Home ಜಿಲ್ಲೆ ಕಲಬುರಗಿ ಗ್ರಾಮೀಣ ಮನೆ ಮನಕ್ಕೆ ಕಾನೂನು ಅರಿವಿನ ಜ್ಯೋತಿ ಪ್ರಜ್ವಲಿಸಲಿ:ಹಣಮಂತರಾಯ ಅಟ್ಟೂರ

ಗ್ರಾಮೀಣ ಮನೆ ಮನಕ್ಕೆ ಕಾನೂನು ಅರಿವಿನ ಜ್ಯೋತಿ ಪ್ರಜ್ವಲಿಸಲಿ:ಹಣಮಂತರಾಯ ಅಟ್ಟೂರ

ಕಲಬುರಗಿ: ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಗ್ರಾಮೀಣ ಮಟ್ಟದಲ್ಲಿ ಕಾನೂನಿನ ಉಚಿತ ಅರಿವು ಹಾಗೂ ನೆರವಾಗಬೇಕೆಂಬ ಉದ್ದೇಶದಿಂದ ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತಿಯಲ್ಲಿ ಒಬ್ಬೊಬ್ಬ ವಕೀಲರನ್ನು ನೇಮಕ ಮಾಡಿ ಕಾನೂನು ಅರಿವು ಮೂಡಿಸುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪೆನಲ್ ವಕೀಲರಾದ ಹಣಮಂತರಾಯ ಅಟ್ಟೂರ ಹೇಳಿದರು. ಆಲಗೂಡ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸರ್ವರ ಮನ, ಮನೆಗೆ ಕಾನೂನಿನ ಜ್ಯೋತಿ ಹಚ್ಚಿ ಬೆಳಗುವದರೊಂದಿಗೆ ಎಲ್ಲರ ಬಾಳು ಬೆಳಕಾಗಲಿ ಎಂಬ ಸಂಕಲ್ಪದೊಂದಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಟ್ಟೂರ ಹೇಳಿದರು. ವೇದಿಕೆಯ ಮೇಲೆ ಶಾಲೆಯ ಮುಖ್ಯ ಗುರುಗಳಾದ ಮೀನಾಕ್ಷಿ ಗುಂಡುಗುರ್ತಿ, ಶಿಕ್ಷಕರಾದ ಅನ್ನಪೂರ್ಣ ಮೂಡಬಿ, ಅನಸೂಯಾ ಎಚ್., ಗುಂಡಮ್ಮ ಸೂಗೂರ, ಸುರೇಖಾ ವರ್ಮಾ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು