ಕೋಲಾರ,ಅ,೨೩-ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ನೋಮೂಲ ಪಂಡಗ ,ಊರಿನ ಗಣ್ಯರ ಸಮ್ಮುಖದಲ್ಲಿ ಪರಸ್ಪರ ಗೌರವ ಆದರದೊಂದಿಗೆ ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣನವರು ಇಂದಿನ ಪೀಳಿಗೆಗೆ ಹಬ್ಬ ಹರಿದಿನಗಳ ಯುವ ಪೀಳಿಗೆಯಿಂದ ದೂರವಾಗುತ್ತಿರುವುದನ್ನ ಮತ್ತು ದೀಪಾವಳಿ ಹಬ್ಬವು ರೈತಾಪಿ ಜನ ಕೆರೆ ಕಟ್ಟೆಗಳು ಮೈದುಂಬಿ ಹರಿಯುತ್ತಿರುವ ಈ ಸಂದರ್ಭದಲ್ಲಿ ಆಹಾರ ಸಮಸ್ಯೆ ಆಗದಂತೆ ವರ್ಗ ಬಹು ಎಚ್ಚರಿಕೆಯಿಂದ ವ್ಯವಸಾಯ ಮಾಡಬೇಕೆಂದು ತಿಳಿಸಿದರು. ಈ ಹಬ್ಬದ ಸಡಗರದಲ್ಲಿ ಊರಿನ ಪ್ರಮುಖರಾದ ಜಿ ಗೋಪಾಲ ರೆಡ್ಡಿ ನಿವೃತ್ತ ಮುಖ್ಯೋಪಾಧ್ಯಾಯ, ರತ್ನಕುಮಾರ್, ಡಾಕ್ಟರ್ ಮುನಿರಾಜ್, ಕಾಟೇರಮ್ಮ ಮಂಜುನಾಥ್, ಟಿಪಿಎಸ್ ಮಾಜಿ ಸದಸ್ಯರಾದ ಮಂಜುನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೌಂದರ್ಯ ಮಧು, ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಮಂಜುನಾಥ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಬಾಬು, ಮಾಜಿ ತಾಲೂಕ ಪಂಚಾಯಿತಿ ಸದಸ್ಯರಾದ ಗೋಪಾಲಕೃಷ್ಣ ನಾಗಮಣಿ, ವರ್ತುರ್ ಮುನಿರಾಜು, ಅಂಗಡಿ ಚಿಕ್ಕಣ್ಣ, ಮಾಜಿ ಸದಸ್ಯರಾದ ಪಾಪಣ್ಣ, ಡೈರಿ ವಿಜುಕುಮಾರ್, ಉಪನ್ಯಾಸಕರಾದ ನಾಗನಾಳ ಮುನಿಯಪ್ಪ, ಕೃಷ್ಣಮೂರ್ತಿ, ಪ್ರಕಾಶಣ್ಣ, ಊರಿನ ಪ್ರಮುಖರು ಹಬ್ಬದ ಸಡಗರಕ್ಕೆ ಸಾಕ್ಷಿಯಾದರು. ಬಸವೇಶ್ವರ ದೇವಸ್ಥಾನದ ಅರ್ಚಕರಾದ ಮಂಜುನಾಥ್ ಶಾಸ್ತ್ರಿ ಪೂಜ ಕಾರ್ಯಕ್ರಮ ನಡೆಸಿಕೊಟ್ಟರು.


























