ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ:ಗಬ್ಬೂರು

ಸೈದಾಪುರ:ಜ.೨೯:ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿವುಕುಮಾರ ವಿದ್ಯಾರ್ಥಿಯ ಸಾಧನೆ ಇನ್ನೂ ಹೆಚ್ಚಾಗಲಿ ಎಂದು ಸಿಆರ್‌ಪಿ ಲಿಂಗಾರೆಡ್ಡಿ ಗಬ್ಬೂರ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ಶಿವುಕುಮಾರ ತಾಯಪ್ಪ ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿದರು. ಗ್ರಾಮೀಣ ಭಾಗದ ಈ ವಿದ್ಯಾರ್ಥಿಯ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಚಿತ್ರಕಲಾ ಶಿಕ್ಷಕ ಶಿವುಕುಮಾರ ಬಂಡಿ, ಹಿರಿಯ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಳ, ವಿಶ್ವನಾಥರೆಡ್ಡಿ ಪಾಟೀಲ, ಬಿ.ಅರ್.ನಾಯಕ, ಸತೀಶ ಪರ‍್ಮಾಂ, ಹೊನ್ನಪ್ಪ ಸಗರ ಸೇರಿದಂತೆ ಇತರರಿದ್ದರು.