
ಬೀದರ : ಮೇ.27:ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ನಳ್ಳಿ 2024 – 25 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಜರುಗಿತು.
ತಾಲೂಕಿನ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಅವರು ಮಾತನಾಡಿ ಶಿಕ್ಷಣದಿಂದ, ಮಹಿಳೆಯರು ಸಮಾನತೆಯನ್ನು ಸಾಧಿಸಲು ಸ್ತ್ರೀ ಶಿಕ್ಷಣದ ಅಗತ್ಯವನ್ನು ಎತ್ತಿ ತೋರಿಸುವ ಯಾವುದೇ ಕ್ಷೇತ್ರದಲ್ಲಿ – ಕೆಲಸದ ಸ್ಥಳದಲ್ಲಿ, ರಾಜಕೀಯ ಜೀವನದಲ್ಲಿ ಅಥವಾ ಮನೆಯಲ್ಲಿ ಪುರುಷರಿಗೆ ಸಮಾನವಾಗಿ ನಿಲ್ಲಲು ಅಗತ್ಯವಿರುವ ಅದೇ ಜ್ಞಾನ, ತಮ್ಮ ಮೇಲಿನ ನಂಬಿಕೆ ಮತ್ತು ಅವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಲೆಪೇಟ್ ಪ್ರಾಚಾರ್ಯ ದಶರಥ ನಯನೂರ ಅವರು ಮಾತನಾಡಿ ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಿದೆ. ಈ ದಿಸೆಯಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಭಾರತೀಯ ಸೈನಿಕರು ಅಳವಡಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆಯು ಇಂದು ನಮ್ಮೆಲ್ಲರನ್ನು ನಿರ್ಭೀತಿಯಿಂದ ಬದುಕಲು ಕಾರಣವಾಗಿದೆ. ದೇಶದ ಗಡಿಯಲ್ಲಿ ಸೈನಿಕರು ದೇಶವನ್ನು ಕಾಪಾಡುತ್ತಿದ್ದರೆ ಎನ್ ಎಸ್ ಎಸ್ ಶಿಬಿರಾರ್ಥಿಗಳು ಕಾಲೇಜಿನ ಹಾಗೂ ತಮ್ಮ ಸುತ್ತ ಮುತ್ತಿನ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಶ್ರೀದೇವಿ ಸ್ವಾಮಿ, ಪ್ರಾಂಶುಪಾಲ ಧನರಾಜ ಬಿರಾದಾರ, ಶರಣಪ್ಪ ಮಲಗೊಂಡ, ಸವಿತಾ ಪಾಟೀಲ, ಡಾ.ಜೈಶೀಲಾ, ಡಾ.ಪೃಥ್ವಿರಾಜ, ಡಾ.ನವರಂಗ ಮಾಣಿಕರಾವ, ಗ್ರಂಥಪಾಲಕ ಡಾ.ರಾಜಕುಮಾರ, ಡಾ.ಶಿವಕುಮಾರ ಬಿರಾದಾರ, ಡಾ.ಸಂಜುಕುಮಾರ ಅಪ್ಪೆ, ಯಶವಂತ ಬಂಡೆ, ಡಾ.ಶಾಜಿಯಾ ಅಂಜುಮ, ಪಾಲಾಕ್ಷಿ, ಮಮತಾ ಧನರಾಜ್, ಡಾ.ಸುನಿಲಕುಮಾರ ಜಾಧವ, ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.