Home ಜಿಲ್ಲೆ ಮೆಥೋಡಿಸ್ಟ್ ಚರ್ಚ್ ಕೌಳೂರು ಗ್ರಾಮದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬ ಆಚರಣೆ

ಮೆಥೋಡಿಸ್ಟ್ ಚರ್ಚ್ ಕೌಳೂರು ಗ್ರಾಮದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬ ಆಚರಣೆ

ಯಾದಗಿರಿ:ಏ.೬: ಸಮೀಪದ ಕೌಳೂರು ಗ್ರಾಮದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬವನ್ನು ಈ ವರ್ಷ ವಿಜ್ರಮಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಗ್ರಾಮದ ವರ ವಲಯದಲ್ಲಿರುವ ರೆಡ್ಡಪ್ಪ (ಸಾಮುವೆಲ್) ಅವರ ಹೊಲದಲ್ಲಿ ಬೆಳಗಿನ ಜಾವ ಸೂರ್ಯೋದಯ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ೫ ಗಂಟೆಯಿAದಲೇ ಭಕ್ತರು ತಮ್ಮ ಮನೋಭಿಲಾಷೆಗಳೊಂದಿಗೆ ಕ್ಯಾಂಡಲ್ ಮೊಂಬತ್ತಿಗಳನ್ನು ಹಚ್ಚಿ ಹರಿಕೆಗಳೊಂದಿಗೆ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳು ಯೇಸು ಕ್ರಿಸ್ತನ ಪುನರುತ್ಥಾನವನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಪ್ರಾರ್ಥನೆ ಮುಗಿದ ನಂತರ ಭಕ್ತರು ಅಲ್ಪಾಹಾರವನ್ನು ಸ್ವೀಕರಿಸಿ, ವಾದ್ಯಗಳನ್ನು ಬಾರಿಸುತ್ತಾ ದೇವರ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳು ವಿಶೇಷವಾಗಿ ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಹಬ್ಬದ ಉಲ್ಲಾಸವನ್ನು ಹೆಚ್ಚಿಸಿದರು. ಗ್ರಾಮವೇ ಸಂತೋಷ ಮತ್ತು ಭಕ್ತಿಭಾವದಿಂದ ಕಂಗೊಳಿಸಿತು.
ನAತರ ಸರ್ವ ಭಕ್ತಾದಿಗಳು ಹೊಲದಿಂದ ಚರ್ಚಿಗೆ ಆಗಮಿಸಿ ಪ್ರಾರ್ಥನೆಯ ಮೂಲಕ ಮೊದಲ ಹಂತದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಮಧ್ಯಾಹ್ನ ೩ ಗಂಟೆಗೆ ಪುನಃ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊAಡಿದ್ದು, ಸಂಜೆ ೭:೦೦ ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಮಕ್ಕಳು ಸ್ಪೆಷಲ್ ಸಾಂಗ್‌ಗಳನ್ನು ಹಾಡುವುದರ ಜೊತೆಗೆ ಬೈಬಲ್ ವಾಕ್ಯಗಳನ್ನು ಓದಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬವನ್ನು ಭಕ್ತಿಭಾವ ಮತ್ತು ವಿಜ್ರಮಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಘನ .ಬೋಧಕ ರೇವ್ .ಎಚ್ ಸುಭಾಷ್ .ಸುಲೇಶನ ರೇವ್ .ಎಚ್ ಸುಭಾಷ್.ದುರ್ಗಪ್ಪ ಮಸ್ಕಿ ಶರಣಪ್ಪ. ಭಾಸ್ಕರ್ ನಿಂಗಪ್ಪ.ಮೊಜೇಸ್. ಭಾಸ್ಕರ್ ಶೇಕಸಿಂಧಿ . ಶಾಂತಮ್ಮ ವಿಶ್ವನಾಥ್. ವಸಂತಮ್ಮ. ಸೋನಮ್ಮ. ಸೇರಿದಂತೆ
ಇನ್ನು ಹಲವಾರು ಸಭಿಕರು ಉಪಸ್ಥಿತರಿದ್ದರು