ಸಾಮೂಹಿಕ ವಿವಾಹ: ಸಾಮಗ್ರಿ ವಿತರಣೆ


ನವಲಗುಂದ,ಡಿ.೪:
ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಡಿ ೭ ಭಾನುವಾರದಂದು ಆಯೋಜಿಸಿಲಾದ೭೫ ಜೋಡಿ ಸರ್ವಧರ್ಮದ ಸಾಮೂಹಿಕ ವಿವಾಹದಲ್ಲಿ ನನ್ನ ಮಗ ನವೀನಕುಮಾರ ಅವರ ಆರತಕ್ಷತೆಯನ್ನು ಕ್ಷೇತ್ರದ ಜನರ ಆಶಿರ್ವಾದದಿಂದಲೇ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.


ಬುದುವಾರ ವಧು-ವರರಿಗೆ ಮದುವೆಗೆ ಬೇಕಾಗುವ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು ೨೦೦೫-೦೬ ರಿಂದ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ ಬಂದಿದ್ದು ಸಧ್ಯ ಕ್ಷೇತ್ರದಲ್ಲಿ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಸರ್ವಧರ್ಮದ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ೭೫ ಜೋಡಿಗಳು ಮದುವೆಯಾಗಲು ನೊಂದಣಿಯನ್ನು ಮಾಡಿಕೊಂಡಿದ್ದು ಉಚಿತವಾಗಿ ಮದುವೆಯನ್ನು ಮಾಡುತ್ತಿದ್ದೇವೆ ಎಂದರು.
ಅAದಿನ ಸರ್ವಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಎಲ್ಲ ಸಚಿವರುಗಳು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಗಣ್ಯಾತಿ ಗಣ್ಯರು ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಕೂಡಾ ಪಾಲ್ಗೊಳ್ಳಲಿದ್ದು ಮುಖಂಡರು, ಕಾರ್ಯಕರ್ತರು ಈ ಅದ್ಭುತ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಸಾನಿಧ್ಯವನ್ನು ಮುರಗಯ್ಯಜ್ಜ ವೀರಕ್ತಮಠ ಹಾಗೂ ಜನಾಬ ಸಲಿಂ ಖಾಜಿ ವಹಿಸಿದ್ದರು. ಸರ್ವಧಮರ್ದ ಸಾಮೂಹಿಕ ಸಮಿತಿಯ ಅಧ್ಯಕ್ಷರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಪುರಸಭೆ ಸದಸ್ಯರಾದ ಜೀವನ ಪವಾರ, ಶಿವಾನಂದ ತಡಸಿ, ಮಂಜು ಜಾಧವ, ಅಪ್ಪಣ್ಣ ಹಳ್ಳದ, ಪರೀದಾಬೇಗಂ ಉಸ್ಮಾನಸಾಬ ಬಬರ್ಚಿ, ಹುಸೇನಬಿ ಧಾರವಾಡ, ಪ್ರಕಾಶ ಶಿಗ್ಲಿ, ಮೊದೀನಸಾಬ ಶಿರೂರ, ಹಿರಿಯರಾದ ಬಸವರಾಜ ಹರಿವಾಳದ, ಸದುಗೌಡ ಪಾಟೀಲ, ವಿಜಯಗೌಡ ಪಾಟೀಲ, ಶಿವಣ್ಣ ಹುಬ್ಬಳ್ಳಿ, ಡಿ.ಕೆ. ಹಳ್ಳದ, ಪ್ರಕಾಶಗೌಡ ಹನಮರಡ್ಡಿ, ಲಕ್ಷ÷್ಮಣ ಹಳ್ಳದ, ಆನಂದ ಹವಳಕೋಡ, ಲಕ್ಷ÷್ಮಣ ಬೆಂತೂರ, ಪ್ರಭಾಕರ ಮೋಹಿತೆ, ಶಿವಾನಂದ ಭೂಮಣ್ಣವರ, ಆರ್.ಹೆಚ್. ಕೋನರಡ್ಡಿ, ಡಿ.ಎನ್. ಪಾಟೀಲ, ಬಿ.ಎಲ್. ಆಡಕಾವ, ದೇವಪ್ಪ ರೋಣದ, ಸುಬಾಸ ದುಬ್ಬದಮಟ್ಟಿ, ತಾಜುದ್ದೀನ ಮುಲ್ಲಾನವರ, ನಾರಾಯಣ ದೇವರಡ್ಡಿ, ನಂದಿನಿ ಹಾದಿಮನಿ ಸೇರಿದಂತೆ ಮುಂತಾದ ಮುಖಂಡರು ಉಪಸ್ಥಿತಿದ್ದರು.