ಮಟಕಾ:ಬಂಧನ

ಕಲಬುರಗಿ,ನ.14-ನಗರದ ಮಿಜಗುರಿ ಸ್ಮಶಾನ ಹತ್ತಿರವಿರುವ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಅಶೋಕ ಕಟಕೆ, ಶಿವಕುಮಾರ, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿ ಚನ್ನವೀರ ನಗರದ ಕಾಶಿನಾಥ ತಂದೆ ವೆಂಕಟರಾವ ರೋಡೆ (37) ಎಂಬಾತನನ್ನು ಬಂಧಿಸಿ 15,900 ರೂ.ನಗದು, ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.