
ನವಲಗುಂದ,ಡಿ5: ಪಟ್ಟಣದಲ್ಲಿ ಡಿ 7 ಭಾನುವಾರದಂದು ಶಾಸಕ ಎನ್.ಎಚ್.ಕೋನರಡ್ಡಿ ಆಯೋಜಿಸಿರುವ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ರೈತ ಸಂಘಟನೆಗಳಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ರೈತರ ಸಮಸ್ಯೆಗಳಿದ್ದರೆ ಸಿಎಂ ಅವರೊಂದಿಗೆ ಚರ್ಚಿಸಲು ಅವಕಾಶ ಒದಗಿಸುವುದಾಗಿ ತಿಳಿಸಿದರು.
ಸ್ಥಳೀಯ ಪೆÇಲೀಸ್ ಠಾಣಿಯಲ್ಲಿ ರೈತರ ಮುಖಂಡರೊಂದಿಗೆ ಚರ್ಚೆ ನಡೆಸಿದ ಅವರು ರೈತ ಸಂಘಟನೆಗಳು ರೈತರ ಹಲವಾರು ಸಮಸ್ಯೆಗಳನ್ನು ಮುಂದಿಟ್ಟು ಸಿಎಂ ಸೇರಿದಂತೆ ಇತರೆ ಸಚಿವರಿಗೆ ಕಪ್ಪು ಪಟ್ಟಿ ಧರಸಿ ಪ್ರತಿಭಟನೆ ನಡೆಸಲು ಮುಂದಾಗಿರುವುದನ್ನು ಗಮನಿಸಿ ರೈತ ಮುಖಂಡದೊಂರಿಗೆ ಸಭೆ ನಡೆಸಿ ಸಿಎಂ, ಡಿಸಿಎಂ ಖಾಸಗಿ ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದು ಅವರೊಂದಿಗೆ ಹಲವಾರು ಸಚಿವರು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಯಾವುದೇಕಾರಣಕ್ಕೂ ಪ್ರತಿಭಟನೆ ನಡೆಸಲು ಅವಕಾಶವಿರುವುದಿಲ್ಲ ಹೀಗಾಗಿ ರೈತರು ತಮ್ಮ ಸಮಸ್ಯೆಗಳನ್ನು ಸಿಎಂ ಅವರ ಗಮನಕ್ಕೆ ತರುವುದಾರೆ ಸಿಎಂ ಕಾರ್ಯಾಲಯದ ಸಿಬ್ಬಂದಿಗಳೊಂದಿಗೆ ಮಾತನಾಡಿ ಸಮಸ್ಯೆಗಳ ಕುರಿತಾಗಿ ಮನವಿ ಸಲ್ಲಿಸಲು ರೈತರಿಗೆ ಅವಕಾಶ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಲೋಕನಾಥ ಹೆಬಸೂರ, ಎಸ್ಪಿ ಅವರ ಸಲಹೆಗೆ ಸಹಮತ ವ್ಯಕ್ತ ಪಡಿಸಿದರಲ್ಲದೇ ರೈತರಿಗೆ ಕಳೇದ 2 ವರ್ಷಗಳಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಬಂದಿಲ್ಲ, ಗೋವಿನಜೋಳ ಹಾಗೂ ಹೆಸರು ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಸೂಚಿಸಲಾಗಿದ್ದರೂ ಇದುವರೆಗೂ ಹೆಸರು ಬೆಳೆ ಖರೀದಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಹೀಗಾಗಿ ಹೆಸರು ಕಾಳನ್ನು ಖರೀದಿಸಬೇಕು.
ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆಗೆ 8ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಬೇಕು ಹಾಗೂ ಕಳಸಾ ಬಂಡೂರಿ ಯೋಜನೆ ಕುರಿತಾಗಿ ಕೇಂದ್ರ ಸಚಿವರು ರೈತರೊಂದಿಗೆ ಚರ್ಚಿಸಬೇಕು ಇಲ್ಲವಾದಲ್ಲಿ ಡಿ8ರಂದು ಬೆಳಗಾವಿ ಸುರ್ವಣ ಸೌಧದ ಎದುರಿಗೆ ಪ್ರತಿಭಟನೆ ನಡೆಸಲಗುವುದೆಂದು ಎಚ್ಚರಿಸಿದರು.
ಡಿಎಸ್‍ಪಿ ಶೀವಾನಂದ ಕಟಗಿ,ಸಿಪಿಐ ರವಿ ಕಪ್ಪತ್ತನವರ.ಎಸ್‍ಐ ಜನಾರ್ಧನ.ತಹಶೀಲ್ದಾರ ಸುಧೀರ ಸಾಹುಕಾರ.ರೈತ ಮುಖಂಡರಾದ ಸುಭಾಸಚಂದ್ರಗೌಡ ಪಾಟೀಲ್,ರಘುನಾಥ ನಡುವಿನಮನಿ,ಯಲ್ಲಪ್ಪ ದಾಡಿಬಾವಿ, ಶಿರಾಜ ಧಾರವಾಡ, ನಿಂಗಪ್ಪ ಕೆಳಗೇರಿ ಸೇರಿದಂತೆ ನೂರಾರು ರೈತ ಮುಖಂಡರು ಇದ್ದರು.































