Home ಜಿಲ್ಲೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮರಣೀಯ ಬೀಳ್ಕೊಡುಗೆ

10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮರಣೀಯ ಬೀಳ್ಕೊಡುಗೆ

ಯಾದಗಿರಿ:ಫೆ.20:ಸರಕಾರಿ ಉರ್ದು ಪ್ರೌಢಶಾಲೆ ಕಡೇಚೂರನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭವನ್ನು ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಶಾಲೆಯ ಅಧ್ಯಕ್ಷತೆಯನ್ನು ಶ್ರೀಮತಿ ಜಾಹೇದ ಬೇಗಂ ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಮಾರ್ಕ್ ಕಾಟರಪಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ವಿಜ್ಞಾನ ಶಿಕ್ಷಕಿಯನ್ನು ಸನ್ಮಾನಿಸಿ, ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಯಿತು.

ವಿದ್ಯಾರ್ಥಿಗಳ ಪರವಾಗಿ ಜೋಯಾ, ರುಕಯ್ಯ ಹುಸೇನ್ ಪಟೇಲ್, ಅಲ್ಫಿಯಾ, ಆಸ್ಮಾ, ಸುಮಯ್ಯ, ತೈಸೀನ್ ಹಾಗೂ ಅಲ್ಪಿಯಾ ಬಾಲಛೇಡ್ ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡರು. ರುಕಯ್ಯ ಪಟೇಲ್, ಜೋಯಾ, ಅಲ್ಪಿಯಾ ಮತ್ತು ಆಸ್ಮಾ ಅವರ ತಂಡದಿಂದ ಬೀಳ್ಕೊಡುಗೆ ಗೀತೆಯನ್ನು ಭಾವಪೂರ್ಣವಾಗಿ ಹಾಡಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಜೋಯಾ ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಶಾಹೀರಿ ಮೂಲಕ ಶಿಕ್ಷಕರನ್ನು ಹಾಸ್ಯಮಯವಾಗಿ ಸ್ಮರಿಸಿ ಸಭಿಕರಲ್ಲಿ ಹರ್ಷ ಮೂಡಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಬ್ಬಾನಿ ಬೇಗಂ, ಮಾರ್ಕ್ ಕಾಟರಪಲ್ಲಿ, ರುಕ್ಸಾರಾ, ಮಾಲನ್ ಬೇಗಂ ಮತ್ತು ಶಾಂತ ಮೇಡಂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಜಾಹೇದ ಬೇಗಂ ಅವರು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಸಾಧಿಸಬೇಕು ಎಂದು ಪ್ರೇರೇಪಿಸಿದರು.

ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಜಾವೀದ್ ಹುಸೇನ್, ಶಿಕ್ಷಕರಾದ ವೆಂಕಟೇಶ ನಾಯಕ್ ಮಲ್ಹಾರ, ಫರ್ಹನಾಜ್, ಅಮರೇಶ್ ಕುಮಾರ್, ಶಬನಾಬೇಗಂ, ರುಕ್ಸಾರ್, ಸಾಧಿಯಾಬೇಗಂ, ಧರ್ಮ, ಆಂಜನೇಯ ಪೆÇಲ್, ಅಜೀಂ, ಮುಸ್ತಫಾ, ಸಲೀಂ ಅಹ್ಮದ್, ಮೆಹಬೂಬ್, ಜಲಾಲ ಬಿ, ಪರ್ಜಾನಾ ಬೇಗಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಫರ್ಹನಾಜ್ ಅವರು ಸುಗಮವಾಗಿ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿಗಳ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಈ ಸಮಾರಂಭವು ಎಲ್ಲರ ಮನದಲ್ಲಿ ದೀರ್ಘಕಾಲ ನೆನಪಾಗಿ ಉಳಿಯುವಂತಾಯಿತು.