
ಕಮಲನಗರ :ಅ.7: ತಾಲೂಕಿನ ಸಾವಳಿ ಗ್ರಾಮದಲ್ಲಿ ಬೆಳೆಸಿದ 1.50 ಲಕ್ಷ ಮೌಲ್ಯದ ಗಾಂಜಾವನ್ನು ಕಮಲನಗರ ತಾಲೂಕಿನ ಪೆÇಲೀಸ ಠಾಣೆಯ ಪೆÇಲೀಸರು ಪತ್ತೆ ಹಚ್ಚಿದ್ದಾರೆ.
ಸಾವಳಿ ಗ್ರಾಮದ ಸಂತೋಷ ತಂದೆ ನರಸಿಂಗರಾವ ಬಾಗದೆ ಈತನು ತನ್ನ ಹೊಲ ಸರ್ವೆ ನಂ 18/2 ನೇ ಹೋಲದಲ್ಲಿ ಗಾಂಜಾದಾ ಗಿಡಗಳನ್ನು ಯಾರಿಗೂ ಗೊತ್ತಿಲ್ಲದಂತೆ ಬೆಳೆಸಿರುತ್ತಾನೆ. ಖಚಿತ ಮಾಹಿತಿಯನ್ನು ಪಡೆದುಕೊಂಡು ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಶ್ರೀಕಾಂತ್ ಅಲ್ಲಾಪುರೆ, ಪಿಎಸ್‍ಐ, ಆಶಾ ರಾಠೋಡ, ಭಾಲ್ಕಿ ಮತ್ತು ಕಮಲನಗರ ರವರ ಮಾರ್ಗದರ್ಶನದಂತೆ ಪಂಚರು ಸಮುಖ ದಾಳಿ ಮಾಡಿ ಹೊಲ ಸರ್ವೆ ನಂ 18/2 ನೇದ್ದರಲ್ಲಿ ಬೆಳೆದಿರುವ ಗಾಂಜಾದ ಒಟ್ಟು 51 ಗಿಡಗಳನ್ನು ಒಟ್ಟು ತೂಕ 15 ಕೆಜಿ 100 ಗ್ರಾಂ ಆ.ಕಿ 15.10.000/-ರೂ. ಮೌಲ್ಯದ ಗಾಂಜಾದ ಗಿಡಗಳನ್ನು ಜಪ್ತಿ ಮಾಡಿಕೊಂಡು ಕಮಲನಗರ ಪೆÇಲೀಸ ಠಾಣೆ ಗುನ್ನೆ ನಂ 100/2025 ಕಲಂ 20(ಎ)(1) ಎನ್‍ಡಿಪಿಎಸ್ ಎಕ್ಷ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಆರೋಪಿ ಸಂತೋಷ ತಂದೆ ನರಸಿಂಗರಾವ ಬಾಗದೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಕಮಲನಗರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲನಗರ ಠಾಣೇಯ ಸಿಬ್ಬಂದಿಗಳಾದ ಲೋಕೇಶ್ ಇಬ್ರಾನ್, ನವನಾಥ್, ವೈಜಿನಾಥ್, ಸಿದ್ಧಲಿಂಗ, ನರೇಶ್ ,ಮಲ್ಲಿಕಾರ್ಜುನ್, ನಾಗನಾಥ್ ,ಅಂಕೋಶ್, ಮಹಾದೇವ, ಉಪಸ್ಥಿತಿಯಲ್ಲಿ ನಡೆದಿರುತ್ತದೆ.
ಗ್ರಾಮ ಲೆಕ್ಕಾಧಿಕಾರಿ ರಮೇಶ್ ಶರಣಪ್ಪ ಕಮಲನಗದ ತಾಲೂಕಿನ ತಹಶೀಲ್ದಾರಾದ ಅಮಿತ್ ಕುಲಕರ್ಣಿಯವರು ಇದ್ದರು.
ಈ ಸದರಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಪೆÇಲೀಸ ಅಧೀಕ್ಷಕರು ಬೀದರ ರವರು ಪ್ರಶಂಸ ವ್ಯಕ್ತ ಪಡಿಸಿರುತ್ತಾರೆ.






























