ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬದಂಗವಾಗಿ ಇದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಇಂಡಿ :ಜೂ.೮: ಭಾರತವು ವೈವಿದ್ಯಮಯ ದೇಶ ವಾಗಿದ್ದು ಇಲ್ಲಿ ಹಲವಾರು ಧಾರ್ಮಿಕ ಆಚರಣೆಗಳು ನಡೆಯುತ್ತವೆ ಇದು ವಿವಿಧ ಹಬ್ಬಗಳ ದೇಶ ಮತ್ತು ಅವುಗಳಲ್ಲಿ ಒಂದು ಬಕ್ರೀದ್.ಈ ಹಬ್ಬದ ಇತಿಹಾಸವು ೪೦೦ವರ್ಷ್ ಹಿಂದಿನದು. ಹಿಂದಿನ ಕಥೆಯನ್ನು ತಿಳಿದಿಲ್ಲದ ಜನರಿಗೆ ಪ್ರವಾದಿ ಅಬ್ರಹಾಂ ಅವರು ಕನಸಿನಲ್ಲಿ ದೇವರನ್ನು ಕಂಡಾಗ ಅವರು ಹೆಚ್ಚು ಇಷ್ಟಪಡುವುದನ್ನು ತ್ಯಾಗ ಮಾಡಲು ಕೇಳಿದಾಗ ಇದು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಅದರ ಬಗ್ಗೆ ಯೋಚಿಸಿದ ನಂತರ ಪ್ರವಾದಿ ತನ್ನ ಮಗ ಇಸ್ಮಾಯಿಲ್ ಅನ್ನು ತ್ಯಾಗ ಮಾಡಲು ನಿರ್ಧರಿಸಿದರು ಅಂದಿನಿAದ ಇಲ್ಲಿಯವರಿಗೂ ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂದವರು ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಬ್ಬದ ನಿಮಿತ್ಯ ಇದಾಗ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಒಬ್ಬರಿಗೊಬ್ಬರು ಅಲಾ – ಬಲ ತಗೆದುಕೊಂಡು ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಮುಪ್ತಿ ಅಬ್ದುಲ್ ರೈಮಾನ್, ಕಾರ್ಯದರ್ಶಿ ಮುನ್ನಾ ಬಾಗವಾನ್, ಹಾಗೂ ಹುಸೇನಿ ಬೇಪಾರಿ, ಮಹಿಬೂಬ್ ಅರಬ್, ಜಾವಿದ್ ಮೊಮೀನ್, ಪುರಸಭೆ ಸದಸ್ಯರು ಆಯೂಬ್ ಬಾಗವಾನ್, ಅಸ್ಲಾಂ ಕಡಣಿ, ಮುಸ್ತಕ ಇಂಡಿಕರ, ಶಬ್ಬೀರ ಖಾಜಿ, ಅಬ್ದುಲ್ ರಶೀದ್ ಅರಬ್, ಅಬ್ದುಲ್ ರಹಿಮ ಬಾಗವಾನ್, ಅಬ್ದುಲ್ ರಶೀದ್ ಮುಗಳಿ, ಶಿರ್ಫ್ ಪಟೇಲ್, ಬಸಿರ ಇನಾಮದರ್, ಪಾರುಕ್ ತುರ್ಕಿ, ಹಸನ ಮುಜವರ ಸೇರಿದಂತೆ ಹಲವಾರು ಜನ ಭಾಗಿಯಾಗಿದರು.