
ಕಲಬುರಗಿ,ಜೂ.1-ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಬಿಜೆಪಿ ಎಂಎಲ್‍ಸಿ ಎನ್.ರವಿಕುಮಾರ್ ಅವರು ಕೀಳುಮಟ್ಟದ ಭಾಷೆ ಬಳಸಿರುವುದನ್ನು ಖಂಡಿಸಿ, ನಾಗರಿಕ ಹೋರಾಟ ಸಮಿತಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತಮಟೆ ಬಾರಿಸುವ ಮೂಲಕ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರ ಅಣುಕು ಶವ ಯಾತ್ರೆ ನಡೆಸಲಾಯಿತು.
ಪ್ರತಿಭಟನಾಕಾರರು ಪೆÇೀಸ್ಟರ್‍ಗಳನ್ನು ಪ್ರದರ್ಶಿಸಿ ಬಿಜೆಪಿ ನಾಯಕರ ವಿರುದ್ಧದ ಘೋಷಣೆ ಕೂಗಿದರು. ಬಿಜೆಪಿ ಪಕ್ಷ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕರಾದ ಬಿ.ಆರ್ ಪಾಟೀಲ್, ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಬಳಸಿದ ಭಾಷೆ ಖಂಡನೀಯ, ಅವರಿಗೆ ಮದ ಏರಿದೆ. ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಸರಕಾರ ಪಣತೊಟ್ಟರೆ, ಈ ಬಿಜೆಪಿಗರಿಗೆ ಶಾಂತಿ, ಸಹಬಾಳ್ವೆಯಲ್ಲಿ ನಂಬಿಕೆ ಇಲ್ಲ, ಅನಾವಶ್ಯಕವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿಯ ಭಾಷೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರು ಕಲಬುರಗಿಗೆ ನಿಮ್ಮನ್ನು ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಂ.ವೈ ಪಾಟೀಲ್ ಮಾತನಾಡಿ, ದಿನಾ ಒಂದು ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಸಂಸ್ಕøತಿ ಇಲ್ಲ, ಎಲ್ಲರೂ ಸಮಾಜದಲ್ಲಿ ಮನುಷ್ಯರಾಗಿ ಬಾಳಬೇಕಾದರೆ ಮೊದಲು ನಾಲಿಗೆÉ ಸ್ವಚ್ಚವಾಗಿಟ್ಟುಕೊಳ್ಳಬೇಕು, ಬಿಜೆಪಿಗರು ಸಂವಿಧಾನ ಬದಲಾವಣೆ ಮಾಡುವ ಹೇಳಿಕೆಗಳನ್ನು ನೀಡುತ್ತಾರೆ, ಎಲ್ಲಾ ಧರ್ಮ, ಜಾತಿಗಳನ್ನು ಕೂಡಿಸಿಕೊಂಡು ಹೋಗುವಂತಹ ಸಂವಿಧಾನ ಬೇರೆ ದೇಶಗಳಲ್ಲಿ ಇಲ್ಲ ಎಂದರು.
ಎನ್.ರವಿಕುಮಾರ್ ಜಾತಿ ಮುಂದಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಗಳನ್ನ ಜಿಲ್ಲಾಧಿಕಾರಿಗಳನ್ನು ನಿಂದಿಸಿದ್ದಾರೆ. ಈಗ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ. ಡಿಸಿ ಒಪ್ಪುವ ಹಾಗೆ ಕ್ಷಮೆ ಕೋರುವಂತೆ ಹೈಕೋರ್ಟ್ ತಾಕೀತು ಮಾಡಿದೆ. ಹಾಸನದ ಲೇಖಕಿ ಭಾನು ಮುಷ್ತಾಕ್ ಅವರಿಗೆ ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿ ಸಿಕ್ಕಿದೆ. ಕನ್ನಡಿಗರಾದ ನಮಗೆ ಅವರ ಬಗ್ಗೆ ಬಹಳಷ್ಟು ಗೌರವವಿದೆ. ಆದರೆ ದೇಶದ ಪ್ರಧಾನಿಯಾಗಿ ಮಹತ್ವದ ಪ್ರಶಸ್ತಿ ಬಾಚಿಕೊಂಡ ಲೇಖಕಿಯನ್ನು ಅಭಿನಂದಿಸಿಲ್ಲ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಮಾತನಾಡಿದರು.
ದಲಿತ ಮುಖಂಡ ಡಿ.ಜಿ.ಸಾಗರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದಲಿತ ಮುಖಂಡ ವಿಠ್ಠಲ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಎಂಎಲ್ಸಿ ಜಗದೇವ ಗುತ್ತೇದಾರ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ನೀಲಕಂಠರಾವ ಮೂಲಗೆ, ಸುಭಾಷ ರಾಠೋಡ್, ಲಚ್ಚಪ್ಪಾ ಜಮಾದಾರ್, ಸಂತೋಷ್ ರಾಥೋಡ್, ಮಜಹರ್ ಖಾನ್ ಆಲಂ, ಭೀಮಣ್ಣ ಸಾಲಿ, ಪವನಕುಮಾರ್ ವಳಕೇರಿ, ಅಶ್ವಿನ್ ಸಂಕಾ, ದಿಗಂಬರ ಬೆಳಮಗಿ, ಜಯಪ್ರಕಾಶ್ ಕಮಕನೂರ್, ದಿನೇಶ್ ದೊಡ್ಡಮನಿ, ಗುಂಡಪ್ಪ ಲಂಡನಕರ್, ಹಣಮಂತ ಬೋಧನಕರ್, ಅಲ್ಲಮಪ್ರಭು ದೇವರು ನಾಗೂರು, ಸುರೇಶ್ ಹಾದಿಮನಿ, ಕಿರಣ್ ದೇಶಮುಖ್, ರಾಜೀವ್ ಜಾನೆ, ರಾಜು ಕಪನೂರ್, ಮಹಾಂತೇಶ್ ಕೌಲಗಿ, ರೇವುನಾಯಕ್ ಬೆಳಮಗಿ, ಶಿವಾನಂದ್ ಹೊನಗುಂಟಿ, ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ವರಜ್ಯೋತಿ ಭಂತೇಜಿ, ವಹಾಜ್ ಬಾಬಾ, ಚಂದ್ರಿಕಾ ಪರಮೇಶ್ವರ, ರೇಣುಕಾ ಸಿಂಗೆ, ಮಹಾಂತಪ್ಪ ಸಂಗಾವಿ, ದತ್ತಾತ್ರೇಯ ಇಕ್ಕಳಕಿ, ಮಲ್ಲಪ್ಪ ಹೊಸಮನಿ, ಪ್ರಕಾಶ್ ಮೂಲಭಾರತಿ, ಲಿಂಗರಾಜ ತಾರಫೈಲ್, ದೇವೇಂದ್ರ ಸಿನ್ನೂರ್, ಸಂತೋಷ್ ಮೇಲ್ಮನಿ ಸೇರಿದಂತೆ ವಿವಿಧ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.