Home ಜಿಲ್ಲೆ ಈಶ್ವರನ ಕೃಪೆಯಿಂದ ಮಳೆ, ಬೆಳೆಯಿಂದ ಸಮೃದ್ದಿಯಾಗಲಿ

ಈಶ್ವರನ ಕೃಪೆಯಿಂದ ಮಳೆ, ಬೆಳೆಯಿಂದ ಸಮೃದ್ದಿಯಾಗಲಿ

ಕಮಲನಗರ : ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಶ್ರಾವಣ ಮಾಸದ 2ನೇ ಸೋಮವಾರ ಮಡಿವಾಳೇಶ್ವರ ಮಂದಿರಕ್ಕೆ ನೂರಾರು ಭಕ್ತರು ಭಕ್ತಯಿಂದ ದರುಶನ ಪಡೆದರು.

ಬೆಳಗ್ಗೆ ಅರ್ಚಕ ಚಂದ್ರಕಾಂತ ಸ್ವಾಮಿ ಅವರು ಮಡಿವಾಳೇಶ್ವರ ಶಿವ ಸ್ವರೂಪಿ ಲಿಂಗಕ್ಕೆ ರುದ್ರಾಭಿಷೇಕ ಮಾಡಿ ಬಿಲ್ವಪತ್ರೆ, ಹೂವು, ಉದ್ದುಕಡ್ಡಿ ಮತ್ತು ಕಾಯಿ ಕರ್ಪೂರಗಳನ್ನು ದೇವರಿಗೆ ಸಮರ್ಪಿಸಿ, ಈಶ್ವರನ ಕೃಪೆಯಿಂದ ನಾಡಿನ ರೈತ ಬೆಳೆಸಿದ ಬೆಳೆಗೆ ಸರಿಯಾಗಿ ಮಳೆ ಸುರಿದು ಬೆಳೆ ಸಮೃದ್ಧಿಯಾಗಲಿ ಎಂದು ಬೇಡಿಕೊಂಡರು.
ವಿವಿಧೆಡೆಗಳಿಂದ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಬಿಲ್ವಪತ್ರೆ, ಫಲಪುಷ್ಪ, ತೆಂಗು, ಉದ್ದುಕಡ್ಡಿ ಮತ್ತು ನೈವಧ್ಯವನ್ನು ಅರ್ಪಿಸಿದರು.

ಉದಗೀರ, ರಾಂಪುರ, ಕೊಟಗ್ಯಾಳ, ಡೋಣಗಾಂವ್, ಠಾಣಾಕುಶನೂರ್, ಸಾವಳಿ, ಬಸನಾಳ, ಕೊರ್ಯಾಳ, ಕಮಲನಗರ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವರ ದರುಶನ ಪಡೆದರು.

ಶ್ರೀ ಮಡಿವಾಳೇಶ್ವರ ಟ್ರಸ್ಟ್‍ನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ನೇತೃತ್ವದಲ್ಲಿ ಭಕ್ತರು ನೀಡಿದ ಪ್ರಸಾದವನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಯಿತು.