
ಕಲಬುರಗಿ,ಜು.5-ನಗರದ ಪಾಯನಗಲ್ಲಿಯ ಖಬರಸ್ಥಾನದಲ್ಲಿರುವ ಗುಂಬಗ್ ಪಕ್ಕದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ, ಸಿಬ್ಬಂದಿಗಳಾದ ಅಶೋಕ, ಮೃತ್ಯುಂಜಯ, ರಾಜಕುಮಾರ, ಅಶೋಕ ಕಟಕೆ, ಯಲ್ಲಪ್ಪ, ಸುನೀಲಕುಮಾರ, ನಾಗರಾಜ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಸವರಾಜ ತಳವಾರ, ವಿನೋದ ಪಾಟೀಲ, ಜಿತೇಶ ಉಪಾಧ್ಯ ಮತ್ತು ಆರೀಫ್ ಅಹ್ಮದ್ ಎಂಬುವವರನ್ನು ಬಂಧಿಸಿ 3, 300 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣ ಮುಂದುಗಡೆಯ ಹೋಟೆಲ್ ಮುಂದುಗಡೆ ಮತ್ತು ಕೇಂದ್ರ ಬಸ್ ನಿಲ್ದಾಣದ ಮದ್ಯದ ಗೇಟ್ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಅಶೋಕ ನಗರ ಪೊಲೀಸ್ ಪಿಎಸ್‍ಐ ಶೈಲಜಾ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಶಿವಪ್ರಕಾಶ, ಮುಜಾಹಿದ್ ಕೋತ್ವಾಲ್, ಚಂದ್ರಶೇಖರ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಸವ ಕಲ್ಯಾಣದ ಅಶೋಕ ಬಿರಾದಾರ ಎಂಬಾತನನ್ನು ಬಂಧಿಸಿ 1,460 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್‍ಪೆನ್ ಮತ್ತು ದಯಾನಂದ ತಳಕೇರಿ ಎಂಬಾತನನ್ನು ಬಂಧಿಸಿ 1,540 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್‍ಪೆನ್ ಜಪ್ತಿ ಮಾಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.