ಗಣೇಶಮೂರ್ತಿ ವಿಸರ್ಜನೆ ಕಲ್ಯಾಣಿಗೆ ಮೇಯರ್ ಭೇಟಿ

ಕಲಬುರಗಿ,ಆ.28: ಮಹಾಪೌರರಾದ ವರ್ಷಾ ರಾಜೀವಜಾನೆ ಅವರು ಗಣೇಶ ಮೂರ್ತಿಗಳ ವಿಸರ್ಜನೆಯ ಕಲ್ಯಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ,ಗಣೇಶಮೂರ್ತಿಗಳ ವಿಸರ್ಜನೆಗಾಗಿ ಪಾಲಿಕೆಯಿಂದ ಎಲ್ಲ ವ್ಯವಸ್ಥೆ ಮಾಡಲಾಗಿದೆ. 2 ಎಲ್‍ಇಡಿ ಪರದೆಗಳು,20 ಕೌಂಟರ್‍ಗಳು,ಕ್ರೇನ್‍ಗಳ ವ್ಯವಸ್ಥೆ ಇದ್ದು, 80 ರಿಂದ 100 ಜನ ಪೌರ ಕಾರ್ಮಿಕರು,ಪಾಲಿಕೆ ಆರೋಗ್ಯ ನಿರೀಕ್ಷಕರು,ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಕಲಬುರಗಿ ನಾಗರಿಕರು ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳಾದ ಅಭಯಕುಮಾರ್,ಬಾಬುರಾವ ಮೇಲಿನಕೇರಿ,ಪರಿಸರ ಇಂಜಿನಿಯರ್ ಸೇರಿದಂತೆ ಪಾಲಿಕೆ ಅಧಿಕಾರಿ ಸಿಬ್ಬಂದಿಗಳು ಇದ್ದರು.