
ಕಲಬುರಗಿ,ಫೆ.9-ಮೆಟ್ರೋ ಲೈನ್ ಲೈನ್ ಒಂದು ಮೀಟರ್ ಹೆಚ್ಚಾದ್ರೆ ಮೋದಿ ಕಾರಣ, ಮೆಟ್ರೋ ಟಿಕೆಟ್ ದರ ಒಂದು ರೂಪಾಯಿ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣ.ಇದು ಬಿಜೆಪಿಗರು ಬಳಸುವ ಲಾಜಿಕ್! ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೆಟ್ರೋ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹೂಡಿಕೆ ಮಾಡುವ ನಿಯಮವಿದೆ, ಹೀಗಿದ್ದೂ ಕೇಂದ್ರ ಸರ್ಕಾರ ತನ್ನ ಪಾಲಿನ 50% ಹಣ ನೀಡದ ಪರಿಣಾಮವಾಗಿ ಮೆಟ್ರೋ ವಿಸ್ತರಣೆ ಯೋಜನೆಯಲ್ಲಿ ರಾಜ್ಯ ಸರ್ಕಾರವೇ 87%ನಷ್ಟು ಹಣ ವಿನಿಯೋಗಿಸಿದೆ. ಪರಿಸ್ಥಿತಿ ಹೀಗಿರುವಾಗ, ಮೆಟ್ರೋ ಯೋಜನೆಯ ಕ್ರೆಡಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಮುನ್ನುಗ್ಗಿ ಬರುವ @ಃಎP4ಏಚಿಡಿಟಿಚಿಣಚಿಞಚಿ ನಾಯಕರು ದರ ಏರಿಕೆಯ ವಿಷಯ ಬಂದಾಗ ರಾಜ್ಯ ಸರ್ಕಾರವನ್ನು ಹೊಣೆ ಮಾಡುವ ಚಾಳಿ ಬೆಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ರೈಲ್ವೆ ಆಕ್ಟ್ 2002 ಪ್ರಕಾರ, ಮೆಟ್ರೋ ದರ ನಿಗದಿಪಡಿಸುವುದು ಸ್ವತಂತ್ರವಾದ ಫೇರ್ ಫಿಕ್ಸೆಶನ್ ಕಮಿಟಿ, ಈ ಫೇರ್ ಫಿಕ್ಸೆಶನ್ ಕಮಿಟಿಯನ್ನು ರಚಿಸುವುದು ಕೇಂದ್ರ ಸರ್ಕಾರ, ಒಂದು ವೇಳೆ ದರ ಏರಿಕೆಯ ಪ್ರಸ್ತಾವನೆ ಬಂದಲ್ಲಿ ಅದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಮತ್ತು ವಾರ್ಷಿಕವಾಗಿ ದರ ನಿಗದಿಪಡಿಸಲು ಈ ಕಮಿಟಿಯು ಫೇರ್ ಫಿಕ್ಸೆಶನ್ ಫಾರ್ಮುಲವನ್ನು ಹೊಂದಿದೆ. ದರ ನಿಗದಿ ಸಮಿತಿ (ಈಈಅ)ಯಲ್ಲಿ ಕೇಂದ್ರ ಸರ್ಕಾರ ನೇಮಿಸುವವವರು ಚೆರ್ಮೆನ್ ಆಗಿರುತ್ತಾರೆ ಮತ್ತು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು, ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಸಮಿತಿಯಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದವರ ಸಂಖ್ಯೆ ಹೆಚ್ಚಿರುತ್ತದೆ, ಮತ್ತು ದರ ನಿಗದಿಯಲ್ಲಿ ಅವರ ಶಿಫಾರಸುಗಳಿಗೆ ಮನ್ನಣೆ ದೊರಕಲಿದೆ. ನಿಯಮಗಳ ಪ್ರಕಾರ ಸಮಿತಿಯ ಶಿಫಾರಸುಗಳನ್ನು ನಮ್ಮ ಮೆಟ್ರೋ ಒಪ್ಪಲೇಬೇಕಿದೆ ಇದು ವಾಸ್ತವ. ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ವಿಷಯಗಳ ಅರಿವು ಇರಬೇಕಾಗಿದ್ದಿದ್ದು ಅಗತ್ಯ, ಆದರೆ ಬಿಜೆಪಿ ನಾಯಕರಿಗೆ ಇದರ ಅರಿವು ಇಲ್ಲವೇ ಅಥವಾ ಅರಿವಿದ್ದೂ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರಾ ? ರಾಜ್ಯ ಸರ್ಕಾರವು 2024ರಲ್ಲಿ ದರ ನಿಗದಿ ಸಮಿತಿ ರಚಿಸಲು ಕೋರಿತ್ತು, ಆದರೆ ಪ್ರಸ್ತುತ ಸಂದರ್ಭದಲ್ಲಿ ಹಿಂದಿನ ಪತ್ರಗಳನ್ನು ಹಿಡಿದು ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಮತ್ತು ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯದ ಹಾದಿ ಬಿಜೆಪಿಯವರಿಗೆ ಅಪಥ್ಯ ಏಕೆಂದರೆ ಸುಳ್ಳೇ ಅವರ ಮನೆದೇವರು!ಅಂದಹಾಗೆ,ದರ ಏರಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ತಡೆಹಿಡಿದಿದೆ ಎಂಬ ಸುದ್ದಿ ಬಂದಿದೆ, ದರ ಏರಿಕೆಯ ವಿಷಯವು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅನುಗುಣವಾಗಿ ನಡೆಯುತ್ತದೆ ಎಂಬುದಕ್ಕೆ ಪುರವೆಯಲ್ಲವೇ ಇದು ?






















