
ಲಕ್ಷೆ÷್ಮÃಶ್ವರ,ಡಿ.೨೯: ತಾಲೂಕಿನ ಸುರಣಗಿ ಗ್ರಾಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಗದಗ ಜಿಲ್ಲಾ ರೈತ ಮೋರ್ಚಾ ವತಿಯಿಂದ ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ್ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಅವರು ದೇಶದ ಇತಿಹಾಸದಲ್ಲಿ ಯಾವೊಬ್ಬ ಪ್ರಧಾನಿಯೂ ದೇಶದ ಜನರನ್ನು ಕಟ್ಟಿಕೊಂಡು ಆಡಳಿತವನ್ನು ಮಾಡಿದ್ದ ಉದಾಹರಣೆಗಳು ಇದ್ದಿರಲಿಲ್ಲ ಈಗ ನರೇಂದ್ರ ಮೋದಿಜಿ ಅವರು ಜನರನ್ನು ಕಟ್ಟಿಕೊಂಡು ಆಡಳಿತ ಮಾಡುತ್ತಿದ್ದಾರೆ ಎಂದರು.
ಅವರು ಮನ್ ಕಿ ಬಾತ್ ನಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಕೆಲಸ ಮಾಡಿದ್ದರೆ ಅದನ್ನು ಇಡೀ ದೇಶದ ಜನರ ಗಮನಕ್ಕೆ ತಂದು ಪ್ರೇರಣೆ ಮತ್ತು ಸ್ಪೂರ್ತಿಯನ್ನು ನೀಡುತ್ತಿದ್ದಾರೆ ಇದರಿಂದಾಗಿ ದೇಶದ ಯಾವುದೇ ಮೂಲೆಯಲ್ಲಿ ಯಾರೇ ಮಹತ್ ಕಾರ್ಯ ಮಾಡಿದ್ದರೆ ಅದನ್ನು ಜನರಿಗೆ ತಿಳಿಸುವ ಕೆಲಸವನ್ನು ಪ್ರಧಾನ ಮಂತ್ರಿಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದು ಜಗತ್ತಿನಲ್ಲಿ ಭಾರತ ನಾಲ್ಕನೇಯ ಅತ್ಯಂತ ಬಲಿಷ್ಠ ಆರ್ಥಿಕ ರಾಷ್ಟçವಾಗಿ ಹೊರಹೊಮ್ಮತ್ತಿದ್ದು ಇನ್ನು ಮೂರ್ನಾಲ್ಕು ವರ್ಷದಲ್ಲಿ ಮೂರನೆಯ ಪ್ರಬಲ ಆರ್ಥಿಕ ರಾಷ್ಟçವಾಗಿ ಹೊರಹೊಮ್ಮಲಿ ಇದೆ ಎಂದರು.
ಅವರು ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತ ಉದ್ಪಾದಕ ಘಟಕಗಳಿಗೆ ಸಹಾಯಧನವನ್ನು ನೀಡುತ್ತಿತ್ತು ಆದರೆ ಈಗಿನ ಸರ್ಕಾರ ರೈತ ಪರ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು ದುರ್ದೈವದ ಸಂಗತಿ ಎಂದರು.
ದೇಶದ ಪ್ರತಿಯೊಬ್ಬರು ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸುವುದರಿಂದ ಹೊಸ ಹೊಸ ಯೋಜನೆಗಳ ಮತ್ತು ಜನಸಾಮಾನ್ಯರ ಹೊಸ ಸಾಧನೆಗಳು ಪ್ರಧಾನಿಗಳ ಮೂಲಕ ದೇಶದ ಜನರಿಗೆ ತಿಳಿದು ಅದರಿಂದ ಪ್ರೇರಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳ ಮಠ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಇಟ್ಟಿಗೆ ಶಿರಟ್ಟಿ ಮಂಡಲ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ ನಾಗರಾಜ್ ಕುಲಕರ್ಣಿ ಸಣ್ಣ ವೀರಪ್ಪ ಹಳ್ಳಪ್ಪನವರ ಶಿವಪ್ರಕಾಶ್ ಮಹಾಜನ್ ಶೆಟ್ಟರ ಗಂಗಾಧರ ಮೆಣಸಿನಕಾಯಿ ತಿಮ್ಮರೆಡ್ಡಿ ಮರಡ್ಡಿ ಭೀಮಣ್ಣ ಯಂಗಾಡಿ ಅಶ್ವಿನಿ ಅಂಕಲಕೋಟಿ ಶಿವಪ್ಪ ಲಮಾಣಿ ಪುಂಡಲೀ ಕ ಲಮಾಣಿ ಫಕ್ಕಿರೇಶ್ ರಟ್ಟಿಹಳ್ಳಿ ಕುಮಾರ್ ಬೆಟಗೇರಿ ವಿಜಯ ಕುಂಬಾರ ನಾಗರಾಜ ಹಾವಳಕೇರಿ ಸಂತೋಷ ಚಕ್ರಸಾಲಿ ವಿಜಯ ಹತ್ತಿ ಕಾಳ ಎಂ ಆರ್ ಪಾಟೀಲ್ ಈರಣ್ಣ ಶಿರನಹಳ್ಳಿ ನವೀನ್ ಹಿರೇಮಠ ಜಾನು ಲಮಾಣಿ ಫಕೀ ರೇಶ ರಗಟಿ ವೀರೇಶ ಕಳ್ಳಿಹಾಳ ಸೇರಿದಂತೆ ಬೂತ್ ಮಟ್ಟದ ಅಧ್ಯಕ್ಷರು ಬಿಜೆಪಿ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

























