ನಾಳೆಯಿಂದ ಮೆಹಬೂಬ ಸುಭಾನಿ ಉರುಸ್

ಕಲಬುರಗಿ,ಡಿ.30: ಜಿಲ್ಲೆಯ ಜೇವರಗಿ ತಾಲೂಕಿನ ಹಿಪ್ಪರಗಾ.ಎಸ್.ಎನ್. ಗ್ರಾಮದ ಸೂಫಿಸಂತ ಹಜರತ್ ಮೆಹಬೂಬ ಸುಭಾನಿ ದರ್ಗಾದ ಉರುಸ್ ನಾಳೆ( ಡಿ 31)ಯಿಂದ ಆರಂಭವಾಗಲಿದೆ.
ಡಿ.31 ರಂದು ಸರ್ಜೇಗೌಡ ಮಾಲಿ ಪಾಟೀಲ ಅವರ ಮನೆಯಿಂದ ಗಂಧೋತ್ಸವ,ಜ. 1 ರಂದು ದೀಪೆÇೀತ್ಸವ ಜ. 2 ರಂದು ಜಂಗಿ ಕುಸ್ತಿ ಜರುಗಲಿದೆ.ಜ 1 ಹಾಗೂ 3 ರಂದು ಶ್ರೀ ಹಜರತ ಮೈಬೂಬ ಸೂಬಾನಿ ನಾಟ್ಯ ಸಂಘ ಹಿಪ್ಪರಗಿ ಅವರಿಂದ ಮುಡಿಗೇರದ ಮಲ್ಲಿಗೆ ಅರ್ಥಾತ್ ಸತಿ ಅಲ್ಲ ಸಹೋದರಿ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು ಎಂದು ಸಕಲ ಸದ್ಭಕ್ತರ ವತಿಯಿಂದ ಗುರುರಾಜ ಕೆ.ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.