ವಿವಿಧ ಪಕ್ಷಗಳನ್ನು ತೊರೆದು ಹಲವು ಯುವಕರು ಬಿಜೆಪಿಗೆ ಸೇರ್ಪಡೆ

ದೇವನಹಳ್ಳಿ, ಮೇ ೨೦: ತಾಲೂಕಿನ ಕುಂದಾಣ ಹೋಬಳಿಯ ಕುಂದಾಣ ಗ್ರಾಮ ಪಂಚಾಯಿತಿ ಮತ್ತು ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಾರ್ಟಿಯ ದೇವನಹಳ್ಳಿ ಮಂಡಲ ಅಧ್ಯಕ್ಷರಾದ ಎನ್ .ಎಲ್ ಅಂಬರೀಶ್ ಗೌಡ ಮತ್ತು ಮುಖಂಡರಾದ ಬಿ.ಕೆ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಸೇರ್ಪಡೆ ಕಾರ್ಯಕ್ರಮ ಮತ್ತು ಬೂತ್ ಕಮಿಟಿ ರಚನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.


ದೇವನಹಳ್ಳಿ ಮಂಡಲ ಅಧ್ಯಕ್ಷರಾದ ಎನ್ .ಎಲ್ ಅಂಬರೀಶ್ ಗೌಡ ಮಾತನಾಡಿ ತಾಲೂಕಿನ ಕುಂದಾಣ ಮತ್ತು ಆಲೂರು ದುದ್ದನಹಳ್ಳಿಯ ಬಚ್ಚಹಳ್ಳಿ, ಸೂಲುಕುಂಟೆ, ಲಿಂಗಧೀರಹಳ್ಳಿ, ಕೊಪ್ಪಲ, ಸುಣ್ಣಘಟ್ಟ, ದಿನ್ನೂರು,ವೆಂಕಟಾಪುರ ,ಬನ್ನಿಮಂಗಲ, ಪಂಡಿತಪುರ ಸೇರಿದಂತೆ ಹಲವು ಗ್ರಾಮಗಳಿಂದ ೮೫ ಕ್ಕೂ ಹೆಚ್ಚು ಯುವಕರು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆಗಾಗಿ ನಡೆಸಿದ ಆಪರೇಷನ್ ಸಿಂಧೂರ್,ದೇಶವನ್ನು ಮುನ್ನಡೆಸುವ ಅವರ ನಾಯಕತ್ವ ಮತ್ತು ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ವಿವಿಧ ಪಕ್ಷಗಳನ್ನು ತೊರೆದು ಸೇರ್ಪಡೆಯಾಗಿದ್ದಾರೆ ಎಂದರು.


ಮುಖಂಡರಾದ ಬಿಕೆ ನಾರಾಯಣಸ್ವಾಮಿ ಮಾತನಾಡಿ ಬಿಜೆಪಿ ಎಲ್ಲಾ ಕಡೆಯಿಂದ ಪಕ್ಷಕ್ಕೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ದಲ್ಲಿ ತುಂಬಾ ಬೆಳವಣಿಗೆಗಳು ನಡೆಯುತ್ತಿವೆ. ಸೇರ್ಪಡೆಯಾದವರಿಗೆ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಪಕ್ಷದ ಬಲವರ್ಧನೆಗೆ ಈ ಸೇರ್ಪಡೆ ಪೂರಕವಾಗಬೇಕು.ಮುಂದಿನ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು, ಅದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಮುಖಂಡರಾದ ಆರ್.ಕೆ. ನಂಜೇಗೌಡ ,ಇಂಡ್ರಸ್ನಹಳ್ಳಿ ಗೋಪಿ ,ಕುಂದಾಣ ಮುನಿರಾಜು, ಗಂಗಾಧರ್ ಹಾಗೂ ೮ ಬೂತ್ ಗಳ ಅಧ್ಯಕ್ಷರುಗಳು ಹಾಗೂ ಎಲ್ಲಾ ಕಾರ್ಯಕರ್ತರು, ಯುವಕರು ಉಪಸ್ಥಿತರಿದ್ದರು..