ಮೀನಾಕ್ಷಿ ಬಾಳಿ ಮತ್ತು ಸುಜಾತಾ ಚಲವಾದಿ ಅವರಿಗೆಲೇಖಕಿಯರ ಸಂಘದ ದತ್ತಿನಿದಿ ಪ್ರಶಸ್ತಿ

ಕಲಬುರಗಿ:ಸೆ.2: ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕಿ, ಚಿಂತಕಿ ಡಾ. ಮೀನಾಕ್ಷಿ ಬಾಳಿ ಅವರ ‘ವಚನ ನಿಜದರ್ಶನ’ ಕೃತಿಗೆ ಶ್ರೀ ವಿಜಯಕಲಕೋಟಿ ಪ್ರಶಸ್ತಿ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಅಧ್ಯಯನ ಮಂಡಳಿ ಸದಸ್ಯೆ ಡಾ. ಸುಜಾತಾ ಚಲವಾದಿ ಅವರ ‘ಲಚಮವ್ವ ಮತ್ತು ಇತರ ಕತೆಗಳು’ ಕಥಾ ಸಂಕಲನಕ್ಕೆ ತ್ರಿವೇಣಿ ದತ್ತಿ ನಿಧಿಯ ಪ್ರಥಮ ಬಹÅಮಾನ ಲಭಿಸಿದಕ್ಕೆ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ. ಎಚ್.ಟಿ. ಪೆÇೀತೆ, ಸಂದರ್ಶಕ ಪ್ರಾಧ್ಯಾಪಕರು ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ್ ಹಾಗೂ ಕನ್ನಡ ಅಧ್ಯಯನ ಮಂಡಳಿಯ ಎಲ್ಲ ಸದಸ್ಯರು ಹಾಗೂ ಉಪನ್ಯಾಸಕ ಬಳಗ ಮತ್ತು ವಿದ್ಯಾರ್ಥಿಗಳು ಇಬ್ಬರೂ ಲೇಖಕಿಯರಿಗೆ ಅಭಿನಂದಿಸಿದ್ದಾರೆ.