
ಬೀದರ್: ಮೇ.೨೫: ಸಂವಿಧಾನದ ೩೭೧ ಜೆ ಹೋರಾಟಗಾರರ ಸಮಾವೇಶ ಹಾಗೂ ದುಂಡು ಮೇಜಿನ ಸಭೆಯು ಭಾನುವಾರ ರಾಯಚೂರಿನಲ್ಲಿ ಜರುಗಿತು. ಈ ಸಭೆಯಲ್ಲಿ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ೩೭೧ಜೆ ಹೋರಾಟಗಾರರಾದ ಪಂಡಿತರಾವ ಚಿದ್ರಿ ಭಾಗವಹಿಸಿದ್ದರು. ಸಭೆಯಲ್ಲಿ ಒಟ್ಟು ೧೩ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಂಡು ಅವುಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳೆಂದರೆ ೩೭೧ಜೆ ವ್ಯಾಜ್ಯಗಳಿಗೆ ಸಂಬAಧಿಸಿದAತೆ ಪ್ರತ್ಯೇಕ ನ್ಯಾಯಮಂಡಳಿ ಸ್ಥಾಪಿಸಬೇಕು. ರಾಜ್ಯಮಟ್ಟದ ೩೭೧ಜೆ ಗೆ ಸಂಬAಧಿಸಿದ ವಿಭಾಗೀಯ ಕಚೇರಿಗಳನ್ನು ಕ.ಕ. ಭಾಗಕ್ಕೆ ವರ್ಗಾಯಿಸಬೇಕು. ಮೀಸಲಾಗಿ ಅನ್ವಯ ಮಾಡಿಕೊಳ್ಳದ ಕಚೇರಿಗಳನ್ನು ಗುರುತಿಸಿ ಅಂತಹ ಸ್ಥಳದಲ್ಲಿ ಶೇ. ೮ ಮೀಸಲಾತಿ ಅನುಷ್ಠಾನ ಮಾಡಬೇಕು. ರಾಜ್ಯದ ಸರ್ಕಾರಿ ವಿ.ವಿ. ಗಳಲ್ಲಿ ವಿವಿಧ ಕೋರ್ಸಗಳಿಗಾಗಿ ವಿದ್ಯಾರ್ಥಿಗಳಿಗೆ ೩೭೧ಜೆ ಮೀಸಲಾತಿ ಒದಗಿಸಬೇಕು. ಕ.ಕ. ಭಾಗದಲ್ಲಿ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ೪೦ ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಶಾಲೆಗಳಲ್ಲಿ ಸೇವೆಗಾಗಿ ಪ್ರತ್ಯೇಕ ಪರಿಚಾರಕರನ್ನು ನೇಮಕ ಮಾಡಿಕೊಳ್ಳಬೇಕು. ಕೆಪಿಎಸ್ ಶಾಲೆಗಳನ್ನು ಕೈಬಿಟ್ಟು, ಸದ್ಯ ಅವುಗಳಿಗೆ ನೀಡುತ್ತಿರುವ ಕ.ಕ.ಭಾಗದ ಅನುದಾನ ಕಡಿತಗೊಳಿಸಬೇಕು. ರಾಜ್ಯದಲ್ಲಿ ಕ.ಕ.ಭಾಗ ಅತ್ಯಂತ ಹಿಂದುಳಿದಿದೆ. ಸಮಗ್ರ ಅಧ್ಯಯನ ನಡೆಸಿ ಮುಂದಿನ ೧೦ ವರ್ಷಗಳ ವಿಸ್ತೃತ ಯೋಜನಾ ವರದಿ ತಯಾರಿಸಿ ಅಭಿವೃದ್ಧಿ ಮಾಡಬೇಕು. ಯರಮರಸ್ ಶಾಖೋತ್ಪನ್ನ ಕೇಂದ್ರದ ನೇಮಕಾತಿಯಲ್ಲಿ ೩೭೧ಜೆ ಮಕ್ಕಳಿಗೆ ಅನ್ಯಾಯವಾಗಿದೆ. ಕೂಡಲೇ ಉದ್ಯೋಗ ನೀಡಬೇಕು ಎಂಬಿತ್ಯಾದಿ ನಿರ್ಣಯಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಇವುಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಪಂಡಿತರಾವ ಚಿದ್ರಿ ತಿಳಿಸಿದ್ದಾರೆ. ಇದೇ ವೇಳೆ ಬೀದರನ ಹೋರಾಟಗಾರರಾದ ಅನಿಲಕುಮಾರ ಬೆಲ್ದಾರ್ ಮತ್ತು ವಿನಯ ಮಾಳಗೆ ಸೇರಿದಂತೆ ರಾ???ಯದ ವಿವಿಧ ಕಡೆಗಳಿಂದ ಆಗಮಿಸಿದ ೩೭೧ಜೆ ಹೋರಾಟಗಾರರು ಉಪಸ್ಥಿತರಿದ್ದರು.



























