
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೫: ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕದ ವೀರಶೈವ ಮಠ ಮಂದಿರಗಳ, ಮಠಾಧೀಶರ ಕೊಡುಗೆ ಅಪಾರವಾದದ್ದು, ಶಿವಯೋಗ ಮಂದಿರ ಸ್ಥಾಪನೆಗೆ ಕಾರಣೀಕರ್ತರಾದ ಕುಮಾರ ಶಿವಯೋಗಿಗಳು ಕಲೆ, ಸಾಹಿತ್ಯ ಸಂಸ್ಕೃತಿ, ಉಳಿಸುವಲ್ಲಿ ಕಾರಣಿಕ ಪುರುಷರು ಎಂದು ಖ್ಯಾತ ರಂಗ ನಿರ್ದೇಶಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಲ್.ಬಿ. ಶೇಖ ಅವರು ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಕುಮಾರ ಶಿವಯೋಗಿಗಳ ೯೬ನೇ ಪುಣ್ಯ ಸ್ಮರಣೋತ್ಸವ ಹಾಗೂ ಪಂಡಿತ ಪಂಚಾಕ್ಷರ ಗವಾಯಿಗಳವರ ೧೩೪ನೇ ಜಯಂತ್ಯೋತ್ಸವದ ಧರ್ಮೋತ್ತೇಜಕ ಸಭೆಯನ್ನು ಸೊಲ್ಲಾಪುರ ರೋಡ ಶ್ರೀನಗರ ಕಾಲೋನಿಯ ಗಾನಬನದ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾಡು-ನುಡಿ ಪರಂಪರೆಗೆ ಸರಕಾರ ಯೋಜನೆ ರೂಪಿಸಿ ಕಲೆ ಕಲಾವಿರದನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕಿದೆ ಎಂದರು.
ಗುರು ಕಾರಣ್ಯ ಪಡೆವನ ಜಗವನ್ನು ಬೆಳಗಬಲ್ಲನು ಪಂಚಾಕ್ಷ ಗವಾಯಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಕವಿ ಗವಾಯಿಗಳಾದ ಪುಟ್ಟರಾಜರು ಅಂಧ- ಅನಾಥರನ್ನೊಳಗೊಂಡAತೆ ಎಲ್ಲರಿಗೂ ಅನ್ನ- ಆಶ್ರಯವಿತ್ತು ಸಂಗೀತಧಾರೆ ಎರೆದರು. ಅದೇ ಪ್ರೇರಣೆಗೊಂಡು ವಿಜಯಪುರದಲ್ಲಿಂದು ಸುಂದರವಾದ ಗಾನಬನ ನಿರ್ಮಿಸಿ ಕವಿ ಗವಾಯಿಗಳಾದ ತೋಂಟದಾರ್ಯ ಶಿರೋಳಮಠದ ಗುರುಗಳು ತ್ರಿಮೂರ್ತಿಗಳ ಮಂದಿರ ನಿರ್ಮಿಸಿ ನೂರಾರು ಸಾಧಕರಿಗೆ ಆಶ್ರಯವಿತ್ತು ಸಲುಹುತ್ತಿರುವುದು ಶ್ಲಾಘನೀಯ ಎಂದು ಹಚ್ಯಾಳ ಹಿರೇಮಠದ ಪ್ರವಚನಕಾರರು ವೇ. ಮೂರ್ತಿಗಳಾದ ವಿರುಪಾಕ್ಷಯ್ಯ ಶಾಸ್ತ್ರಿಗಳು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನನ್ನಿಧ್ಯವನ್ನು ಶ್ರಿ.ಮ.ನಿ. ಪ್ರ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿ ಮಠ ಹಾವೇರಿ ನೇತೃತ್ವವನ್ನು ಶ್ರೀ.ಮ.ನಿ.ಪ್ರ. ಮಹಾಂತ ಸ್ವಾಮಿಗಳು ವಿರಕ್ತ ಮಠ ಜೇರಟಗಿ, ಸಮ್ಮುಖವನ್ನು ಷ.ಭ್ರ.ಸದ್ಯೋಜಾತ, ರೇಣುಕಾ ಶಿವಚಾರ್ಯ ಹಿರೇಮಠ, ಮುದ್ದಡಘ ವಹಿಸಿ ಆರ್ಶೀವಚನ ನೀಡಿದರು.
























