
ಕಮಲನಗರ:ನ.೪:ಕನ್ನಡ, ಕನ್ನಡತನ ಮತ್ತು ಕನ್ನಡದ ನೆಲ-ಜಲ-ಗಾಳಿಯ ರಕ್ಷಣೆ ಮತ್ತು ಏಳಿಗೆಗಾಗಿ ಕನ್ನಡಿಗರು ಬಲಿದಾನಕ್ಕೂ ಸಿದ್ಧರಾಗಬೇಕು. ನಡೆ-ನುಡಿಯಲ್ಲಿ ಕನ್ನಡ ಭೋರ್ಗರೆಯಬೇಕು. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್‌ಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದು ಶಾಂತಿವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಾಜಿ ಆರ್.ಎಚ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ಕುರಿತು ಪ್ರೀತಿ ಮತ್ತು ಅಭಿಮಾನ ಮೂಡಿಸಿಕೊಳ್ಳದಿದ್ದರೆ, ಕನ್ನಡ ಉಳಿಸುವುದು ಕಷ್ಟ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿ ಹೊಂದಿದವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ಎಷ್ಟೇ ನಮ್ಮ ಮೇಲೆ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಅನಿವಾರ್ಯ ಎಂಬ ಭಾವನೆಯಲ್ಲಿ ಭಾಷೆಯನ್ನು ಬೆಳೆಸಿದಾಗ ಖಂಡಿತ ಕನ್ನಡ ಉಳಿಯುತ್ತದೆ ಎಂದರು.
ತಹಸೀಲ್ದಾರ್ ಅಮಿತಕುಮಾರ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಇಒ ಹಣಮಂತರಾಯ ಕೌಟಗೆ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್‌ಐ ಆಶಾ ರಾಠೋಡ್, ಪಿಡಿಒ ಶೇಷಪ್ಪಾ, ಪ್ರೊ.ಎಸ್.ಎನ್.ಶಿವಣಕರ, ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಯಶವಂತ ಬಿರಾದಾರ, ಉಮೇಶ ಜೀರ್ಗೆ, ಧನರಾಜ ಭವರಾ, ಮಡಿವಾಳಪ್ಪ ಮಹಾಜನ, ಪ್ರಶಾಂತ ಖಾನಾಪುರೆ, ಸತೀಷ ಜೀರ್ಗೆ ಇತರರಿದ್ದರು.
ಹಣಮಂತರಾಯ ಕೌಟಗೆ ಸ್ವಾಗತಿಸಿದರು. ಉಮಾಕಾಂತ ಮಹಾಜನ ನಿರೂಪಣೆ ಮಾಡಿದರು.
೧೦ ಜನರಿಗೆ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ಪ್ರದಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೦ ಜನ ಸಾಧಕರಿಗೆ ಇದೇ ಸಂದರ್ಭದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಕಮಲನಗರದಲ್ಲಿ ಅವರ ಹೆಸರಿನಲ್ಲಿ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀನಿವಾಸ ಪಟವಾರಿ, ಪ್ರಭುರಾವ ಬಿರಾದಾರ, ಶಿವಕುಮಾರ ಸಜ್ಜನಶೆಟ್ಟಿ, ಚಂದ್ರಕಾAತ ಸಂಗಮೆ, ರಾಜಶೇಖರ ಅಜ್ಜಾ, ವಿಷ್ಣು ಶಿಂಧೆ, ಅಕ್ಷತಾ ಮುಧಾಳೆ, ರಾಜಕುಮಾರ ಬಿರಾದಾರ, ಸುಭಾಷ ಗಾಯಕವಾಡ, ವರದರಾಜ ಬಾವಗೆ.






























