
ಕಲಬುರಗಿ: ಪೂಜ್ಯ ಶ್ರೀ ಕೂರಣೇಶ್ವರ ಮಹಾಸ್ವಾಮಿಗಳವರ ಅಮೂಲ್ಯ ಚಿಂತನೆಗಳು ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಒಳಗೊಂಡಿರುವ ‘ಸಮಾನವಾಗಿ ನೋಡುವುದು’ ಕೃತಿಯು ಸೆಪ್ಟೆಂಬರ್ ೩೦ರಂದು ನವದೆಹಲಿಯಲ್ಲಿ ಲೋಕಾರ್ಪಣೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ.
ಸಮಾಜದಲ್ಲಿ ಸಮಾನತೆ, ಮಾನವೀಯತೆ, ಸಹಬಾಳ್ವೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸುವಲ್ಲಿ ಈ ಕೃತಿ ಮಹತ್ವದ ಪಾತ್ರ ವಹಿಸಲಿ. ಕೃತಿಯಲ್ಲಿನ ಚಿಂತನೆಗಳು ಓದುಗರಲ್ಲಿ ಹೊಸ ವಿಚಾರಧಾರೆಗೆ ಪ್ರೇರಣೆ ನೀಡಿ, ಸಾಮಾಜಿಕ ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸಲಿ.
ಪೂಜ್ಯ ಕೂರಣೇಶ್ವರ ಮಹಾಸ್ವಾಮಿಗಳವರ ಚಿಂತನೆಗಳು ಸಮಾಜದ ಎಲ್ಲ ವರ್ಗದ ಜನರನ್ನು ಸಮಾನ ದೃಷ್ಟಿಕೋನದಿಂದ ನೋಡುವ ಮನೋಭಾವ ಬೆಳೆಸುವಂತಾಗಲಿ. ‘ಸಮಾನವಾಗಿ ನೋಡುವುದು’ ಕೃತಿಯು ಜ್ಞಾನಜ್ಯೋತಿಯಾಗಿ ಬೆಳಗಿ, ನಾಡಿನಾದ್ಯಂತ ಅಪಾರ ಓದುಗರನ್ನು ತಲುಪಿ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿ ಎಂದು ಆಶಿಸಲಾಗಿದೆ.
ಕೃತಿ ರಚಿಸಿರುವ ಪೂಜ್ಯ ಕೂರಣೇಶ್ವರ ಮಹಾಸ್ವಾಮಿಗಳವರಿಗೆ ಹಾಗೂ ಕೃತಿಯ ಲೋಕಾರ್ಪಣೆಯ ಸಂದರ್ಭದಲ್ಲಿ ಎಲ್ಲಾ ಉಪನ್ಯಾಸಕರು, ಸಾರ್ವಜನಿಕರು ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರಲಾಗಿದೆ.























