Home ಜಿಲ್ಲೆ ಹುತಾತ್ಮ ದಿನಾಚರಣೆ

ಹುತಾತ್ಮ ದಿನಾಚರಣೆ

ಶಿರಹಟ್ಟಿ,ಏ2: ತಾಲೂಕಿನ ಕೋಗನೂರು ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗುಂಡಿಗೆ ಬಲಿಯಾದ ವೀರ ಸ್ವಾತಂತ್ರ ಹೋರಾಟಗಾರರಾದ ವೀರಯ್ಯ ಹಿರೇಮಠ ತಿರುಕಪ್ಪ ಮಡಿವಾಳ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ಅವರು ಹುತಾತ್ಮರಾಗಿ ಏಪ್ರಿಲ್ 1ಕ್ಕೆ 83 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗ್ರಾಮಸ್ಥರು ಹುತಾತ್ಮ ದಿನಾಚರಣೆಯನ್ನು ಆಚರಿಸಿದರು.


ಈ ಸಂದರ್ಭದಲ್ಲಿ ಕೋಗನೂರಿನ ಯುವ ಮುಖಂಡ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಹೋರಾಟಗಾರರ ವಂಶಸ್ಥರ ಶರಣಬಸಪ್ಪ ಚನ್ನೂರವರು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಈ ಮಹಾತ್ಮರ ಹುತಾತ್ಮ ದಿನಾಚರಣೆಯನ್ನು ಜಿಲ್ಲಾ ಆಡಳಿತ ಮತ್ತು ಸರ್ಕಾರ ಆಚರಿಸುವ ಮೂಲಕ ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರು ಬದುಕು ಅವರ ಜೀವನ ಚರಿತ್ರೆ ಮತ್ತು ದೇಶದ ಇತಿಹಾಸವನ್ನು ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಬಸವರಾಜ್ ಭರಮಣ್ಣವರ ಬಸಪ್ಪ ಮಾದನೂರು ವಿಜಯಾನಂದ ಕಮತ ಚೆನ್ನಪ್ಪ ಮಡಿವಾಳರ ಪ್ರಕಾಶ ಅಂಗಡಿ ಶಂಬುಲಿಂಗ ಹಿರೇಮಠ ಸೇರಿದಂತೆ ಹುತಾತ್ಮರ ಕುಟುಂಬದ ವಂಶಸ್ಥರು ಗ್ರಾಮಸ್ಥರು ಹಿರಿಯರು ಪಾಲ್ಗೊಂಡಿದ್ದರು.