ಒಂದೇ ಕಟ್ಟಡದಲ್ಲಿ ಹಲವು ಶಾಲೆ: ಪ್ರತಿಭಟನೆ

ಕಲಬುರಗಿ, ಆ.2: ಜಿಲ್ಲೆಯಲ್ಲಿ ಒಂದೇ ಕಟ್ಟಡದಲ್ಲಿ 2-3 ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಪರವಾನಿಗೆ ರದ್ದುಪಡಿಸುವಂತೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ
ಶಾಲಾ ಶಿಕ್ಷಣ ಇಲಾಖೆ,ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಕಡೆ ಒಂದೇ ಕಟ್ಟಡದಲ್ಲಿ 2-3 ಶಾಲೆಗಳನ್ನು ನಡೆಸುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಹಲವಾರು ಬಾರಿ ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
ನಗರದ ಶಿವಶಕ್ತಿನಗರ, ತಾಜಸುಲ್ತಾನಪೂರ ರಸ್ತೆಯಲ್ಲಿರುವ ಒಂದು ಶಾಲೆ ಕಟ್ಟಡದಲ್ಲಿ ಎರಡು ಶಾಲೆಗಳನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಆಟದ ಮೈದಾನ ಸಹ ಇಲ್ಲ.ಕಾಟನ್‍ಮಾರ್ಕೆಟ್ ಹತ್ತಿರ, ಕೃಷ್ಣನಗರದಲ್ಲಿ ಸಹ ಇಂತಹ ಶಾಲೆ ನಡೆಸಲಾಗುತ್ತಿದೆ .ಒಂದು ವಾರದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ, ಆಯುಕ್ತ ಕಛೇರಿ ಎದುರು ಉಗ್ರ ಹೋರಾಟ ನಡೆಸಲಾಗುವದು ಎಂದು ಮನವಿ ಸಲ್ಲಿಸಲಾಯಿತು
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಂದೀಪ ಭರಣಿ, ಸತೀಶ ಕಡೂಣ,ವಿಶ್ವನಾಥ ಡೇಕೂನ,ಪಪ್ಪು ಬಿದ್ದಾಪೂರ,ಅನೀಲ ಆಳಂದಕರ್,ಅವಿನಾಶ ಕಾಂಬಳೆ ಸೇರಿದಂತೆ ಹಲವರು ಪಾಲ್ಗೊಂಡರು.