Home ಜಿಲ್ಲೆ ಕಲಬುರಗಿ ಫೆ.23ರಂದು ಅಫಜಲಪೂರ ತಹಸಿಲ್ದಾರರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ : ಸಂತೋಷ ತಳವಾರ

ಫೆ.23ರಂದು ಅಫಜಲಪೂರ ತಹಸಿಲ್ದಾರರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ : ಸಂತೋಷ ತಳವಾರ

ಕಲಬುರಗಿ:ಫೆ.6: ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಪ್ರವರ್ಗ- 1ರಲ್ಲಿರುವಂತಹ 88(ಊ) ನಲ್ಲಿ ಇರುವ ತಳವಾರ ಜಾತಿಯವರನ್ನು ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಸದರಿ ಪ್ರಸ್ತಾವನೆಯಂತೆ ಕೇಂದ್ರ ಸರ್ಕಾರ ಅನೇಕ ಇಲಾಖೆಗಳ ಒಪ್ಪಿಗೆ ಮೂಲಕ ರಾಜ್ಯಸಭೆಯಲ್ಲಿ ಹಾಗೂ ಲೋಕಸಭೆಯಲ್ಲಿ ಅನುಮೋದನೆಯ ನಂತರ ಸಂವಿಧಾನದ ತಿದ್ದುಪಡಿಯೋದಿಗೆ ಮಾನ್ಯ ರಾಷ್ಟ್ರಪತಿಯವರ ಅಂಕಿತದೊಂದಿಗೆ ದಿನಾಂಕ 20-02-2020 ರಂದು ಭಾರತ ಸರ್ಕಾರ ರಾಜ್ಯ ಪತ್ರವನ್ನು ಹೊರಡಿಸಿತು ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ ಹೇಳಿದರು.
ಅದರಂತೆ ಕರ್ನಾಟಕ ಸರಕಾರವು ಕೂಡ ತಳವಾರ ಜಾತಿಯನ್ನು ದಿನಾಂಕ 28- 02-2020 ಸುತ್ತೋಲೆ ಹಾಗೂ ರಾಜ್ಯ ಪತ್ರ ಹೊರಡಿಸಿ ಪರಿಶಿಷ್ಟ ಪಂಗಡ ಕ್ರಮ ಸಂಖ್ಯೆ 38 ರ ಗುಂಪಿನಲ್ಲಿ (ಓಚಿiಞಚಿಜಚಿ ಓಚಿಥಿಚಿಞ iಟಿಛಿಟuಜiಟಿg ಠಿಚಿಡಿivಚಿಡಿ ಚಿಟಿಜ ಖಿಚಿಟಚಿತಿಚಿಡಿ) ಜಾತಿಗಳನ್ನು ಸೇರಿಸಿರುತ್ತಾರೆ.
ಮುಂದುವರೆದು ಕರ್ನಾಟಕ ಸರ್ಕಾರವು ಸರ್ಕಾರಿ ಆದೇಶ ಸಂಖ್ಯೆ, ಹಿವಂಕ 20 ಬಿಸಿಎ 2022 ಬೆಂಗಳೂರು ದಿನಾಂಕ 29.10.2022 ರಂದು ಪ್ರವರ್ಗ 1ರಲ್ಲಿ 88 (ಊ) ನಲ್ಲಿನ ತಳವಾರ ಜಾತಿಯನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವಂತೆ ಆದೇಶಿಸಿ ಪರಿಶಿಷ್ಟ ಪಂಗಡ (Sಖಿ) ಪಟ್ಟಿಯಲ್ಲಿ ಸೇರ್ಪಡೆ ಮಾಡಿರುತ್ತಾರೆ.
2010-11ನೇ ಸಾಲಿನಲ್ಲಿ ಕನಾ9ಟಕ ರಾಜ್ಯದಲ್ಲಿ ಇರುವದು ಒಂದೆ ತಳವಾರ ಸದರಿ ಜಾತಿಯಲ್ಲಿ ರಾಜ್ಯದಲ್ಲಿ ಪುರುಷರು 414601, ಮಹಿಳೆಯರು 413731 ಸೇರಿದಂತೆ ಒಟ್ಟು 828333 ಜನ ತಳವಾರ ಜಾತಿಯ ಜನಸಂಖ್ಯೆ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಪುರುಷರು 14450, ಮಹಿಳೆಯರು 14350 ಒಟ್ಟು 28800 ತಳವಾರ ಜಾತಿಯ ಜನಸಂಖ್ಯೆ ಇದ್ದಾರೆ ಎಂದು ಕುಲಶಾಸ್ತ್ರೀಯ ಅಧ್ಯಯನದಲ್ಲಿ ಉಲ್ಲೆಖಿಸಲಾಗೀರುತ್ತದೆ, ಪ್ರಸ್ತುತವಾಗಿ ಕಲಬುರಗಿ ಜಿಲ್ಲೆಯಲ್ಲಿ 2025 ರಲ್ಲಿ ತಳವಾರ ಜನಸಂಖ್ಯೆ 2 ಲಕ್ಷ ಕಿಂತ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ,
ಹಿಂದಿನ ಬಿ.ಜೆ.ಪಿ ಪಕ್ಷದ ಕರ್ನಾಟಕ ಸರಕಾರ ಸರಳವಾಗಿ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಸಿಗುವಂತೆ ಮಾಡಿದ್ದರು ಆದರೆ ಇಗಿನ ಕಾಂಗ್ರೆಸ್ಸ್ ಪಕ್ಷದ ಕನಾ9ಟಕ ಸರಕಾರ ಭಾರತ ರಾಜ್ಯ ಪತ್ರ ಹಾಗೂ ಕನಾ9ಟಕ ರಾಜ್ಯ ಪತ್ರಗಳಲ್ಲಿ ಹಾಗೂ ಸರಕಾರಿ ದಾಖಲೆಗಳಲ್ಲಿ ಮತ್ತು ಕುಲಶಾಸ್ತ್ರೀಯ ಅಧ್ಯಯನದಲ್ಲಿ ಹಿಂದೂ ತಳವಾರ ಅನ್ನುವದು ಒಂದೆ ಜಾತಿ ಇದೆ ಇದು ಹೋರತುಪಡಿಸಿ ಇನ್ನೊಂದು ತಳವಾರ ಜಾತಿ ಇದೆ ಅನ್ನುವದಕ್ಕೆ ಯಾವದೆ ಆದಾರ ಹಾಗೂ ದಾಖಲೆಗಳು ಇಲ್ಲದೆ ಇರುವದು ಗೋತ್ತಿದ್ದರು ಕಾನೂನು ವಿರುದ್ಧವಾಗಿ ಅಟಲ್ ಜಿ ಜನಸ್ನೇಹಿ ಕೇಂದ್ರ ತಂತ್ರಾಶಯದಲ್ಲಿ ಮೂರು ವಿವಿಧ ತಳವಾರ್ ಜಾತಿಗಳಾಗಿ ವಿಭಜನೆ ಮಾಡಿ ಸೇರಿಸಿ ಮಾರ್ಪಾಡು ಮಾಡಿ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಪಡೆದುಕೊಳ್ಳುವಲ್ಲಿ ಗೂಂದಲ ಉಂಟ್ಟು ಮಾಡಿ ಒಂದು ಸಮುದಾಯದವನ್ನು ಮೇಚ್ಚಿಸಲು ವಿವಿಧ ಗೊಂದಲದ ಆದೇಶಗಳು ಹೋರಡಿಸಿ ನಮ್ಮ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುದರಿಂದ ನೈಜ ತಳವಾರ ಜಾತಿಯವರಿಗೆ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಮತ್ತು ಸರಕಾರಿ ಸೌಲಭ್ಯಗಳಿಗಾಗಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನಿಡದೆ ಸಂವಿಧಾನದ ಉಲ್ಲಂಘನೆ ಮಾಡುತ್ತಿರುವದರಿಂದ ಕೇಳ ಸಮುದಾಯದ ಬಡ ಜನರಿಗೆ ಹತ್ತು ಹಲವಾರು ತೊಂದರೆಗಳು ಸಮಸ್ಯೆಗಳು ಉಂಟಾಗಲು ಕರ್ನಾಟಕ ಸರಕಾರ ವಿವಿಧ ಗೊಂದಲದ ಆದೇಶಗಳು ಹೋರಡಿಸಿರುವದು ಒಂದು ಕಡೆ ಆದರೆ ಕರ್ನಾಟಕ ರಾಜ್ಯದ ನೇರೆ ಜಿಲ್ಲೆಗಳಾದ ವಿಜಯಪೂರ, ಬಾಗಲಕೋಟ, ಬೆಳಗಾವಿ ಇನ್ನಿತರ ಜಿಲ್ಲೆಗಳಲ್ಲಿ ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಸರಳವಾಗಿ ನಿಡುತ್ತಿರುವಾಗ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಯಾಕೆ ನಿಡುತ್ತಿಲ್ಲಾ ಇದಕ್ಕೆ ಕಲಬುರಗಿ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿಡಿರುವ ಮೌಖಿಕ ಆದೇಶವೆ ಕಾರಣ ಅನಿಸುತ್ತಿದೆ ತಳವಾರ ಸಮಾಜದ ಜನರಿಗೆ 9 ತಿಂಗಳಿಂದ ಕಲಬುರಗಿ ಜಿಲ್ಲೆಯಲ್ಲಿ ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಮತ್ತು ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರಗಳು ನಿಡುವದು ತಡೆ ಹಿಡಿದಿರುವದು ಖಂಡಿಸಿ ಇವತ್ತೆ ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ನಿಡುವಂತೆ ಫೆ. 23 ರಂದು ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಅಫಜಲಪೂರ ಶ್ರೀ ಬಸವೇಶ್ವರ ವೃತ್ತ ದಿಂದ ಬೃಹತ್ ಪ್ರತಿಭಟನೆ ಮೇರವಣಿಗೆ ಹೋರಟು ಅಫಜಲಪೂರ ತಹಸಿಲ್ದಾರರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಲಾಗುವುದು.
ಈ ಪ್ರಟಿಭಟನೆಗೆ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಆಯಾ ಗ್ರಾಮಗಳ ತಳವಾರ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂತೋಷ ತಳವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.