
ತಾಳಿಕೋಟೆ:ಫೆ.8: ಭಾವನೆಗಳು ಇರುವದು ಹೆಣ್ಣುಮಕ್ಕಳಲ್ಲಿಯಾಗಿದೆ ಅಂತಹ ಭಾವನೆಯನ್ನು ಅರೀತುಕೊಂಡು ಉಡಿ ತುಂಬುವ ಕಾರ್ಯ ಪುರಾತನ ಕಾಲದಿಂದ ಬಂದಿದ್ದಾಗಿದೆ ಇದು ನಮ್ಮ ದೇಶದ ಸಂಸ್ಕøತಿಯ ಪ್ರತಿಕವಾಗಿದೆ ಉಡಿತುಂಬುವದು ನಮ್ಮನ್ನು ಕಾಪಾಡಲಿಕ್ಕೆ ಅಲ್ಲಾ ಇಡೀ ಮನೆತನವನ್ನು ಕಾಪಾಡುವಂತಹ ಶಕ್ತಿ ಈ ಕಾರ್ಯಕ್ರಮಕ್ಕಿದೆ ಅಂತಹ ತಾಯಿಸ್ವರೂಪದ ಹೆಣ್ಣುಮಕ್ಕಳಿಗೆ ಉಡಿ ತುಂಬಿ ಗೌರವಿಸುವಂತಹ ಕೆಲಸ ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳು ಮಾಡಿದ್ದಾರೆಂದು ಬಾಲೆಹೊಸೂರ ಭಾವೈಕ್ಯತಾ ಸಂಸ್ಥಾನ ಪೀಠ ಶಿರಹಟ್ಟಿಯ ಮನ್ ಮಹಾರಾಜ ನಿರಂಜನ್ ಜಗದ್ಗುರು ಶ್ರೀ.ಮ.ನಿ.ಪ್ರ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.
ಗುರುವಾರರಂದು ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ನೂತನ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನೂತನ ಮಠದ ಆವರಣದಲ್ಲಿ ನಡೆದ ಮಾತೃನಮನ ಉಡಿ ತುಂಬುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಸನ್ಮಾನ ಸ್ವಿಕರಿಸಿ ಆಶಿರ್ವಚನ ನೀಡಿದ ಅವರು ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳು ಗ್ರಹಸ್ಥಾಶ್ರಮದವರಾದರೂ ಕೂಡಾ ಸನ್ಯಾಶಿ ಆಶ್ರಮದ ಸ್ವಾಮಿಗಳೇಲ್ಲರೂ ಬೆನ್ನಿಗೆ ನಿಂತು ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಉದ್ಘಾಟನೆ ಮಾಡಿಸಿ ಎಲ್ಲ ಭಕ್ತರಿಗೆ ಯೋಗ ಕೊಡಿಸುವಂತಹ ಕೆಲಸ ಮಾಡಿರುವದು ಹೆಮ್ಮೆ ಪಡುವಂತಹ ವಿಷಯವಾಗಿದೆ ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳು ಸಂಘಟನಾ ಚತುರರಾಗಿದ್ದಾರೆ ಯಾರು ಮನಸ್ಸು ಶುದ್ದ ಅದ ಅವರು ಅನಕೊಂಡಿದ್ದೇಲ್ಲಾ ಆಗುತ್ತದೆ ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳಿಗೆ ಕಿಂಕರತ್ವ ಸ್ವಭಾವ ಹೊಂದಿದ್ದಾರೆಂದರು. ಕೊಡೇಕಲ್ಲಶ್ರೀಗಳ ನೇತೃತ್ವದಲ್ಲಿ ಈ ಮಠದ ಕಾರ್ಯಕ್ರಮ ಹಮ್ಮಿಕೊಂಡಿರುವದು ಯಶಸ್ವಿನ ಮೇಟ್ಟಿಲು ಆಗಿದೆ ಡಾ.ಪ್ರಭುಗೌಡರ ಸಾಮಾಜಿಕ ಕಾರ್ಯ ಮೇಚ್ಚುವಂತಹದ್ದಾಗಿದೆ ಈ ಮಾತೃ ನಮನ ಕಾರ್ಯಕ್ರಮ ಈ ದೇಶದ ಅದ್ಭುತ್ ಕಾರ್ಯದಲ್ಲಿ ಒಂದಾಗಿದೆ ಮೊದಲನೇ ಸ್ಥಾನ ತಾಯಿಗಿದೆ ಆ ತಾಯಿಯ ಮಡಿಲಲ್ಲಿ ಬೆಳೆದ ಪ್ರತಿಯೊಬ್ಬರು ಸಾಧಕರಾಗಲಿದ್ದಾರೆಂದು ಹೇಳಿದ ಅವರು ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳ ಮಾತೋಶ್ರೀ ಸಂಗಮ್ಮ ಕಾಸಯ್ಯ ಹಿರೇಮಠ ಅವರಿಗೆ ಇಡೀ ಭಕ್ತಸಮೂಹದ ವತಿಯಿಂದ ಗೌರವಿಸುವಂತಹ ಕಾರ್ಯಮಾಡಿರುವದು ಒಳ್ಳೆಯ ಕಾರ್ಯವಾಗಿದೆ ಎಂದು ನೂತನ ಮಠದ ಉದ್ಘಾಟನಾ ಕಾರ್ಯಕ್ರಮದ ಯಶಸ್ವಿಗೆ ಶುಭ ಕೊರಿದರು.
ಕಲಕೇರಿ ಹಿರೇಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಪರದೇಶಿ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಾಲಿನಿ ಪ್ರಭುಗೌಡ ಲಿಂಗದಳ್ಳಿ, ಅವರು ಮಾತನಾಡಿದರು.
ಇದೇ ಸಮಯದಲ್ಲಿ ನೂತನ ಶ್ರೀಮಠದ ಆವರಣದಲ್ಲಿ ಸೇರಿದ ಸುಮಾರು 5 ಸಾವಿರಕ್ಕೂ ಅದಿಕ ಮುತೈದೆಯರಿಗೆ ಉಡಿ ತುಂಬುವದರೊಂದಿಗೆ ಗೌರವಿಸಲಾಯಿತು.
ಇದೇ ಸಮಯದಲ್ಲಿ ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳ ಮಾತೋಶ್ರೀ ಸಂಗಮ್ಮ ಕಾಸಯ್ಯ ಹಿರೇಮಠ ಅವರಿಗೆ ಗ್ರಾಮಸ್ಥರ ವತಿಯಿಂದ ಡಾ.ಪ್ರಭುಗೌಡ ಲಿಂಗದಳ್ಳಿ, ಡಾ.ಮಾಲಿನಿ ಪ್ರಭುಗೌಡ ಅವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ, ನೂತನಮಠದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ನಾವದಗಿ ಹಿರೇಮಠದ ರಾಜಗುರು ಶ್ರೀ ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಶ್ರೀಮತಿ ವಿಣಾ ಕಾಶಪ್ಪನವರ, ಶ್ರೀಮತಿ ಸುಷ್ಮಾ ಸೋಮನಗೌಡ ಪಾಟೀಲ, ಶ್ರೀಮತಿ ಮಂಜುಳಾ ಅಮರೇಶ ಕರಡಿ, ಜಿಪಂ ಮಾಜಿ ಸದಸ್ಯೆ ಶ್ರೀಮತಿ ಗೌರಮ್ಮ ಮುತ್ತತ್ತಿ, ಶ್ರೀಮತಿ ನಾಗರತ್ನಾ ಅಶೋಕ, ಕುಮಾರಿ ಭಾಗ್ಯಶ್ರೀ ಪಾಟೀಲ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಬಸನಗೌಡ ಪಾಟೀಲ(ಚಬನೂರ), ಸೋಮನಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ನಾಗರಾಜ ಹೂಗಾರ, ಪ್ರವೀಣ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಕೊಡೇಕಲ್ಲ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನಿರೂಪಿಸಿದರು. ಮುತ್ತುಗೌಡ ಯಾಳವಾರ ವಂದಿಸಿದರು.
ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಶ್ರೀಗಳ ಪವಾಡ ಅವಿಸ್ಮರಣಿಯವಾಗಿದೆ ಅವರು ಭಕ್ತರಿಗಾಗಿ ಮಾಡಿದ ತ್ಯಾಗದ ಜೀವನ ಭಕ್ತೋದ್ದಾರವನ್ನು ಹೊಂದಿದೆ ಇವರ ನೂತನ ಮಠದ ಉದ್ಘಾಟನೆ ಅಂಗವಾಗಿ ನಮ್ಮ ಭಾರತೀಯ ಸಂಸ್ಕøತಿ ಎತ್ತಿ ಹಿಡಿಯುವಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಕ್ತರಿಗೆ ಸನ್ಮಾರ್ಗದ ದಾರಿ ತೋರಿಸಿದ ಶ್ರೀ ರಾಮಲಿಂಗಯ್ಯ ಸ್ವಾಮಿಗಳ ಕಾರ್ಯ ಮೇಚ್ಚುವಂತಹದ್ದಾಗಿದೆ.
ಜಗದ್ಗುರು ಶ್ರೀ.ಮ.ನಿ.ಪ್ರ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು



























