
ಬಾದಾಮಿ,ಜ27: ನಗರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನವನ್ನು ಆಚರಿಸಲಾಯಿತು.
ಸಾಹಿತಿ ಡಾ.ಕರವೀರ ಪ್ರಭು ಕ್ಯಾಲಕೊಂಡ ಮಾತನಾಡಿ ಹುಟ್ಟಿದರೆ ಸಂಗೊಳ್ಳಿ ರಾಯಣ್ಣ ಅಂತ ಮಗ ಹುಟ್ಟಬೇಕು. ಈ ಸಮಾಜದ ಏಳಿಗೆಗಾಗಿ ನಾವು ನಮ್ಮನ್ನ ತೊಡಗಿಸಬೇಕೆಂದು ಅಂದೇ ಸಂಗೊಳ್ಳಿ ರಾಯಣ್ಣ ಸಮಾಜಕ್ಕೆ ತಿಳಿಸಿರುವನು ಸ್ವತಂತ್ರ ಸಂಗ್ರಾಮದ ಕಿಡಿಯನ್ನು ಹೊತ್ತಿಸಿ ಭಾರತ ದೇಶಕ್ಕೆ ಸ್ವತಂತ್ರ ತಂದು ಕೊಡಲು ಹೋರಾಡಿ ವೀರಮರಣ ಅಪ್ಪಿದ ಸಂಗೊಳ್ಳಿ ರಾಯಣ್ಣ ನವರು ಸಮಾಜಕ್ಕೆ ಆದರ್ಶ ಪ್ರಿಯರಾಗಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಗಿನೆಲೆ ಕನಕಪುರ ಪೀಠದ ತಿಂಥಣಿ ಶಾಖಾಮಠದ ಪೀಠಾಧಿಪತಿಗಳಾದ ಲಿಂಗೈಕ್ಯ ಶ್ರೀ ಸಿದ್ದರಾಮಯ್ಯನಂದಪುರಿ ಮಹಾಸ್ವಾಮಿಗಳಿಗೆ ನುಡಿ ನಮನಗಳನ್ನು ಹೇಳಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಾಗೂ ಸಿಂಧೂರ ಲಕ್ಷ್ಮಣ ವೃತ್ತದಲ್ಲಿ ಕ್ಯಾಂಡಲ್ ಹಚ್ಚಿ ಹುತಾತ್ಮ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮಂಜುನಾಥ ಹೊಸಮನಿ, ರಾಜ್ಯ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಹನುಮಂತ ಅಪ್ಪಣ್ಣವರ, ಮಹಾಂತೇಶ ಹಟ್ಟಿ, ವೈ.ವೈ.ದಳವಾಯಿ, ಬಿ.ಎಂ.ಕಂಬಳಿ, ಕೆ.ಬಿ.ಕೋರಣ್ಣವರ, ಮಹಾಂತೇಶ ನಾರಗಲ್, ಉಜ್ವಲ ಬಸರಿ, ಶಿವಾನಂದ ಮರಿಯನ್ನವರ, ಮುತ್ತು ಹಿಪ್ಪರಗಿ, ಯಲ್ಲಪ್ಪ ಹೆಬ್ಬಳ್ಳಿ, ಹನುಮಂತ ಹುಲ್ಲಿಕೇರಿ, ಯಲ್ಲಪ್ಪ ಶಿರೂರ, ಸುರೇಶ ಜಗ್ಗಲ, ಜಗದೀಶ ಕಮಾಟರ, ಲಕ್ಷ್ಮಣ ತೆಗ್ಗಿ, ಆರ್.ಎಫ್.ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.
























