Home ಜಿಲ್ಲೆ ಕಲಬುರಗಿ ತಾರಾನಗರ, ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳ್ಳರ ಉಪಟಳ: ಪೊಲೀಸ್ ಗಸ್ತು ಹೆಚ್ಚಿಸಲು ಮನವಿ

ತಾರಾನಗರ, ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳ್ಳರ ಉಪಟಳ: ಪೊಲೀಸ್ ಗಸ್ತು ಹೆಚ್ಚಿಸಲು ಮನವಿ

ಜೇವರ್ಗಿ,ಅ.5-ಪಟ್ಟಣದ ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳರ ಉಪಟಳ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ ವೇಳೆಯಷ್ಟೇ ಅಲ್ಲದೆ, ಹಗಲು ಹೊತ್ತಿನಲ್ಲಿಯೇ ಸರಣಿ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಿರಂತರವಾಗಿ ಜರುಗುತ್ತಿವೆ. ಕಳೆದ ಎರಡು ತಿಂಗಳ ಅಲ್ಪಾವಧಿಯಲ್ಲೇ ಸುಮಾರು 10 ರಿಂದ 12 ಬಾರಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಸ್ಥಳೀಯ ನಿವಾಸಿಗಳನ್ನು ಕಂಗಾಲುಗೊಳಿಸಿದೆ. ಕಳ್ಳರ ಹಾವಳಿಯಿಂದಾಗಿ ಬಡಾವಣೆಯ ಸಾರ್ವಜನಿಕರು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸದಂತಾಗಿದೆ. ಮನೆಗೆ ಬೀಗ ಹಾಕಿ ಹೊರಗಡೆ ಹೋಗಲು ಜನರು ತೀವ್ರವಾಗಿ ಹೆದರುವಂತಾಗಿದೆ.
ಈ ಸರಣಿ ಕಳ್ಳತನ ಹಾಗೂ ಅಪರಾಧ ಕೃತ್ಯಗಳಿಗೆ ಕೂಡಲೇ ಕಡಿವಾಣ ಹಾಕಬೇಕೆಂದು ಆಗ್ರಹಿಸಿ, ತಾರಾನಗರ ಮತ್ತು ಮಹಾಲಕ್ಷ್ಮಿ ಬಡಾವಣೆಯ ನಿವಾಸಿಗಳು ನಿಯೋಗದೊಂದಿಗೆ ಜೇವರ್ಗಿ ಪೆÇಲೀಸ್ ಠಾಣೆಗೆ ಭೇಟಿ ನೀಡಿ ಪೆÇಲೀಸ್ ಅಧಿಕಾರಿಗಳಿಗೆ ಜಂಟಿ ಮನವಿ ಪತ್ರವನ್ನು ಸಲ್ಲಿಸಿದರು. ಬಡಾವಣೆಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಮತ್ತು ನಾಗರಿಕರ ಆಸ್ತಿ-ಪಾಸ್ತಿ ರಕ್ಷಿಸಲು ಪೆÇಲೀಸ್ ಇಲಾಖೆಯು ತಕ್ಷಣವೇ ಸೂಕ್ತ ಹಾಗೂ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.
ಬಡಾವಣೆಗಳ ಭದ್ರತೆಗಾಗಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣವೇ ‘ಡೈರಿ ಪಾಯಿಂಟ್’ (Diary Point) ಸ್ಥಾಪಿಸಬೇಕು, ರಾತ್ರಿ ವೇಳೆಯಲ್ಲಿ ಯಾವುದೇ ಲೋಪವಿಲ್ಲದೆ ನಿರಂತರವಾಗಿ ಪೆÇಲೀಸ್ ಗಸ್ತು ಪಡೆಯ (Night Patrolling) ಸಂಚಾರವನ್ನು ಹೆಚ್ಚಿಸಬೇಕು, ‘ಸಂಚಾರಿ ಬಿಟ್ ಪುಸ್ತಕ’ (Beat Book) ಇಟ್ಟು, ಮೇಲಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಸರಣಿ ಕಳ್ಳತನದ ಹಿಂದೆ ಇರುವ ಅಪರಾಧಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಹಾಗೂ ಬಡಾವಣೆಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು, ಪೆÇಲೀಸ್ ಇಲಾಖೆಯು ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ಕಳ್ಳತನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದರು.
ಮನವಿ ಸಲ್ಲಿಸುವ ಈ ಸಂದರ್ಭದಲ್ಲಿ ಪ್ರಮುಖ ವಕೀಲರಾದ ಮಲ್ಲಿಕಾರ್ಜುನ ಸೂಗೂರು, ಅಣವೀರ ಗದ್ದಗಿ, ಶಿಕ್ಷಕರಾದ ಶಿವಲಿಂಗಪ್ಪ, ಸಿದ್ದು ಪೂಜಾರಿ, ವೀರೇಶ ಹಳ್ಳಿ, ಅನಿಲ್ ಯಾಳವಾರ್, ಸಿದ್ದು ಯಾಳವಾರ್, ಈರಣ್ಣ ನರಬೋಳಿ, ಸಕ್ರಪ್ಪ ಪೂಜಾರಿ, ವೀರೇಶ ಹಿರೇಮಠ, ನಾಗರಾಜ ವಿ.ಟಿ, ರಾಜು ಮುದ್ದಡಗಿ ಸೇರಿದಂತೆ ಬಡಾವಣೆಯ ಹಲವಾರು ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.