ವಾಲ್ಮೀಕಿ ವಿಚಾರಧಾರೆಗಳು ವಿಶ್ವದಾದ್ಯಂತ ಪಸರಿಸಲಿ

ಮುಳಬಾಗಿಲು, ಅ.೮- ರಾಮ ರಾಜ್ಯದ ಕಲ್ಪನೆಯ ಜನಕ ಆದ್ಮಾತ್ಮಿಕ ಜ್ಞಾನವನ್ನು ದಯಪಾಲಿಸಿದ ಮಹರ್ಷಿ ವಾಲ್ಮಿಕಿಯ ವಿಚಾರಗಳು ವಿಶ್ವಾದ್ಯಂತ ವಿಸ್ತಿರಿಸಲಿ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಶಯ ವ್ಯಕ್ತಪಡಿಸಿದರು.


ನಗರದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಮಾತನಾಡಿದ ರವರು ಒಂದು ಕಾಲಕ್ಕೆ ದುಷ್ಟವೆನಿಸಿ ಬಳಿಕ ಇಷ್ಟ ಕಾಮ್ಯಾರ್ಥ ಪೂರೈಸುವ ಪುರುಷೋತ್ತಮನ ದಾಸಾನು ದಾಸರಾಗಿ ಇಡೀ ಜಗತ್ತಿಗೆ ಶ್ರೀ. ರಾಮಾಯನ ದಶನಃ ಎನ್ನುವ ಉತ್ಕುರ್ಷ ಕೃತಿ ನೀಡಿದ ಮಹರ್ಷಿ ವಾಲ್ಮಿಕಿ ಜೀವನ ಕೇವಲ ಇವತ್ತಿನ ರಾಜಕಾರಣಿಗಳಿಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುತ್ತದೆ ಎಂದು ಕೂಲಿ ಕಾರ್ಮಿಕರಿಗೆ ಮಹರ್ಷಿಯ ಜೀವನ ಚರಿತ್ರೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.


ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಮಹರ್ಷಿರವರ ಆದರ್ಶವನ್ನು ಪ್ರತಿಯೊಬ್ಬರು ಅಧಿಕಾರವನ್ನು ಧರ್ಮದ ಹಾದಿಯಲ್ಲಿ ಪಡೆಯಬೇಕು ನ್ಯಾಯ, ನಿಷ್ಠೆ, ಪ್ರಮಾಣಿಕತೆಯಿಂದ ಅಧಿಕಾರ ನಡೆಸಿ ವಾಲ್ಮಿಕಿ ಬಯಸಿದ ರಾಮರಾಜ್ಯ ಕಟ್ಟಬೇಕು ಇಲ್ಲದಿದ್ದರೆ ಅಧಿಕಾರದಲ್ಲಿ ಇರುವವರು ಅಧಿಕಾರ ಬಿಟ್ಟು ತೊಲಗಬೇಕೆಂದು ಜನಪ್ರತಿನಿದಿಗಳಿಗೆ ಮನವರಿಕೆ ಮಾಡಿದರು.


ಶ್ರೀ ವಾಲ್ಮಿಕಿ ಮಹರ್ಷಿಯ ದಿನದಂದು ಸರ್ಕಾರ ಇಂದಿನ ಯುವ ಪೀಳಿಗೆಗೆ ಯುವರ ಚರಿತ್ರೆ ಆದರ್ಶವಾಗಬೇಕಾದರೆ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ನಿರ್ದಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಕಾರ್ಯಕ್ರಮದಲ್ಲಿ ಹೆಬ್ಬಣಿ ಆನಂದರೆಡ್ಡಿ, ರಾಜೇಶ್, ಪಾರುಕ್‌ಪಾಷ, ಬಂಗಾರಿ ಮಂಜು, ಸುನಿಲ್ ಕುಮಾರ್, ನಾಗರಾಜ್, ಮಂಜುನಾಥ್, ಗೀರೀಶ್, ಪುತ್ತೇರಿ ರಾಜು, ಜುಬೇರ್‌ಪಾಷ, ಶೈಲಜ, ರಾಧ, ಶೊಭ, ಸುಗುಣ, ಶಿಲ್ಪ, ಮುಂತಾದವರಿದ್ದರು.