Home ಜಿಲ್ಲೆ ಬೆಂಗಳೂರು ಸೇವಾ ಸಂಕಲ್ಪ ಅಭಿಯಾನದಡಿ ಹಲವು ಕಾರ್ಯಕ್ರಮ

ಸೇವಾ ಸಂಕಲ್ಪ ಅಭಿಯಾನದಡಿ ಹಲವು ಕಾರ್ಯಕ್ರಮ

Oplus_16908288

ಕೆ.ಆರ್.ಪುರ,ಸೆ.೨೮-ಸೇವಾ ಸಂಕಲ್ಪ ಅಭಿಯಾನದ ಅಡಿಯಲ್ಲಿ ಗಿಡ ನೇಡುವುದು,ಕೆರೆಸ್ವಚ್ಚತೆ, ಸ್ವಚ್ಛತಾ ಅಭಿಯಾನ,ರಕ್ತದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಲಾಗುವುದು ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.


ಕ್ಷೇತ್ರದ ವೆಂಗಯ್ಯನಕೆರೆ ಆವರಣದಲ್ಲಿ ಏರ್ಪಡಿಸಿದ್ದ ಸಸಿ ನೇಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸೇವಾ ಕಾರ್ಯಗಳ ಮೂಲಕ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ,ಅವರ ಮಾರ್ಗದರ್ಶನದಂತೆ ಸೇವೆ ಮಾಡಲಾಗುವುದು ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗುವ ಮೂಲಕ ಜನಸೇವೆ ಮಾಡುತ್ತಿದ್ದು,ಬಡವರ ಪರವಾದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತೆನೆಂದು ಭರವಸೆ ನೀಡಿದರು.


ಸೇವಾ ಅಭಿಯಾನದ ಅಡಿ ಪೌರಕಾರ್ಮಿಕರಿಗೆ ಸನ್ಮಾನ,ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮಗಳು,ದಿನಸಿ ಸಾಮಾಗ್ರಿಗಳ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ,ಮಾಜಿ ಪಾಲಿಕೆ ಸದಸ್ಯರಾದ ಅಂತೋಣಿಸ್ವಾಮಿ,ಗೀತಾವಿವೇಕಾನಂದ, ಮಂಜುಳಾದೇವಿ,ಮಂಡಲ ಉಪಾಧ್ಯಕ್ಷ ಗಂಗಧರ್,
ವಾರ್ಡನ ಅಧ್ಯಕ್ಷರಾದ ಶಿವಪ್ಪ,ಮಾಜಿ ಅಧ್ಯಕ್ಷ ರಮೇಶ್ ಗೌಡ,ಮುಖಂಡರಾದ ಕೆ.ಹೇಮಂತ್,ರವಿ,ಗಿರೀಶ್,ರಮೇಶ್,ಜೆಸಿಬಿ ಅಂತೋನಿ ಇದ್ದರು.