦ ರಂದು ಬೆಳಿಗ್ಗೆ ೮ ಗಂಟೆಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪಾದಪೂಜೆಯೊಂದಿಗೆ ಮಿಡಿತ ಹಾರ್ಟ್ ಸೆಂಟರ್‌ನ ಪ್ರಾರಂಭೋತ್ಸವ ಆರಂಭವಾಗಲಿದ್ದು, ಶ್ರೀಗಳು ಕ್ಯಾತಲ್ಯಾಬ್ ಉದ್ಘಾಟಿಸುವರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಿಡಿತ ಹಾರ್ಟ್ ಸೆಂಟರ್‌ನ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಹೆಚ್.ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಹಿಸುವರು. ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ, ಶಾಸಕರಾದ ಜ್ಯೋತಿಗಣೇಶ್, ಸುರೇಶ್‌ಗೌಡ, ಎಸ್‌ಎಂಸಿಆರ್‌ಐ ನಿರ್ದೇಶಕ ಡಾ. ಪರಮೇಶ್ ಎಸ್., ಪೋರ್ಟಿಸ್ ಆಸ್ಪತ್ರೆಯ ಮುಖ್ಯ ಹೃದ್ರೋಗ ತಜ್ಞರಾದ ಡಾ. ಪ್ರಭಾಕರ್ ಕೋರೆಗಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.


ನಮ್ಮ ಆಸ್ಪತ್ರೆಯಲ್ಲಿ ಹೃದಯಾಘಾತ, ಕವಾಟು ಸಮಸ್ಯೆ ಸೇರಿದಂತೆ ತುರ್ತು ಸೇವೆಗಳು ಲಭ್ಯವಿರುತ್ತವೆ. ದಿನದ ೨೪ ಗಂಟೆಯೂ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ದೊರೆಯಲಿದೆ ಎಂದರು.


ವಿಮಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಇನ್ಸುರೆನ್ಸ್ ಬಳಕೆಯಾಗಲಿದೆ ಎಂದು ಅವರು ಹೇಳಿದರು.