ಮಂಜುಳಮ್ಮಗೆ ರಾಜ್ಯಮಟ್ಟದ ಗುರು ಶ್ರೇಷ್ಠ ಪ್ರಶಸ್ತಿ

ಕೋಲಾರ,ಆ.೬- ನಗರದ ಹೊರವಲಯದಲ್ಲಿರುವ ಕುಂಬಾರಹಳ್ಳಿಯ ಸಿ ಮುನಿಸ್ವಾಮಿ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕಿ ಮಂಜುಳಮ್ಮ ಆರ್ ರಾಜ್ಯಮಟ್ಟದ ಗುರು ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪರೀಕ್ಷಾ ಸ್ಪೂರ್ತಿ ಫೌಂಡೇಶನ್ ಫೌಂಡೇಶನ್ ವತಿಯಿಂದ ಮೈಸೂರಿನಲ್ಲಿ ನಡೆದಂತಹ ಸಿಬಿಎಸ್ಸಿ ಶಾಲೆಗಳ ಕನ್ನಡ ವಿಷಯದಲ್ಲಿ ಉತ್ತಮ ಫಲಿತಾಂಶ ಕೊಟ್ಟಂತಹ ಶಿಕ್ಷಕರಿಗೆ ರಾಜ್ಯಮಟ್ಟದ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಶಿಕ್ಷಕಿ ಮಂಜುಳಮ್ಮ ಆರ್ ಅವರಿಗೆ ಪ್ರದಾನ ಮಾಡಲಾಯಿತು.


ಕುಂಬಾರಹಳ್ಳಿ ಸಿ ಮುನಿಸ್ವಾಮಿ ಪಬ್ಲಿಕ್ ಶಾಲೆಯ ಸಂಸ್ಥಾಪಕಿ ಮಂಗಮ್ಮ ಮುನಿಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಂಸದರಾದ ಎಂ. ಮಲ್ಲೇಶ್ ಬಾಬು, ಖಜಾಂಚಿ ಮಂಜುಳಾ, ಶೈಕ್ಷಣಿಕ ನಿರ್ದೇಶಕ ಮಲ್ಲಿಕಾರ್ಜುನ್, ಪ್ರಾಂಶುಪಾಲ ಸುರೇಶ್ ಮತ್ತು ಎಲ್ಲಾ ಸಹೋದ್ಯೋಗಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.