
ಕೆಂಭಾವಿ:ಮೇ.3:ಶರಣರನಾಡು ಎಂದೇ ಖ್ಯಾತಿ ಪಡೆದ ಪಟ್ಟಣ ಭಾವೈಕ್ಯತೆಯ ನಾಡಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಎಂಬ ಯಾವದೇ ಬೇಧ ಭಾವ ಇಲ್ಲ. ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ ಎಂದು ವಲಯದ ಸಿಆರ್‍ಪಿ ಬಂದೇನವಾಜ ನಾಲತವಾಡ ಹೇಳಿದರು.
ಪಟ್ಟಣದ ಬಾಬುಗೌಡ ಮಾಲಿಪಾಟೀಲರ ನಿವಾಸದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಮುಸ್ಲಿಂ ಬಾಂಧವರ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಮಿನಿ ಭಾರತ ನೋಡುಬಹುದೆಂದರೆ ಅದು ನಮ್ಮ ಪಟ್ಟಣದಲ್ಲಿ ಮಾತ್ರ. ಎಲ್ಲ ಜಾತಿ ಧರ್ಮದವರು ಏಕತೆಯಿಂದ ಒಗ್ಗಾಟ್ಟಾಗಿದ್ದಾರೆ. ಯಾವದೇ ಧಾರ್ಮಿಕ ಕಾರ್ಯಕ್ರಮವಿದ್ದರೂ ಎಲ್ಲರೂ ಸೇರಿ ಮಾಡುವ ಸಂಪ್ರದಾಯವಿದೆ. ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ನಾಲ್ಕು ಪರಿವಾರದವರಿಗೆ ಶುಭವಾಗಲಿ ಎಂದು ಹರಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಬುಗೌಡ ಮಾಲಿಪಾಟೀಲ ಮಾತನಾಡಿ, ಮುಂಚಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರು ಸಹೋದರರಂತೆ ವಾಸಿಸುತ್ತಿದ್ದೆವೆ. ಪವಿತ್ರ ಹಜ್ ಯಾತ್ರೆ ಮುಸ್ಲಿಂ ಬಾಂಧವರಿಗೆ ಒಂದು ಅವಿಸ್ಮರಣೀಯ ಸಮಯ. ಯಾತ್ರೆ ಕೈಗೊಳ್ಳುತ್ತಿರುವ ಮೌಲಾನಾ ಗಾಲಿಬಖಾನ್ ಇನಾಮಾದಾರ, ರಫೀಕ ವಡಕೇರಿ, ಮಹಿಮೊದಸಾಬ ವಡಕೇರಿ, ಗುಡುಸಾಬ (ಅಬ್ದುಲ ರಜಾಕ) ಹವಲ್ದಾರ ಹಾಗೂ ಅವರ ಪರಿವಾರದವರು ಈ ಅವಿಸ್ಮರಣೀಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಹೇಳಿದರು.
ಮೌಲಾನಾ ಗೌಸ್ ಮಾತನಾಡಿ ಪವಿತ್ರ ಹಜ್ ಯಾತ್ರೆ ಹಾಗೂ ಭಾವೈಕ್ಯತೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಹಮೀದ್ ಮೌಲಾನಾ, ಸಾಹೇಬಲಾಲ ಆಂದೇಲಿ, ಬಸವಂತ್ರಾಯಗೌಡ ಮಾಲಿಪಾಟೀಲ, ರಮೇಶ ಸೊನ್ನದ, ಸಂಗಣ್ಣ ತುಂಬಗಿ, ಮಹಿಪಾಲರೆಡ್ಡಿ ಡಿಗ್ಗಾವಿ, ಮಲ್ಲನಗೌಡ ಪಾಟೀಲ, ಶಿವು ಮಾಲಿಪಾಟೀಲ, ಭೀಮನಗೌಡ ಕಾಚಾಪುರ, ಗುರುಮೂರ್ತಿ ಪತ್ತಾರ, ಶ್ರೀಶೈಲ ಆಲ್ದಾಳ, ಬಸವರಾಜ ತಳವಾರ, ಆರೀಫ್ ಖಾಜಿ, ನಂದಪ್ಪ ಕವಲ್ದಾರ, ಹಳ್ಳೆಪ್ಪ ಕವಲ್ದಾರ, ಸುಗುರಯ್ಯ ಇಂಡಿ, ಬಸನಗೌಡ, ಅಂಬರೀಶ, ಚಂದ್ರು, ಇಲಿಯಾಸ ವಡಕೇರಿ, ಉಮೇಶರೆಡ್ಡಿ, ಬಂದೇನವಾಜ, ದಸ್ತಗೀರ, ಆರೀಫ್ ಸೇರಿದಂತೆ ಅನೇಕರಿದ್ದರು.






















